ತಮಿಳುನಾಡು ವಿಧಾನಸಭೆ: ಸತತ 3ನೇ ಬಾರಿ ಭಾಷಣ ಮಾಡದೇ ನಿರ್ಗಮಿಸಿದ ರಾಜ್ಯಪಾಲ ಆರ್‌.ಎನ್‌.ರವಿ; ಸಿಎಂ ಸ್ಟಾಲಿನ್‌ ಕಟು ಟೀಕೆ

Most read

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಸಾಂಪ್ರದಾಯಿಕ ಭಾಷಣೆ ಮಾಡದೆ ರಾಜ್ಯಪಾಲ ಆರ್‌.ಎನ್‌.ರವಿ ಅವರ ಹೊರನಡೆದಿದ್ದಾರೆ. ಇದು ಭಾಷಣ ಮಾಡದೆ ಅವರು ಅಧಿವೇಶನದಿಂದ ನಿರ್ಗಮಿಸುತ್ತಿರುವುದು ಮೂರನೇ ಬಾರಿ. ಇಂದು ಅವರು ತಮಿಳು ನಾಡಗೀತೆಯನ್ನು ಹಾಡುವುದು ಮುಗಿಯುತ್ತಿದ್ದಂತೆ ಸದನದಿಂದ ಹೊರನಡೆದಿದ್ದಾರೆ.

ರಾಜ್ಯಪಾಲರ ಈ ನಡೆಯನ್ನು  ಮುಖ್ಯಮಂತ್ರಿ  ಎಂ.ಕೆ. ಸ್ಟಾಲಿನ್ ಟೀಕಿಸಿದ್ದಾರೆ. ವಿಧಾನಸಭೆಯ ಸಂಪ್ರದಾಯವನ್ನು ಉಲ್ಲಂಘಿಸಿ ರಾಜ್ಯಪಾಲರು ಹೊರನಡೆದಿದ್ದಾರೆ. ಅವರು ಉದ್ದೇಶಪೂರ್ವಕವಾಗಿಯೇ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ಅವರು ಸದನವನ್ನು ಅವಮಾನಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣವನ್ನು ಓದಲು ರಾಜ್ಯಪಾಲರು ನಿರಾಕರಿಸಿದ್ದಾರೆ. ರಾಷ್ಟ್ರಗೀತೆಗೆ ಸರಿಯಾದ ಗೌರವ ನೀಡಲಿಲ್ಲ ಎಂದು ನನಗೆ ನಿರಾಸೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರು ಹೊರನಡೆಯುತ್ತಿದ್ದಂತೆ ಮುಖ್ಯಮಂತ್ರಿ ಸ್ಟಾಲಿನ್‌ ಅವರು, ರಾಜ್ಯಪಾಲರ ಲಿಖಿತ ಭಾಷಣವನ್ನು ಅಂಗೀಕರಿಸುವಂತೆ ನಿರ್ಣಯ ಮಂಡಿಸಿದರು. ನಂತರ ಸ್ಪೀಕರ್‌ ಎಂ. ಅಪ್ಪಾವು ಅವರು ರಾಜ್ಯಪಾಲರ ತಮಿಳು ಭಾ಼ಷಾಂತರದ ಭಾಷಣವನ್ನು ಓದಿದರು. ಆದರೆ ಲೋಕಭವನವು ರಾಜ್ಯಪಾಲರ ಭಾಷಣವು ಸುಳ್ಳುಗಳಿಂದ ಕೂಡಿತ್ತು. ರಾಜ್ಯಪಾಲರ ಮೈಕ್ರೋಫೋನ್‌ ಪದೇ ಪದೇ ಸ್ವಿಷ್‌ ಆಫ್‌ ಆಗುತ್ತಿತ್ತು ಎಂದು ಟೀಕಿಸಿದ್ದಾರೆ.

More articles

Latest article