ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯ ತಯಾರಿಯಲ್ಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯ ವೆಚ್ಚವನ್ನು ತಾವೇ ಬರಿಸಬೇಕು ಎಂದು ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿರುವುದಿ ಈಗ ವಿವಾದಕ್ಕೆ ಕಾರಣವಾಗಿದೆ.
ಮಾರ್ಗಸೂಚಿಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರು ರವರ ಆದೇಶದಂತೆ,2023-243 ಸಾಲಿನ ಎಸ್.ಎಸ್.ಎಲ್.ಸಿ ಪೂರ್ವಸಿದ್ಧತಾ ಪರೀಕ್ಷೆಯನ್ನು ದಿನಾಂಕ:26.02.2024 ರಿಂದ 02.03.2024 ರವರೆಗೆ ನಡೆಸಲು ತೀರ್ಮಾನಿಸಲಾಗಿದ್ದು, ವೇಳಾಪಟ್ಟಿಯನ್ನು ಮಂಡಲಿಯ ಜಾಲತಾಣದಲ್ಲಿ ಪುಕಟಿಸಲಾಗಿದೆ.ಪೂರ್ವ ಸಿದ್ಧತಾ ಪರೀಕ್ಷೆಗೆ ಮುಖ್ಯ ಪರೀಕ್ಷೆಯ ಮಾದರಿಯಂತೆ ಪುಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ಜಿಲ್ಲಾ ಉಪನಿರ್ದೇಶಕರು [ಆಡಳಿತ]ರವರ ಲಾಗಿನ್‌ಗೆ ಲಭ್ಯಗೊಳಿಸಲಾಗುವುದು.
ಸದರಿ ಪ್ರಶ್ನೆಪತ್ರಿಕೆಗಳನ್ನು ಜಿಲ್ಲಾಉಪನಿರ್ದೇಶಕರು (ಆಡಳಿತ) ರವರ ಹಂತದಲ್ಲಿ ಮುದ್ರಿಸಿ ಸಂಬಂಧಿಸಿದ ಪ್ರೌಢ ಶಾಲೆಗಳಿಗೆ ತಲುಪಿಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಲು ಅಗತ್ಯ ಕ್ರಮವಹಿಸುವುದು. ಈ ಪರೀಕ್ಷೆ ಸಂಬಂಧ ಪ್ರತಿ ವಿದ್ಯಾರ್ಥಿಯಿಂದ ರೂ.50/-ಗಳನ್ನು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರು ಸಂಗ್ರಹಿಸಿ ಜಿಲ್ಲಾ ಉಪನಿರ್ದೇಶಕರು [ಆಡಳಿತ] ರವರ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಕ್ರಮವಹಿಸುವುದು. ಈ ಬಗ್ಗೆ ಉಲ್ಲೇಖದಂತೆ ಸರ್ಕಾರದಿಂದ ಅನುಮೋದನೆ ಪಡೆಯಲಾಗಿರುತ್ತದೆ. ಸದರಿ ಪರೀಕ್ಷಾ ಖರ್ಚು ವೆಚ್ಚಗಳ ಕುರಿತು ಲೆಕ್ಕಪತ್ರ ನಿರ್ವಹಿಸಿ ತಪಾಸಣಾ ಸಮಯದಲ್ಲಿ ಜಿಲ್ಲಾ ಉಪನಿರ್ದೇಶಕರು ಹಾಜರುಪಡಿಸತಕ್ಕದ್ದು ಎಂದು ಆದೇಶಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಹೊರಡಿಸಿರುವ ಮಾರ್ಗಸೂಚಿ ಈ ಕೆಳಕಂಡಂತಿದೆ.
- 2023-24 ನೇ ಸಾಲಿನ ರಾಜ್ಯಮಟ್ಟದ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನೋಂದಾಯಿಸಿರುವ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಪೂರ್ವಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ತಲುಪಿಸಲು ಕ್ರಮ ಕೈಗೊಳ್ಳುವುದು.
- ಪ್ರಶ್ನೆಪತ್ರಿಕೆಗಳನ್ನು ಸೂಕ್ತ ಭದ್ರತೆಯೊಂದಿಗೆ ಸುರಕ್ಷಿತವಾಗಿ ಸಂರಕ್ಷಿಸಿಕೊಂಡು, ಪ್ರಶ್ನೆಪತ್ರಿಕೆಗಳ ಮುದ್ರಣಕ್ಕೆ ಸೂಕ್ತ ಕ್ರಮಕೈಗೊಂಡು, ಮುದ್ರಣಗೊಂಡ ಪ್ರಶ್ನೆಪತ್ರಿಕೆಗಳನ್ನು ವಿಷಯವಾರು ಮತ್ತು ಶಾಲಾವಾರು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕವಾಗಿ ಬಂಡಲ್‌ಗಳನ್ನು ಮಾಡಿ ಆಯಾ ಪರೀಕ್ಷಾ ದಿನಗಳಂದು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರಿಗೆ ಸುರಕ್ಷಿತವಾಗಿತಲುಪಿಸುವುದು.
- 2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನೋಂದಾಯಿಸಿಕೊಂಡಿರುವ CCERF ವಿದ್ಯಾರ್ಥಿಗಳ ಶಾಲಾವಾರು ಹಾಗೂ ಬ್ಲಾಕ್‌ವಾರು ಕ್ರೋಢೀಕೃತ ಅಂಕಿ ಸಂಖ್ಯೆಗಳನ್ನು ಈಗಾಗಲೇ E.೦ ಮತ್ತು B.E.0 ಲಾಗಿನ್‌ಗೆ ನೀಡಿದ್ದು, ಸದರಿ ಅಂಕಿ ಸಂಖ್ಯೆಗಳನ್ನು ಆಧರಿಸಿ ಪೂರ್ವಸಿದ್ಧ ತಾ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಮುದ್ರಿಸಿ ಪರೀಕ್ಷೆಯನ್ನು ನಡೆಸುವುದು.
- ಜಿಲ್ಲಾ ಉಪನಿರ್ದೇಶಕರು (ಆಡಳಿತ)ರವರ ಲಾಗಿನ್‌ಗೆ 2024 ರ ಫೆಬ್ರವರಿ ಮೊದಲನೇ ವಾರದಲ್ಲಿ ಪ್ರಶ್ನೆಪತ್ರಿಕೆಗಳನ್ನು ಅಪ್‌ಲೋಡ್ ಮಾಡಲಾಗುವುದು.ಅಪ್‌ಲೋಡ್ ಮಾಡಲಾಗುವ ಪ್ರಶ್ನೆಪತ್ರಿಕೆಗಳನ್ನು OTP Based Password ನೀಡಲಾಗುತ್ತಿದ್ದು, ಸ್ವತ: ಉಪನಿರ್ದೇಶಕರು (ಆಡಳಿತ)ರವರೇ Open ಮಾಡಿ, ಎಲ್ಲಾ ವಿಷಯಗಳ ಪ್ರಶ್ನೆ ಪತ್ರಿಕೆಗಳು ಲಾಗಿನ್‌ನಲ್ಲಿ ಲಭ್ಯವಿರುವುದನ್ನು ಖಾತರಿಪಡಿಸಿಕೊಂಡು, ಗೌಪ್ಯತೆ ಕಾಪಾಡಿಕೊಂಡು ಮುದ್ರಣಕ್ಕೆ ವ್ಯವಸ್ಥೆ ಮಾಡಿಕೊಳ್ಳುವುದು.
- ಪ್ರಶ್ನೆಪತ್ರಿಕೆಗಳನ್ನು ಅಪ್ಲೋಡ್ ಮಾಡುವ ಮೊದಲೇ ಉಪನಿರ್ದೇಶಕರು(ಆಡಳಿತ) ರವರು ಪ್ರಶ್ನೆ ಪತ್ರಿಕೆಗಳ ಮುದ್ರಕರನ್ನು ಗುರ್ತಿಸುವುದು.
- ಪ್ರಶ್ನೆ ಪತ್ರಿಕೆಗಳ ಮುದ್ರಣಕ್ಕೆ ಮುದ್ರಣಕಾರರನ್ನು ಆಯ್ಕೆ ಮಾಡುವಾಗ ಮುದ್ರಣಕ್ಕೆ ಅಗತ್ಯವಿರುವ ಸಾಕಷ್ಟು ಪರಿಕರಗಳು ಮತ್ತು ಸಿಬ್ಬಂದಿಗಳು ಹಾಗೂ ನಿಗದಿತ ಸಮಯಕ್ಕೆ ಮುದ್ರಣ ಹಾಗೂ ಸರಬರಾಜು ಮಾಡಲು ಸೂಕ್ತ ವ್ಯವಸ್ಥೆಗಳಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
- ಮುದ್ರಣ ಹಾಗೂ ಮಾಹಿತಿ ಸಂರಕ್ಷಣೆಗೆ ಅವಶ್ಯಕವಿರುವ ಅತ್ಯಾಧುನಿಕ ತಂತ್ರಜ್ಞಾನವನ್ನು ಮುದ್ರಕರು ಹೊಂದಿರುವುದನ್ನು ಖಾತ್ರಿಪಡಿಸಿಕೊಳ್ಳುವುದು. ಮುದ್ರಣಕಾರರ ಆಯ್ಕೆಯನ್ನು ಗೌಪ್ಯವಾಗಿರಿಸುವುದು ಸಂಪೂರ್ಣವಾಗಿ ಉಪನಿರ್ದೇಶಕರು (ಆಡಳಿತ) ರವರ ಜವಾಬ್ದಾರಿಯಾಗಿದ್ದು, ಯಾರೊಂದಿಗೂ ಮುದ್ರಕರ ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ
- ಮುದ್ರಣಕಾರರು ಬಳಸುವ ಕಂಪ್ಯೂಟರ್/ಲ್ಯಾಪ್ಟಾಪ್ ಇತ್ಯಾದಿಗಳು ಸುರಕ್ಷಿತ ತಂತ್ರಜ್ಞಾನ ಹೊಂದಿರುವುದನ್ನು ಖಾತ್ರಿಪಡಿಸಿಕೊಳ್ಳುವುದು.10. CC-Cameraಗಳನ್ನು ಅಳವಡಿಸಿರುವ ಕೊಠಡಿಯಲ್ಲಿಯೇ ಗೌಪ್ಯ ಸಾಮಗ್ರಿಗಳನ್ನು ಮುದ್ರಿಸುವ, ಪ್ಯಾಕಿಂಗ್ ಮಾಡುವ ಕಾರ್ಯನಿರ್ವಹಿಸುವಂತೆ ಮುದ್ರಕರಿಗೆ ತಿಳಿಸುವುದು.
- ಮುದ್ರಣ ಕಾರ್ಯದಲ್ಲಿ ಭಾಗವಹಿಸುವ ವ್ಯಕ್ತಿಗಳು Pendrive /Hard disk/Mobile Phoneಇತ್ಯಾದಿಗಳನ್ನು ಬಳಸಲು ನಿರ್ಬಂಧಿಸುವುದು.
- ಮುದ್ರಕರು ಗೌಪ್ಯ ಸಾಮಗ್ರಿಗಳ ಮುದ್ರಣ ಕಾರ್ಯ ಪೂರ್ಣಗೊಂಡ ನಂತರ ಈ ಕಾರ್ಯಕ್ಕೆ ನೀಡಲಾದ ಎಲ್ಲಾ ವಿಷಯಗಳ ಮಾಹಿತಿಗಳನ್ನು ಅಳಿಸಿ ಹಾಕಿರುವುದನ್ನು ಮತ್ತು ಯಾವುದೇ ಮಾಹಿತಿಯನ್ನು ತಮ್ಮಲ್ಲಿ ಉಳಿಸಿ ಕೊಳ್ಳದಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು.
- ಪ್ರಶ್ನೆಪತ್ರಿಕೆಗಳ ಮುದ್ರಣ ಕಾರ್ಯ ನಡೆಯುವ ಸಂದರ್ಭದಲ್ಲಿ ಮುದ್ರಣಾಲಯದಲ್ಲಿ ಯಾವುದೇ ಇತರೆ ಕಾರ್ಯಗಳನ್ನು ನಿರ್ವಹಿಸದಂತೆ ಮುದ್ರಕರಿಗೆ ತಿಳಿಸುವುದು.
- ಮುದ್ರಣ ಕಾರ್ಯ ಮುಗಿದ ನಂತರ ಹೆಚ್ಚುವರಿಯಾಗಿ ಪ್ರಶ್ನೆಪತ್ರಿಕೆಗಳು ಉಳಿದಿದ್ದಲ್ಲಿ ಅವುಗಳನ್ನು ಸೂಕ್ತ ಭದ್ರತೆಯೊಂದಿಗೆ ಸುರಕ್ಷಿತವಾಗಿ ಸಂರಕ್ಷಿಸಿಕೊಂಡು ಪರೀಕ್ಷೆ ಮುಗಿದ ನಂತರ ಅವುಗಳನ್ನು ನಿಯಮಾನುಸಾರ ವಿಲೇ ಮಾಡುವುದು.
- ಮುದ್ರಣ ಕಾರ್ಯ ನಿರ್ವಹಿಸುವಾಗ Miss Print ಆಗಿರುವ, ಬಳಸಲು ಯೋಗ್ಯವಲ್ಲದ ಅಥವಾ ಅಪೂರ್ಣವಾಗಿ ಮುದ್ರಿತವಾಗಿರುವ ಕಾಗದಗಳನ್ನು ಸಂಪೂರ್ಣವಾಗಿ Destroy ಮಾಡುವುದು.
- ಪರೀಕ್ಷಾ ನಂತರ ಉತ್ತರಪತ್ರಿಕೆಗಳ ಮೌಲ್ಯಮಾಪನವನ್ನು ಶಾಲಾ ಹಂತದಲ್ಲಿ ಮಾಡುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡುವುದು.
ವಿಶೇಷ ಸೂಚನೆ:
ಪ್ರತಿ ಜಿಲ್ಲೆಯ ಪಶ್ನೆ ಪತ್ರಿಕೆಗಳಿಗೆ ಪ್ರತ್ಯೇಕ ಕೋಡ್ ನೀಡಲಾಗಿರುತ್ತದೆ. ಯಾವುದಾದರೂ ಜಿಲ್ಲೆಯ ಪಶ್ನೆ ಪತ್ರಿಕೆಗಳು ಪರೀಕ್ಷಾ ಪೂರ್ವದಲ್ಲಿ ಮತ್ತು ಪರೀಕ್ಷಾ ಸಂದರ್ಭದಲ್ಲಿ ಸೋರಿಕೆಯಾದಲ್ಲಿ ಸಂಬಂಧಿಸಿದ ಉಪನಿರ್ದೇಶಕರ ಮೇಲೆ ನಿಯಮಾನುಸಾರ ಕ್ರಮ ಜರುಗಿಸಲಾಗುವುದು.ಹಾಗಾಗಿ2023-24ನೇ ಸಾಲಿನ ರಾಜ್ಯಮಟ್ಟದಪೂರ್ವಸಿದ್ಧತಾ ಪರೀಕ್ಷೆಯನ್ನು ಜಿಲ್ಲಾ ಉಪನಿರ್ದೇಶಕರು (ಆಡಳಿತ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ರವರು ವ್ಯವಸ್ಥಿತವಾಗಿ ನಡೆಸಲು ಸೂಕ್ತ ಕ್ರಮವಹಿಸುವಂತೆ ಈ ಮೂಲಕ ತಿಳಿಸಿದೆ ಅಂತ ಹೇಳಿದೆ.