ಬೆಂಗಳೂರಿನಲ್ಲಿ ಭಯೋತ್ಪದನಾ ಕೃತ್ಯಕ್ಕೆ ಸಂಚು:ರುವಾಂಡಾದಲ್ಲಿ ಎಲ್‌ ಇಟಿ ಉಗ್ರ ಬಂಧನ

Most read

ನವದೆಹಲಿ: ಬೆಂಗಳೂರಿನಲ್ಲಿ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರ, ಸ್ಫೋಟಕ ಒದಗಿಸಲು ನೆರವು ನೀಡಿದ್ದ ಆರೋಪದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಇ- ತೊಯ್ಬಾದ (ಎಲ್‌ಇಟಿ) ಉಗ್ರನೊಬ್ಬನನ್ನು ಪೂರ್ವ ಆಫ್ರಿಕಾದ ರುವಾಂಡದಿಂದ ಭಾರತದ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.  ಶಂಕಿತ ಉಗ್ರ ಸಲ್ಮಾನ್ ರೆಹಮಾನ್ ಖಾನ್ ಎಂಬಾತನನ್ನು ಇಂದು ಭಾರತಕ್ಕೆ ಕರೆತರಲಾಗಿದೆ. ಬೆಂಗಳೂರಿನಲ್ಲಿ ನಡೆದ ಭಯೋತ್ಪಾದಕೆ ಚಟುವಟಿಕೆಗಳ ಹಿನ್ನೆಲೆಯಲ್ಲಿ ಇಂಟರ್‌ಪೋಲ್ ಈತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಮಹತ್ವದ ಬೆಳವಣಿಗೆಯಲ್ಲಿ ಎನ್‌ಐಎ ಮತ್ತು ಇಂಟರ್‌ಪೋಲ್  ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರನನ್ನು ಸಿಬಿಐ ಭಾರತಕ್ಕೆ ಕರೆತಂದಿದೆ.

ಭಯೋತ್ಪಾದನೆ ಸಂಬಂಧಿತ ಹಲವಾರು ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಈತ ಎನ್‌ಐಎಗೆ ಬೇಕಾಗಿದ್ದ. ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್ ಸದಸ್ಯನಾಗಿರುವ ಸಲ್ಮಾನ್, ಬೆಂಗಳೂರಿನಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗಾಗಿ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ಸ್ಫೋಟಕಗಳನ್ನು ಪೂರೈಸಲು ಸಹಾಯ ಮಾಡುತ್ತಿದ್ದ ಎಂದು ಸಿಬಿಐ ವಕ್ತಾರರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಭಯೋತ್ಪಾದನನಾ ಸಂಚು ರೂಪಿಸಿದ್ದಕ್ಕೆ ಈತನ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) 2023ರಲ್ಲಿ ಪ್ರಕರಣ ದಾಖಲಿಸಿತ್ತು. ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡಾ ದಾಖಲಾಗಿತ್ತು. ಎನ್‌ಐಎ ಕೋರಿಕೆಯ ಮೇರೆಗೆ 2024 ಆಗಸ್ಟ್ 2ರಂದು ಇಂಟರ್‌ಪೋಲ್, ಈತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು.

ಸಿಬಿಐ ಇಂಟರ್‌ಪೋಲ್‌ ನ ನ್ಯಾಷನಲ್ ಸೆಂಟ್ರಲ್ ಬ್ಯೂರೊದ ಸಹಾಯದಿಂದ ರುವಾಂಡಾದ ರಾಜಧಾನಿ ಕಿಗಾಲಿಯಲ್ಲಿ ಸಲ್ಮಾನ್‌ನನ್ನು ಪತ್ತೆ ಹಚ್ಚಿ ಇಂದು ಭಾರತಕ್ಕೆ ಕರೆತರಲಾಗಿದೆ. ಇತ್ತೀಚೆಗಷ್ಟೇ ಇದೇ ರೀತಿಯ ಇನ್ನೆರಡು ಕಾರ್ಯಾಚರಣೆಗಳಲ್ಲಿ ಸೌದಿ ಅರೇಬಿಯಾದಿಂದ ಇಬ್ಬರು ಆರೋಪಿಗಳನ್ನೂ ಕರೆ ತರಲಾಗಿತ್ತು. 2012ರ ಗಲಭೆ ಮತ್ತು ಸ್ಫೋಟಕ ವಸ್ತುಗಳ ಪ್ರಕರಣದಲ್ಲಿ ಆರೋಪಿ ಬರ್ಕತ್ ಅಲಿ ಖಾನ್ ಬೇಕಾಗಿದ್ದ. ಈತನ ಬಂಧನಕ್ಕೆ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಈತನನ್ನು ನವೆಂಬರ್ 14ರಂದು ಸೌದಿ ಅರೇಬಿಯಾದಿಂದ ವಶಕ್ಕೆ ಪಡೆದು ಭಾರತಕ್ಕೆ ಕರೆತರಲಾಗಿದೆ.

ಅಪ್ತಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೇರಳದ ಪೊಲೀಸರಿಗೆ ಬೇಕಾಗಿದ್ದ ಆರೋಪಿ ರೈಹಾನ್ ಅರಬಿಕ್ಕಲಾಲರಿಕ್ಕಲ್ ಎಂಬಾತನನ್ನು ನವೆಂಬರ್ 10ರಂದು ಸೌದಿ ಅರೇಬಿಯಾದಿಂದ ವಶಕ್ಕೆ ಪಡೆಯಲಾಗಿತ್ತು. ಈತನ ವಿರುದ್ಧವೂ ಇಂಟರ್‌ ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿತ್ತು.

More articles

Latest article