ತಾಂತ್ರಿಕ ದೋಷ: ಬಾಂಗ್ಲಾದ ವಿಮಾನ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ

Most read

ಮುಂಬೈ: ಢಾಕಾದಿಂದ ದುಬೈಗೆ ತೆರಳುತ್ತಿದ್ದ ಬಾಂಗ್ಲಾದೇಶದ ‘ಬಿಮನ್ ಬಾಂಗ್ಲಾದೇಶ್ ಏರ್ಲೈನ್ಸ್’ ವಿಮಾನವು ತಾಂತ್ರಿಕ ದೋಷದಿಂದ ಮಹಾರಾಷ್ಟ್ರದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಮಾನದಲ್ಲಿ 12 ಸಿಬ್ಬಂದಿ ಸೇರಿ 396 ಪ್ರಯಾಣಿಕರಿದ್ದರು. ತಡರಾತ್ರಿ 12 ಗಂಟೆ ವೇಳೆಗೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ವಿಮಾನದ ಮಾರ್ಗ ಬದಲಿಸಿ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಪ್ರಯಾಣಿಕರ ಸುರಕ್ಷತೆ ಪರಿಗಣಿಸಿ ತಕ್ಷಣದ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನಾಗ್ಪುರ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿ ಅಬಿದ್ ರೂಹಿ ತಿಳಿಸಿದ್ದಾರೆ. ಪ್ರಯಾಣಿಕರನ್ನು ಅದೇ ಕಂಪನಿಯ ಮತ್ತೊಂದು ವಿಮಾನದಲ್ಲಿ ನಿಗದಿತ ಸ್ಥಳಕ್ಕೆ ತಲುಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

More articles

Latest article