ಟಿ20 ವಿಶ್ವಕಪ್‌ ಗೆದ್ದ ಭಾರತ: ದಕ್ಷಿಣ ಆಫ್ರಿಕಾಗೆ ಮತ್ತೆ ‘ಚೋಕರ್ಸ್’ ಪಟ್ಟ!

Most read

ಟಿ20 ವಿಶ್ವಕಪ್‌ 2024ರ ಫೈನಲ್ ಪಂದ್ಯ ಬಾರ್ಬಡೋಸ್‌ನಲ್ಲಿ ನಡೆಯುತ್ತಿದ್ದು, ದಕ್ಷಿಣ ಆಫ್ರಿಕಾ ತಂಡ ಎದುರು ಭಾರತ ಭರ್ಜರಿ ಗೆಲುವು ಸಾಧಿಸಿದೆ. 13 ವರ್ಷಗಳ ನಂತರ ಐಸಿಸಿ ವರ್ಡ್ ಕಪ್ ಗೆದ್ದು ಚಾಂಪಿಯನ್‌ ಆಗಿದ್ದಾರೆ. ಸೌತ್‌ ಆಫ್ರಿಕಾ ಮತ್ತೆ ಚೋಕರ್ಸ್ ಪಟ್ಟದೊಂದಿಗೆ ತೆರಳಿದ್ದಾರೆ.

ಟೂರ್ನಿಯುದ್ದಕ್ಕೂ ಫಾರ್ಮ್‌ ಕಳೆದುಕೊಂಡಿದ್ದ ವಿರಾಟ್‌, ನಿರ್ಣಾಯಕ T20 ಫೈನಲ್‌ ಪಂದ್ಯದಲ್ಲಿ ಅಬ್ಬರಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ರಾಹುಲ್‌ ದ್ರಾವಿಡ್‌ ಕೋಚಿಂಗ್‌ನಲ್ಲಿ ಭಾರತ ಕೊನೆಗೂ ಕಪ್‌ ಗೆದ್ದಿದೆ. ಇದರೊಂದಿಗೆ ದ್ರಾವಿಡ್‌, ವಿರಾಟ್ ಮತ್ತು ರೋಹಿತ್ಗೆ ಗೆಲುವಿನ ವಿದಾಯ ಸಿಕ್ಕಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 2024ರ T20 ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ಭಾರತ ತಂಡದ ಉತ್ತಮ ಮೊತ್ತ ಕಲೆಹಾಕಿತ್ತು. ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ 20 ಓವರ್​ಗಳಲ್ಲಿ 176 ರನ್​ಗಳಿಸಿತ್ತು.

ಈ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಷ್ಟೇ ಶಕ್ತವಾಗಿದ್ದು 7 ರನ್ ಗಳಿಂದ ಸೋಲು ಕಂಡಿದೆ.

ಭಾರತದ ಪರ ಹಾರ್ದಿಕ್ ಪಾಂಡ್ಯ 3, ಅರ್ಷ್ ದೀಪ್ ಸಿಂಗ್‌ ಮತ್ತು ಜಸ್ ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದರೆ ಅಕ್ಷರ್ ಪಟೇಲ್ 1 ವಿಕೆಟ್ ಪಡೆದು ಕ್ರೀಡಾಂಗಣದಲ್ಲಿ ಮಿಂಚಿದರು.

More articles

Latest article