ತಾಂತ್ರಿಕ ಸಮಸ್ಯೆ: ಲೇಹ್‌ ನಲ್ಲಿ ಇಳಿಯಲಾಗದೆ ದೆಹಲಿಗೆ ಮರಳಿದ ಇಂಡಿಗೋ ವಿಮಾನ

ನವದೆಹಲಿ: ಇಂದು ಬೆಳಗ್ಗೆ ದೆಹಲಿಯಿಂದ ಲೇಹ್‌ ಗೆ ತೆರಳುತ್ತಿದ್ದ ಇಂಡಿಗೋ ವಿಮಾನ ಎರಡು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿ ತಾಂತ್ರಿಕ ಸಮಸ್ಯೆಯಿಂದಾಗಿ ಮತ್ತೆ ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ಆಗಿದೆ.

ಲಭ್ಯವಿರುವ ಮಾಹಿತಿ ಪ್ರಕಾರ, ದೆಹಲಿಯಿಂದ ಲೇಹ್‌ ಗೆ ಹಾರಾಟ ನಡೆಸುತ್ತಿದ್ದ 6E2006 ವಿಮಾನ ಎರಡು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ ನಂತರ ರಾಷ್ಟ್ರ ರಾಜಧಾನಿಗೆ ಮರಳಿದೆ.

ಜೂನ್ 19, 2025 ರಂದು ದೆಹಲಿಯಿಂದ ಲೇಹ್‌ಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನ 6E 2006, ತಾಂತ್ರಿಕ ಸಮಸ್ಯೆಯಿಂದಾಗಿ ಲೇಹ್‌ ನಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದ ಕಾರಣ ಮೂಲ ಸ್ಥಾನಕ್ಕೆ ಮರಳಿತು ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.

ವಿಮಾನವು ಕಾರ್ಯಾಚರಣೆ ಪುನರಾರಂಭಿಸುವ ಮೊದಲು ಅಗತ್ಯ ಪರಿಶೀಲನೆಗೆ ಒಳಗಾಗುತ್ತಿದೆ. ಪ್ರಯಾಣಿಕರು ಲೇಹ್‌ ಗೆ ತೆರಳಲು ಪರ್ಯಾಯ ವಿಮಾನ ವ್ಯವಸ್ಥೆ ಮಾಡಲಾಗಿದೆ ಮತ್ತು ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸುವುದಾಗಿ ವಕ್ತಾರರು ತಿಳಿಸಿದ್ದಾರೆ.

More articles

Latest article

Most read