ಅಧಿಕಾರದಿಂದ ತೆಗಿತೀವಿ ಅಂದ್ರೆ ಪಾದಯಾತ್ರೆಗೆ ಬೆಂಬಲ ಕೊಡ್ತಾರೆ: HDK ವಿರುದ್ಧ ಚಲುವರಾಯಸ್ವಾಮಿ ಲೇವಡಿ

Most read

ಬಿಜೆಪಿ ನೇತೃತ್ವದಲ್ಲಿ ಇಂದು ಆರಂಭಗೊಂಡಿರುವ ಮೈಸೂರು ಚಲೋ ಪಾದಯಾತ್ರೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬೆಂಬಲ ಇಲ್ಲ ಎಂದಿದ್ದ ಬಗ್ಗೆ ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ. ಜೊತೆಗೆ ಬಿಜೆಪಿಯವರು ಮೊದಲು ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ ಆಮೇಲೆ ಪಾದಯಾತ್ರೆ ನಡೆಸಲಿ ಎಂದು ಕಿಡಿಕಾರಿದ್ದಾರೆ.

ಬಿಜೆಪಿಯವರ ಕಾಲದ ಸಾಕಷ್ಟು ಹಗರಣಗಳು ಇವೆ, ಒಂದೊಂದಾಗಿಯೇ ನಾವು ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ನಮ್ಮ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲದಿದ್ದರೆ, ನಾವು ಹಗರಣವನ್ನು ಸಿಬಿಐಗೆ ವಹಿಸಬೇಕಾಗುತ್ತದೆ. ಆದರೆ, ಸಿಐಟಿ ಅಧಿಕಾರಿಗಳು ಸರಿಯಾದ ದಾರಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಕುಮಾರಸ್ವಾಮಿ ಪಾದಯಾತ್ರೆಗೆ ಬೆಂಬಲ ಕೊಡುವುದು ಅವರಿಗೆ ಗೊತ್ತಿರುವ ವಿಚಾರ ಮತ್ತು ಅವರ ನಿರ್ಧಾರ. ಆರಂಭದಲ್ಲಿ ಬೆಂಬಲ ಕೊಡುವುದಿಲ್ಲ ಎಂದಿದ್ದರು. ಈಗ ಬೆಂಬಲ ನೀಡುತ್ತಿದ್ದಾರೆ, ಅಧಿಕಾರದಿಂದ ತೆಗಿತೀವಿ ಅಂದರೆ ಬೆಂಬಲ ಕೊಡಬೇಕಲ್ಲವೇ ಎಂದು ಚಲುವರಾಯಸ್ವಾಮಿ ಲೇವಡಿ ಮಾಡಿದ್ದಾರೆ.

ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಈ ಪಾದಯಾತ್ರೆಯನ್ನು ನಡೆಸಲಿದೆ. ಮೊದಲು ನೈತಿಕ ಬೆಂಬಲವೂ ಕೊಡುವುದಿಲ್ಲ ಎಂದಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಈಗ ಪಾದಯಾತ್ರೆಯನ್ನು ಉದ್ಘಾಟಿಸಿದ್ದಾರೆ.

More articles

Latest article