ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ ಭಾರತ T20 ವಿಶ್ವಕಪ್ 2024 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇದರ ನಡುವೆಯೇ ಈಗ ಸೂರ್ಯ ಕುಮಾರ್ ಯಾದವ್ ಅವರ ಅಧ್ಭುತ ಕ್ಯಾಚ್ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.
ಸೂರ್ಯಕುಮಾರ್ ಯಾದವ್ ಅವರು ಕಡೇ ಒವರ್ ನಲ್ಲಿ ಡೇವಿಡ್ ಮಿಲ್ಲರ್ ಅವರ ಕ್ಯಾಚ್ ಹಿಡಿಯಲಿಲ್ಲ ಎಂದಿದ್ದರೆ ಈ ಸಲ ಟಿ20 ವಿಶ್ವಕಪ್ ಭಾರತದ ಮಡಿಲು ಸೇರುತ್ತಿರಲಿಲ್ಲ. ಸೂರ್ಯ ಅವರ ಸಮಯಪ್ರಜ್ಞೆಯಿಂದ ಈಸಲ ವಿಶ್ವಕಪ್ ಪಂದ್ಯ ಭಾರತದ್ದಾಗಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ.
ಹೌದು, ದಕ್ಷಿಣ ಆಫ್ರಿಕಾಗೆ ಕಡೇ ಆರು ಬಾಲಿಗೆ 16 ರನ್ಗಳು ಬೇಕಿತ್ತು. ಬ್ಯಾಟಿಂಗ್ ನಲ್ಲಿ ಸ್ಫೋಟಕ ಆಟಗಾರ ಡೇವಿಡ್ ಮಿಲ್ಲರ್ ಇದ್ದರು. ಹಾರ್ದಿಕ್ ಪಾಂಡ್ಯ ಪುಲ್ಟಾಸ್ ಬಾಲ್ ಹಾಕಿದ ಪರಿಣಾಮ ಮಿಲ್ಲರ್ straight down the ground ಮಾಡಿದ್ದರು. ಬೌಂಡರಿ ಲೈನಲ್ಲೇ ಇದ್ದ ಸೂರ್ಯಕುಮಾರ್ ಯಾದವ್ ಅದನ್ನು ಅಧ್ಬುತವಾಗಿ ಕ್ಯಾಚ್ ಹಿಡಿದರು.
ಕ್ಯಾಚ್ ಹಿಡಿಯಲು ಸೂರ್ಯಕುಮಾರ್ ಯಾದವ್ ತುಂಬಾ ವೇಗದಿಂದ ಬಂದ ಪರಿಣಾಮ ಬಾಲ್ ಹಿಡಿದು ಬೌಂಡರಿ ಲೈನ್ ತುಳಿದೇ ಬಿಟ್ಟರು ಎನ್ನುವಷ್ಟರಲ್ಲಿ ಹಿಂದಕ್ಕೆ ಲಾಬ್ ಮಾಡಿ ಮತ್ತೆ ಬಾಲ್ ಎಸೆದು ಮತ್ತೆ ಕ್ಯಾಚ್ ಹಿಡಿದುಕೊಂಡರು. ಈ ಕ್ಯಾಚ್ ಹಿಡಿಯುವಾಗ ಇಡೀ ಬೈದಾನವೇ ಭಾರತ ಪಂದ್ಯ ಗೆದ್ದೇಬಿಡ್ತು ಎಂಬುವಂತೆ ಚೀರಾಡಿ ಭಾರತಕ್ಕೆ ಆತ್ಮ ಸ್ಥೈರ್ಯ ತುಂಬಿತು.
ಕಡೆಯದಾಗಿ ಭಾರತವು 7 ರನ್‌ಗಳಿಂದ ಪಂದ್ಯವನ್ನು ಗೆದ್ದು 17 ವರ್ಷಗಳ ನಂತರ T20 ವಿಶ್ವಕಪ್ ಪ್ರಶಸ್ತಿಯನ್ನು ಮತ್ತೆ ಮುಡಿಗೇರಿಸಿಕೊಳ್ಳುವಲ್ಲಿ ಈ ಕ್ಯಾಚ್ ನಿರ್ಣಾಯಕವಾಗಿತ್ತು.
ತವರು ನೆಲದಲ್ಲಿ ಒಂದು ವರ್ಷದ ಹಿಂದೆ ODI ವಿಶ್ವಕಪ್ 2023 ಫೈನಲ್‌ನಲ್ಲಿ ಸೋತ ಬೇಸರದಲ್ಲಿದ್ದ ಭಾರತಕ್ಕೆ ಇದು ಭಾವನಾತ್ಮಕ ಕ್ಷಣವಾಗಿತ್ತು ಎನ್ನಬಹುದು.