ಜೂಜು ಮತ್ತು ಯುದ್ಧ ಗಂಡಸರ ದರ್ಬಾರ್. ಇದು ಹೆಣ್ಣು ಮಕ್ಕಳ ಘನತೆಯ ಬದುಕನ್ನು ಬೀದಿಗೆ ತರುತ್ತದೆ. ಕ್ಷಮೆ ಮತ್ತು ಪಾಲನೆ ತಾಯಿಗುಣ. ಇದು ಬಿಕ್ಕಟ್ಟುಗಳನ್ನು ಶಮನಗೊಳಿಸುತ್ತದೆ. ಸಮಾಜವನ್ನು ಸಮತೋಲನದಲ್ಲಿ ಮುನ್ನಡೆಸುತ್ತದೆ. ಬದುಕನ್ನು ಎತ್ತರಿಸುತ್ತದೆ....
ಈ ಯುದ್ಧೋನ್ಮಾದ ಎನ್ನುವುದು ಸರ್ವನಾಶಕ್ಕೆ ರಹದಾರಿ. ಶತ್ರು ರಾಷ್ಟ್ರದತ್ತ ಹರಿಯುವ ನದಿ ನೀರನ್ನು ನಿಲ್ಲಿಸಿ ಬರವನ್ನೋ ಇಲ್ಲಾ ನೀರು ಹರಿಸಿ ಪ್ರಳಯವನ್ನೋ ಸೃಷ್ಟಿಸುತ್ತೇವೆ ಎನ್ನುವುದು ಮೂರ್ಖತನ ಹಾಗೂ ನಿಸರ್ಗ ನಿಯಮದ ಉಲ್ಲಂಘನೆ. ಉಗ್ರರು...