ಬಾಂಗ್ಯು: ಚಿನ್ನದ ಗಣಿ ಕುಸಿದು 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ಮಧ್ಯ ಆಫ್ರಿಕಾ ಗಣರಾಜ್ಯದ(Central African Republic) ಪಶ್ಚಿಮ ಭಾಗದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ರೆಡ್‌ಕ್ರಾಸ್ ಸ್ವಯಂಸೇವಕ ಹಾಗೂ ಸ್ಥಳೀಯ ಅಧಿಕಾರಿಯೊಬ್ಬರು ಬುಧವಾರ ರಾತ್ರಿ ಈ ಮಾಹಿತಿ ನೀಡಿದ್ದಾರೆ.
ಕ್ಯಾಮರೂನ್ ಗಡಿಗೆ ಸಮೀಪದ ನಾನಾ-ಮಾಂಬರೆ ಪ್ರಿಫೆಕ್ಟರ್‌ನ ಜಾಂಬೊಯೆ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಸಾಂಪ್ರದಾಯಿಕ ವಿಧಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಿನ್ನದ ಗಣಿ ಏಕಾಏಕಿ ಕುಸಿದಿದೆ.
ಘಟನೆಯಲ್ಲಿ ಹಲವರು ಮೃತಪಟ್ಟಿದ್ದು, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪರಿಹಾರ ಕಾರ್ಯದಲ್ಲಿ ತೊಡಗಿರುವ ಸ್ಥಳೀಯ ರೆಡ್‌ಕ್ರಾಸ್ ಸ್ವಯಂಸೇವಕ ಗೆರ್ವೈಸ್ ಗಣಗೊರೊಹ್ ತಿಳಿಸಿದ್ದಾರೆ. ಇನ್ನೂ ಹಲವರು ನಾಪತ್ತೆಯಾಗಿದ್ದು, ಕೆಲವರು ಅವಶೇಷಗಳಡಿ ಸಿಲುಕಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜಾಂಬೊಯೆ ಯುವ ಮಂಡಳಿ ಸದಸ್ಯ ಬಟ್ರ್ರಾಂಡ್ ಬೆ ಯಾಂಗ್ಯು ಹೇಳಿದ್ದಾರೆ.
‘ಅವರನ್ನು ಜೀವಂತವಾಗಿ ಪತ್ತೆಹಚ್ಚುವುದು ಪವಾಡವೇ ಸರಿ. ಕುಟುಂಬಗಳನ್ನು ಸಂಕಷ್ಟದಿಂದ ಪಾರು ಮಾಡಲು ಗಣಿಗೆ ಬಂದ ಯುವಕ-ಯುವತಿಯರು ಮೃತಪಟ್ಟಿರುವುದನ್ನು ಕಂಡು ನಾವು ದುಃಖಿತರಾಗಿದ್ದೇವೆ’ ಎಂದು ಯಾಂಗ್ಯು ಹೇಳಿದ್ದಾರೆ.
ಗಣಿ ಕುಸಿತಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ. ಮೃತರ ಗುರುತು ಪತ್ತೆಹಚ್ಚುವುದು, ಗಣಿಯನ್ನು ನಿರ್ವಹಿಸುತ್ತಿದ್ದವರ ವಿವರಗಳನ್ನು ಸಂಗ್ರಹಿಸುವುದು ಹಾಗೂ ಯಾವುದೇ ಅಪರಾಧ ಹೊಣೆಗಾರಿಕೆ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಬಾಬುವಾ ಉಪವಿಭಾಗದ ನ್ಯಾಯಾಲಯದ ಪ್ರಾಸಿಕ್ಯೂಟರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಚಿನ್ನದ ಗಣಿ ಕುಸಿದು 100ಕ್ಕೂ ಅಧಿಕ ಮಂದಿ ಸಾವು