ಸುಳ್ಳು ಸುದ್ದಿ ಪ್ರಸಾರ ಮಾಡಿದ ಸುವರ್ಣ ನ್ಯೂಸ್‌ ಸುದ್ದಿ ಸಂಪಾದಕ ಅಜಿತ್‌ ಹನುಮಕ್ಕನವರ್‌, ಸ್ಥಳಿಯ ವರದಿಗಾರ ಹಾಗೂ ಕ್ಯಾಮೆರಾಮನ್‌ ವಿರುದ್ಧ FIR

Most read

ಧರ್ಮಸ್ಥಳ:  ತಮ್ಮ ಚಾನೆಲ್‌ ನ ವರದಿಗಾರ ಮತ್ತು ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆದಿದೆ ಎಂದು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ಸುವರ್ಣ ನ್ಯೂಸ್ ಸುದ್ದಿ ಸಂಪಾದಕ ಅಜಿತ್‌ ಹನುಮಕ್ಕನವರ್‌, ಮತ್ತೊಬ್ಬ ಮಹಿಳಾ ಆಂಕರ್ ಹಾಗೂ ಅವಾಚ್ಯವಾಗಿ ನಿಂದಿಸಿದ ಚಾನೆಲ್‌ ನ ಧರ್ಮಸ್ಥಳದ ವರದಿಗಾರ ಹಾಗೂ ವರದಿಗಾರ ಹಾಗೂ ಕ್ಯಾಮರಾಮೆನ್ ವಿರುದ್ಧ  ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಲ್ಲೆ ನಡೆದಿದೆ ಎಂದು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದಕ್ಕಾಗಿ ಗಣೇಶ್‌ ಶೆಟ್ಟಿ ಎಂಬುವರು ಇವರ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ದೂರಿನನ್ವಯ ಪೊಲೀಸರು ಸುವರ್ಣ ನ್ಯೂಸ್‌ ಚಾನೆಲ್‌ ಸುದ್ದಿ ಸಂಪಾದಕ ಅಜಿತ್‌ ಹನುಮಕ್ಕನವರ್‌, ಸ್ಥಳಿಯ ವರದಿಗಾರ ಹಾಗೂ ಛಾಯಾಗ್ರಾಹಕರ ವಿರುದ್ಧ FIR ದಾಖಲಿಸಿದ್ದಾರೆ.

ದೂರು ನೀಡಿದ ಗಣೇಶ್‌ ಶೆಟ್ಟಿ ಅವರು ನಿನ್ನೆ ಸಂಜೆ ಧರ್ಮಸ್ಥಳದ ಸಮೀಪ ಪಾಂಗಳದಲಿ, ಪ್ರಮೋದ್, ಸಂಚಾರಿ ಸ್ಟುಡಿಯೋ ವರದಿಗಾರ ಸಂತೋಷ್ ಕುಮಾರ್, ಕುಡ್ಲ  ರಾಂಪೇಜ್‌  ವರದಿಗಾರ ಅಜಯ್ ಅಂಚನ್, ಯುನೈಟೆಡ್ ಮೀಡಿಯಾ ವರದಿಗಾರ ಅಭಿಷೇಕ್ ಹಾಗೂ ಕ್ಯಾಮರಾಮನ್ ಅಜಯ್ ಅವರ ಮೇಲೆ ಧರ್ಮಸ್ಥಳ ಪರ ಇರುವವರು ಹಲ್ಲೆ ನಡೆಸಿದ್ದರು. ಇವರನ್ನು ನಾವು ಚಿಕಿತ್ಸೆಗಾಗಿ ಉಜಿರೆ ಬೆನಕ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದೆವು ಎಂದು ಉಲ್ಲೇಖಿಸಿದ್ದಾರೆ.

ಇವರ ಆರೋಗ್ಯ ವಿಚಾರಿಸಲು ಸಂಜೆ 7.30ರ ವೇಳೆಗೆ  ಸೌಜನ್ಯ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್  ಆಗಮಿಸಿದ್ದರು. ಸುವರ್ಣ ನ್ಯೂಸ್ ವರದಿಗಾರ ಹಾಗೂ ಕ್ಯಾಮರಾಮೆನ್ ಇವರನ್ನು ತಡೆದು ನಿಲ್ಲಿಸಿ, ಬೈಟ್‌ ನೀಡುವಂತೆ ಆಗ್ರಹಿಸಿದ್ದರು. ಆಗ  ಗಿರೀಶ್ ಮಟ್ಟಣ್ಣನವರ್‌ ,  ಇದು ಆಸ್ಪತ್ರೆಯ ಆವರಣ. ಇಲ್ಲಿ ರೋಗಿಗಳು ಇರುತ್ತಾರೆ. ಅಲ್ಲದೆ ನಿಮ್ಮ ಸುವರ್ಣ ಚಾನಲ್ ನ ಆಜಿತ್ ಹನುಮಕ್ಕನವರ್‌ ಜೈನ್ ಸುಳ್ಳು, ಪ್ರಸಾರ ಮಾಡಿ ಧರ್ಮಸ್ಥಳದ ಅತ್ಯಾಚಾರಿಗಳಾದ ವೀರೇಂದ್ರ ಜೈನ್ ಅವರ ರಕ್ಷಣೆ ಮಾಡುತ್ತಿದ್ದಾರೆ. ಬೈಟ್‌ ಕೊಟ್ಟರೆ ಜನ ಆಕ್ರೋಶಗೊಳ್ಳುತ್ತಾರೆ. ಇಲ್ಲಿ ಯಾವುದೇ ಸಂದರ್ಶನ ಬೇಡ, ದಯವಿಟ್ಟು ಇಲ್ಲಿಂದ ಹೊರಡಿ ಎಂದು ವಿನಂತಿಸಿಕೊಂಡರು. ಇದನ್ನು ಲೆಕ್ಕಿಸದ ಸುವರ್ಣ ಚಾನಲ್ ನ ವರದಿಗಾರ ಹಾಗೂ ಕ್ಯಾಮರಾಮನ್ ಆಸ್ಪತ್ರೆ ಒಳಗೆ ನುಗ್ಗಲು ಯತ್ನಿಸಿದರು. ಆಗ ಅವರ ವರ್ತನೆಯಿಂದ ಅಸಮಾಧಾನಗೊಂಡ ಅಲ್ಲಿದ್ದ ಕೆಲವರು, ಅತ್ಯಾಚಾರಿಗಳ ಪರವಾಗಿ ವರದಿ ಮಾಡುವ ಚಾನೆಲ್ ನವರು ಆಸ್ಪತ್ರೆಯ ಒಳಗಡೆ ನುಗ್ಗಿ ಗಾಯಗೊಂಡಿದ್ದ ಮಾದ್ಯಮ ಹಾಗೂ ಪಿರ್ಯಾದಿದಾರರ ಭಾವ ಶೆಟ್ಟಿ ಅವರಿಗೆ ತೊಂದರೆ ಕೊಡಬಹುದು ಎಂದು ಪೊಲೀಸರಿಗೆ ಮನವಿ ಮಾಡಿಕೊಂಡರು. ಆಗ ವರದಿಗಾರ ಹಾಗೂ ಕ್ಯಾಮರಾಮೆನ್ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯ ಪರ ಹೋರಾಟಗಾರರನ್ನು ತಳ್ಳಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ  ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ಅವರೇ  ಚಾನೆಲ್ ಸಿಬ್ಬಂದಿಯನ್ನು ಆಸ್ಪತ್ರೆಯ ಒಳಗೆ ಕರೆದೊಯ್ದು ರಕ್ಷಣೆ ನೀಡಿದರು. ಈ ಸಮಯದಲ್ಲೂ ಸುವರ್ಣ ಚಾನೆಲ್ ನ ವರದಿಗಾರರು ಸುಮ್ಮನಿರದೇ ವರದಿ ಮಾಡುತ್ತೇವೆ ಎಂದು ಆವೇಶದಿಂದ ಕರೆ ಮಾಡುತ್ತಿದ್ದರು. ಕೆಲವೇ ಸಮಯದಲ್ಲಿ ಸುವರ್ಣ ವಾಹಿನಿಯಲ್ಲಿ, ಅಜಿತ್ ಹನುಮಕ್ಕನವರ್ ಎಂಬ ನ್ಯೂಸ್ ಆಂಕರ್,  ಸುವರ್ಣ ನ್ಯೂಸ್ ವರದಿಗಾರರ ಮೇಲೆ ಮಹೇಶ್ ಶೆಟ್ಟಿ ತಿಮರೋಡಿಯಿಂದ ಹಲ್ಲೆ ಎಂದು ನಿರಂತರವಾಗಿ  ಸುಳ್ಳು ಸುದ್ದಿ ಪ್ರಸಾರ ಮಾಡಿದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಆದ್ದರಿಂದ ಈ ಘಟನೆಯ ಬಗ್ಗೆ, ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ಸುವರ್ಣ ನ್ಯೂಸ್ ಆಂಕರ್ ಅಜಿತ್‌ ಹನುಮಕ್ಕನವರ್‌ ಹಾಗೂ ಅವಾಚ್ಯವಾಗಿ ನಿಂದಿಸಿದ ಚಾನೆಲ್‌ ನ ಸ್ಥಳೀಯ ವರದಿಗಾರ ಹಾಗೂ ಕ್ಯಾಮರಾಮೆನ್ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದರು.

ಇದರೊಂದಿಗೆ ನೆನ್ನೆ ಧರ್ಮಸ್ಥಳದ ಪಾಂಗಾಳದಲ್ಲಿ ಯೂಟ್ಯೂಬರ್ಸ್‌ ಮೇಲೆ ನಡೆದ ಹಲ್ಲೆಗೆ ಸಂಬಂಧಪಟ್ಟಂತೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರಕರಣಗಳು ಮತ್ತು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಎರಡು ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ ಎಂದು ವರಿಷ್ಟಾಧಿಕಾರಿ ಅರುಣ್‌ ಕುಮಾರ್‌ ತಿಳಿಸಿದ್ದಾರೆ.

More articles

Latest article