ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಅಧಿಕೃತವಾಗಿ ಸಿಐಡಿಗೆ (CID) ರಾಜ್ಯ ಸರ್ಕಾರ ಒಪ್ಪಿಸಿದೆ. ತನಿಖೆಗೆ ಬೇಗಾದ ಎಲ್ಲಾ ಮಾಹಿತಿ, ದಾಖಲಾತಿಗಳನ್ನು ಸಿಐಡಿಗೆ ಈಗಾಗಲೇ ಹಸ್ತಾಂತರಿಸಿದ್ದಾರೆ.
ಹೊಳೆನರಸೀಪುರ ಪೊಲೀಸರಿಂದ ಸಿಐಡಿಗೆ ಎಲ್ಲಾ ಮಾಹಿತಿ ಹಸ್ತಾಂತರ ಆಗಿದ್ದು, ಅದರ ಆಧಾರದ ಮೇಲೆ ಬಿ.ಕೆ ಸಿಂಗ್ (BK Singh) ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಕೇಸ್ ಫೈಲ್ ಪರಿಶೀಲನೆ ನಡೆಸಿ ತನಿಖಾಧಿಕಾರಿ ನೇಮಕ ಮಾಡಲಾಗಿದೆ.
ಸಿಐಡಿ ಎಡಿಜಿಪಿ ಬಿ ಕೆ ಸಿಂಗ್ ಅವರಿಂದ ತನಿಖಾಧಿಕಾರಿ ನೇಮಕ ಮಾಡಲಾಗಿದ್ದು, ಸೂರಜ್ ರೇವಣ್ಣ ಸಿಐಡಿ ಕಸ್ಟಡಿಗೆ ಪಡೆಯಲು ಕೋರ್ಟ್‌ಗೆ ಐಓ ಹೋಗಲಿದ್ದಾರೆ. ಬಾಡಿ ವಾರೆಂಟ್ ಮೂಲಕ ಸೂರಜ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.
ಭಾನುವಾರ ಹಾಸನ ಜಿಲ್ಲೆಯ ಹೊಳೆನರಸೀಪುರದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿ ಎಫ್ ಐ ಆರ್ ಸಹ ಆಗಿತ್ತು. ಪ್ರರಕಣದ ಸಂಬಂಧ ಸೂರಜ್ ರೇವಣ್ಣರನ್ನು ಭಾನುವಾರ ಬಂಧಿಸಲಾಗಿದೆ. ಸದ್ಯ ಆರೋಪಿಯ ವೈದ್ಯಕೀಯ ಪರೀಕ್ಷೆ ಹಾಸನದ ಹಿಮ್ಸ್ ಆಸ್ಪತ್ರೆಗೆ ಕರೆತರಲಾಗಿದೆ.
ಸೂರಜ್ ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 377, 342, 506, 36 ಅಡಿ ಕೇಸ್ ದಾಖಲಾಗಿದೆ. ಕರ್ನಾಟಕ ಸರ್ಕಾರ ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶಿಸಿದೆ. ಸದ್ಯ ಆರೋಪಿ ಹಾಸನ ಪೊಲೀಸರ ವಶದಲ್ಲಿದ್ದಾನೆ.
ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ವ್ಯಕ್ತಿ ದುಡ್ಡಿಗಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಸೂರಜ್ ರೇವಣ್ಣ ಆಪ್ತ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದರು. ಈ ಕುರಿತು ವಿವರಣೆ ನೀಡಲು ಠಾಣೆಗೆ ಬಂದಿದ್ದ ಸೂರಜ್ ರೇವಣ್ಣರನ್ನು ಪೊಲೀಸರು ಶನಿವಾರ ತಮ್ಮ ವಶಕ್ಕೆ ಪಡೆದಿದ್ದರು. ಭಾನುವಾರ ಅಧಿಕೃತವಾಗಿ ಬಂಧಿಸಿದ್ದಾರೆ.
ಸಿಐಡಿ ಅಧಿಕಾರಿ ಬಿಕೆ ಸಿಂಗ್