ಬೆಂಗಳೂರಿನಲ್ಲಿ ನಿನ್ನೆ ನಡೆದ ರೇವ್ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿ ಒಂದಷ್ಟು ಜನರನ್ನು ಅರೆಸ್ಟ್ ಮಾಡಿದ್ದಾರೆ. ಈ ವೇಳೆ ಆ ಪಾರ್ಟಿಯಲ್ಲಿ ತೆಲುಗು ನಟಿಯರು, ಡಿಜೆಗಳು, ರ್ಯಾಪರ್ಸ್ ಇದ್ದದ್ದು ಕಂಡು ಬಂದಿದೆ. ಆದರೆ ಆ ದಾಳಿಯಲ್ಲಿ ತೆಲುಗು ನಟಿ ಹೇಮಾ ಹೆಸರು ಕೂಡ ಕೇಳಿ ಬಂದಿತ್ತು. ಎಲ್ಲಾ ಕಡೆಗೂ ಅವರ ಫೋಟೋ ಓಡಾಡುತ್ತಾ ಇತ್ತು. ಇದೀಗ ಆ ನಟಿಯೇ ಸೋಷಿಯಲ್ ಮೀಡಿಯಾ ಲೈವ್ ಬಂದು ನಾನಲ್ಲ.. ನಾನಲ್ಲ.. ಪಾರ್ಟಿಯಲ್ಲಿ ಸಿಕ್ಕಿಬಿದ್ದಿದ್ದು ನಾನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ʻನಾನು ಆ ರೇವ್ ಪಾರ್ಟಿಗೆ ಹೋಗಿಲ್ಲ. ಹೈದ್ರಬಾದ್ ಫಾರ್ಮ್ ಹೌಸ್ ನಲ್ಲಿ ಆರಾಮವಾಗಿಯೇ ಎಂಜಾಯ್ ಮಾಡುತ್ತಾ ಇದ್ದೇನೆ. ಹೊರಗಡೆ ಹರಿದಾಡುತ್ತಿರುವ ಸುದ್ದಿ ಸುಳ್ಳುʼ ಎಂದು ನಟಿ ಹೇಮಾ ತೋಟದ ಮನೆಯಲ್ಲಿ ನಿಂತುಕೊಂಡು ವಿಡಿಯೋ ಮಾಡಿ ಬಿಟ್ಟಿದ್ದಾರೆ. ಈ ವಿಡಿಯೋ ನೋಡಿದ ಹಲವರು ಇದಕ್ಕೂ ಕಮೆಂಟ್ ಹಾಕಿದ್ದಾರೆ. ನೀವೆಳಿದ್ದು ಸುಳ್ಳು ಎಂದು ವಾದಿಸುತ್ತಿದ್ದಾರೆ.
ಇನ್ನು ತೆಲುಗು ಮಾಧ್ಯಮಗಳು ವರದಿ ಮಾಡಿರುವಂತೆ, ಪೊಲೀಸರು ರಿಲೀಸ್ ಮಾಡಿದ ವಿಡಿಯೋದಲ್ಲಿ ನಟಿ ಹೇಮಾ ಇದ್ದರು. ಆದರೆ ಈಗ ರಿಲೀಸ್ ಆದ ಮೇಲೆ ಸುಳ್ಳು ಹೇಳುತ್ತಿದ್ದಾರೆ ಎಂದು ವರದಿಯಾಗಿದೆ. ಯಾಕಂದ್ರೆ ಪೊಲೀಸರು ರಿಲೀಸ್ ಮಾಡಿರುವ ವಿಡಿಯೋದಲ್ಲಿ ಹೇಮಾ ಹಾಕಿರುವ ಡ್ರೆಸ್ ಹಾಗೂ ನಾನು ಪಾರ್ಟಿಗೆ ಹೋಗಿಲ್ಲ ಎಂದು ಹೇಳಿರುವ ವಿಡಿಯೋದಲ್ಲಿ ಹಾಕಿರುವ ಡ್ರೆಸ್ ಕೂಡ ಒಂದೇ ಇದೆ. ಹೀಗಾಗಿ ಹೇಮಾ ಬೆಂಗಳೂರಿನಲ್ಲಿಯೇ ಇದ್ದುಕೊಂಡು ವಿಡಿಯೋ ಮಾಡಿದ್ದಾರೆ ಎನ್ನಲಾಗುತ್ತಿದೆ. ನಟಿ ಹೇಮಾ ಬೆಂಗಳೂರು ಹಾಗೂ ಹೈದ್ರಾಬಾದ್ ಎರಡು ಕಡೆ ಒಂದೇ ಡ್ರೆಸ್ ನಲ್ಲಿ ಕಾಣಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಹಾಕಿಕೊಂಡಿದ್ದಾರೆ.