ಗ್ಯಾಸ್ ಸಂಕಷ್ಟದ ಸುಳಿಗೆ ಸಿಲುಕಿದ ಸಿಲಿಕಾನ್ ಸಿಟಿ: ಗ್ಯಾಸ್ ಬಂಕ್‌ಗಳ ಮುಂದೆ ಆಟೋಗಳ ಕಿಲೋಮೀಟರ್ ಉದ್ದದ ಸಾಲು!

ಬೆಂಗಳೂರು: ಸಿಲಿಕಾನ್ ಸಿಟಿಯ ಆಟೋ ಚಾಲಕರಿಗೆ ಈಗ ‘ಗ್ಯಾಸ್’ ಸಂಕಷ್ಟ ಎದುರಾಗಿದೆ. ನಗರದ ಪ್ರಮುಖ ಎಲ್‌ಪಿಜಿ (LPG) ಗ್ಯಾಸ್ ಬಂಕ್‌ಗಳಲ್ಲಿ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದ್ದು, ನೂರಾರು ಆಟೋಗಳು ರಸ್ತೆಯಲ್ಲೇ ನಿಂತಲ್ಲೇ ನಿಲ್ಲುವಂತಾಗಿದೆ.

ಕಳೆದ ಕೆಲವು ದಿನಗಳಿಂದ ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರ ನೇರ ಬಿಸಿ ಈಗ ಬೆಂಗಳೂರಿನ ಆಟೋ ಚಾಲಕರಿಗೆ ತಟ್ಟಿದೆ. ನಿನ್ನೆ ಮಧ್ಯಾಹ್ನದಿಂದಲೇ ನಗರದ ಹಲವು ಬಂಕ್‌ಗಳಲ್ಲಿ ಗ್ಯಾಸ್ ಖಾಲಿಯಾಗಿದ್ದು, ಬಂಕ್‌ಗಳ ಮುಂದೆ ನೋ ಸ್ಟಾಕ್’ (No Stock) ಬೋರ್ಡ್‌ಗಳು ಕಾಣಿಸಿಕೊಳ್ಳುತ್ತಿವೆ.

ಗ್ಯಾಸ್ ಬಂಕ್ ಮ್ಯಾನೇಜರ್ ಈ ಇದರ ಕುರಿತು ಮಾತನಾಡಿದ್ದಾರೆ. “ನಮಗೆ ಬರಬೇಕಿದ್ದ ಗ್ಯಾಸ್ ಟ್ಯಾಂಕರ್‌ಗಳು ಸಮಯಕ್ಕೆ ಸರಿಯಾಗಿ ತಲುಪುತ್ತಿಲ್ಲ. ಸರಬರಾಜು ಸಂಪೂರ್ಣವಾಗಿ ನಿಂತುಹೋಗಿರುವುದರಿಂದ ನಿನ್ನೆ ಮಧ್ಯಾಹ್ನದಿಂದಲೇ ನಾವು ಬಂಕ್ ಬಂದ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಮೇಲಿನಿಂದ ಸ್ಟಾಕ್ ಬಂದ ತಕ್ಷಣ ವಿತರಣೆ ಆರಂಭಿಸುತ್ತೇವೆ,” ಎಂದು ತಿಳಿಸಿದ್ದಾರೆ.

ದುಡಿಮೆ ಇಲ್ಲ ಗ್ಯಾಸ್‌ಗಾಗಿ ನಗರದ ಮೂಲೆ ಮೂಲೆ ಅಲೆದಾಡುತ್ತಿರುವ ಚಾಲಕರು, ಗ್ಯಾಸ್ ಸಿಗದೆ ಬಾಡಿಗೆ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.ಅಷ್ಟೇ ಅಲ್ಲದೆ ಸಾಲದ ಕಂತು: “ದಿನದ ಬಾಡಿಗೆಯಲ್ಲೇ ಸಂಸಾರ ನಡೆಸಿ ಸಾಲ ತೀರಿಸಬೇಕು. ಈಗ ಗ್ಯಾಸ್ ಇಲ್ಲದೆ ಆಟೋ ನಿಂತರೆ ನಮ್ಮ ಪರಿಸ್ಥಿತಿ ಏನು?” ಎಂದು ಆಟೋ ಚಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಸಿಲಿಕಾನ್‌ ಸಿಟಿಯಲ್ಲಿ ಪ್ರತಿಷ್ಠಿತ ತ್ರೀ ಸ್ಟಾರ್ ಹೋಟೆಲ್‌ಗಳು ಅಡುಗೆ ಮಾಡಲು ಸಾಂಪ್ರದಾಯಿಕ ಸೌದೆಯನ್ನು ಆಶ್ರಯಿಸುವಂತಾಗಿದೆ. ಬೆಂಗಳೂರಿನ ಸಾವಿರಾರು ಹೋಟೆಲ್‌ಗಳಿಗೆ ಪ್ರತಿದಿನ ಐದರಿಂದ ಹತ್ತು ವಾಣಿಜ್ಯ ಸಿಲಿಂಡರ್‌ಗಳು ಬೇಕಾಗುತ್ತವೆ. ಆದರೆ, ಪೂರೈಕೆ ಇಲ್ಲದಿರುವುದರಿಂದ, ಹಲವು ಹೋಟೆಲ್‌ಗಳು ಈಗಾಗಲೇ ಸಂಗ್ರಹಿಸಿದ್ದ ಸಿಲಿಂಡರ್‌ಗಳನ್ನು ಬಳಸಿಕೊಂಡಿವೆ. ಮುಂದಿನ ದಿನಗಳಲ್ಲಿ ಸಿಲಿಂಡರ್ ಲಭ್ಯವಾಗದಿದ್ದರೆ ಹೋಟೆಲ್‌ಗಳನ್ನು ಮುಚ್ಚಬೇಕಾಗಬಹುದು ಎಂದು ಹೋಟೆಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಬಂದಿರುವ ಗ್ರಾಹಕರಿಗೆ ಸೇವೆ ಒದಗಿಸಲು ಅನಿವಾರ್ಯವಾಗಿ ಸೌದೆ ಒಲೆಗಳನ್ನು ಬಳಸಲಾಗುತ್ತಿದೆ.

ಸಿಎಂ ಇಂದ ಕೇಂದ್ರ ಸಚಿವರಿಗೆ ಪತ್ರ

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ  ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿಗೆ. ಬೆಂಗಳೂರು ನಗರದಲ್ಲಿ ಸಾವಿರಾರು ಸಣ್ಣ ಹೋಟೆಲ್‌ಗಳು, ಮೆಸ್ಸುಗಳು ಮತ್ತು ಕೇಟರಿಂಗ್ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಲಕ್ಷಾಂತರ ಜನರು ಇವುಗಳ ಮೇಲೆ ಅವಲಂಬಿತರಿದ್ದಾರೆ. ವಿದ್ಯಾರ್ಥಿಗಳು ಹಾಗೂ ಉದ್ಯೋಗಕ್ಕಾಗಿ ಹೊರನಗರಗಳಿಂದ ಬಂದಿರುವ ಅನೇಕರು ದಿನನಿತ್ಯದ ಆಹಾರಕ್ಕಾಗಿ ಇಂತಹ ಹೋಟೆಲ್ ಮತ್ತು ಮೆಸ್ಸುಗಳನ್ನೇ ನಂಬಿಕೊಂಡಿದ್ದಾರೆ. ಎಂದು ಕೇದ್ರ ಸಚಿವರಿಗೆ  ಪತ್ರ ಬರೆದು ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. 

ಒಟ್ಟಿನಲ್ಲಿ, ಎಲ್‌ಪಿಜಿ ಕೊರತೆಯಿಂದ ಬೆಂಗಳೂರಿನ ಹೋಟೆಲ್ ಉದ್ಯಮ ಮಾತ್ರವಲ್ಲದೆ ವಿದ್ಯಾರ್ಥಿಗಳು, ಅಟೋ ಚಾಲಕರು ಮತ್ತು ಸಾಮಾನ್ಯ ಜನರ ದಿನನಿತ್ಯದ ಬದುಕಿನ ಮೇಲೂ ಪರಿಣಾಮ ಬೀರುತಿದೆ.

More articles

Latest article

Most read