ಕ್ರಿಕೆಟ್ ಟೀಂಗೆ ಆಯ್ಕೆಯಾಗಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

ಬೆಂಗಳೂರು:ಕಾಲೇಜು ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಲಿಲ್ಲ ಎಂದು ಬೇಸತ್ತ 16 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗೆದ್ದಲಹಳ್ಳಿಯಲ್ಲಿಯ ಮಂತ್ರಿ ಸ್ಪ್ಲೆಂಡರ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರುವ ಐಟಿ ಉದ್ಯೋಗಿಯೊಬ್ಬರ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಈತ ಸೋಮವಾರ ಮುಂಜಾನೆ ಪೋಷಕರು ನಿದ್ರೆಯಲ್ಲಿದ್ದಾಗ ಅಪಾರ್ಟ್ ಮೆಂಟ್ ನಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರು ಇಂಟರ್ ನ್ಯಾಶನಲ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ ಈತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಇದರಿಂದ ಮನನೊಂದಿದ್ದ. ಇದೇ ವಿಷಯಕ್ಕೆ ಕಾಲೇಜನ್ನು ಬದಲಾಯಿಸುವಂತೆ ಪೋಷಕರ ಮೇಲೆ ಒತ್ತಡ ಹೇರಿದ್ದ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಇದು ಅಸಾಧ್ಯ ಎಂದು ಪೋಷಕರು ನಿರಾಕರಿಸಿದ್ದರು.

ಕಾಲೇಜು ವಿಷಯಕ್ಕೆ ಜಗಳವಾಡಿಕೊಂಡು ಮನೆಯಿಂದ ಹೊರಗೆ ಹೋಗಿದ್ದ. ಪೋಷಕರು ಸಂಪರ್ಕಿಸಿದಾಗ ಸಂಜೆ ಮನೆಗೆ ಹಿಂತಿರುಗುವಂತೆ ಹೇಳಿದ್ದ. ಸ್ನೇಹಿತನ ಮನೆಯಲ್ಲಿರಬಹುದು ಎಂದು ಭಾವಿಸಿದ ಪೋಷಕರು ನಿದ್ರೆಗೆ ಜಾರಿದ್ದರು. ಈತ ಬಹುಶಃ ಬೆಳಗಿನ ಜಾವ 1.30 ರಿಂದ 5 ಗಂಟೆಯೊಳಗೆ ಹಿಂತಿರುಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮನೆಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಕಂಡು ಬಂದಿಲ್ಲ. ಪೊಲೀಸರು ಅಸ್ವಾಭಾವಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

More articles

Latest article

Most read