ಚಿನ್ನಾಭರಣ ವಂಚಕಿ ಶ್ವೇತಾಗೌಡ ಆಪ್ತ ಮಾಜಿ ಸಚಿವ ʼಗುಲಾಬ್‌ ಜಾಮೂನ್‌ʼ ವರ್ತೂರು ಪ್ರಕಾಶ್‌ ವಿಚಾರಣೆ

Most read

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಭಾರತೀನಗರ ಪೊಲೀಸ್‌ ಠಾಣೆಗೆ ಹಾಜರಾಗಿದ್ದಾರೆ. ಇವರಿಗೆ ಬಂಧನ ಭೀತಿ ಎದುರಾಗಿದೆ ಎಂದೂ ಹೇಳಲಾಗುತ್ತಿದೆ. ಇತ್ತೀಚೆಗೆ ಪ್ರಖ್ಯಾತ ಜ್ಯೂಯಲರ್ಸ್‌ ನಲ್ಲಿ ವರ್ತೂರು ಪ್ರಕಾಶ್ ಹೆಸರೇಳಿ ಮತ್ತು ವ್ಯಾಪಾರದ ಸೋಗಿನಲ್ಲಿ ಬರೋಬ್ಬರಿ 2 ಕೆಜಿ ಚಿನ್ನಾಭರಣಗಳನ್ನು ಶ್ವೇತಾಗೌಡ ಎಂಬಾಕೆ ತೆಗೆದುಕೊಂಡು ಹಣವನ್ನೂ ನೀಡದೆ ಆಭರಣಗಳನ್ನೂ ಹಿಂತಿರುಗಿಸದೆ ವಂಚನೆ ಎಸಗಿದ್ದಳು. ನಂತರ ಜ್ಯೂಯಲರ್ಸ್‌ ಮಾಲೀಕರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪೊಲೀಸರು ಈಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾನು ವರ್ತೂರು ಪ್ರಕಾಶ್ ಆಪ್ತೆ ಎಂದು ಹೇಳಿಕೊಂಡಿದ್ದಾಳೆ. ಬಲ್ಲ ಮೂಲಗಳ ಪ್ರಕಾರ ಈಕೆ ವರ್ತೂರು ಪ್ರಕಾಶ್ ಫೋನ್ ನಂಬರ್  ಅನ್ನು ಗುಲಾಬ್ ಜಾಮೂನ್ ಎಂದು ಸೇವ್ ಮಾಡಿಕೊಂಡಿದ್ದಾಳೆ. ವರ್ತೂರು ಪ್ರಕಾಶ್ ಈಕೆಯಿಂದಲೇ  ನಗದು, 3 ಬ್ರೇಸ್ಲೆಟ್, 1 ಉಂಗುರ ಪಡೆದುಕೊಂಡಿದ್ದಾರೆ. ಒಂದು ಭಾರಿ ತಮ್ಮ ಬ್ಯಾಂಕ್‌ ಖಾತೆಗೆ 10 ಲಕ್ಷ ರೂ. ಹಣವನ್ನೂ ಹಾಕಿಸಿಕೊಂಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗುತ್ತಿದೆ.

ಪುಲಕೇಶಿನಗರದಎಸಿಪಿ ಗೀತಾ ಇವರ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಈಕೆ ನೀಡಿದ್ದ ನಗದು ಮತ್ತು ಚಿನ್ನಾಭರಣಗಳನ್ನು ಹಿಂತಿರುಗಿಸಿರುವುದಾಗಿ ವರ್ತೂರು ಹೇಳಿಕೆ ನೀಡಿದ್ದಾರೆ.  ಈಕೆ ಹೀಗೆ ಮಾಡುತ್ತಾಳೆಂದು ನನಗೆ ಗೊತ್ತಿರಲಿಲ್ಲ. ಉಡುಗೊರೆಯಾಗಿ ನನಗೆ ಕೆಲವು ಆಭರಣಗಳನ್ನು ನೀಡಿದ್ದರು. ಅವುಗಳನ್ನು ಹಿಂತಿರುಗಿಸಿದ್ದೇನೆ. ನನಗೂ ಶ್ವೇತಾ ಗೌಡಗೂ ಸಂಬಂಧವಿಲ್ಲ ಎಂದು ವರ್ತೂರು ಪ್ರಕಾಶ್‌  ಹೇಳಿಕೆ ನೀಡಿದ್ದಾರೆ.

ವರ್ತೂರು ಪ್ರಕಾಶ್‌ ಕಿರಿಯ ಪುತ್ರ ನಿತನ್‌ ಗೂ ಪೊಲೀಸರು ನೋಟಿಸ್ ನೀಡಿದ್ದಾರೆ. ಶ್ವೇತಾಗೌಡ ನೀಡಿರುವ ಹೇಳಿಕೆ ಆಧರಿಸಿ ನೋಟಿಸ್ ಪೊಲೀಸರು ನೋಟಿಸ್‌ ನೀಡಿದ್ದಾರೆ. ಶ್ವೇತಾಗೌಡ ಮತ್ತು ನಿತಿನ್‌ ಹಲವು ಬಾರಿ ಲಕ್ಷಾಂತರ ರೂಪಾಯಿ ಶಾಪಿಂಗ್‌ ಮಾಡಿರುವುದು ಬೆಳಕಿಗೆ ಬಂದಿದೆ.

More articles

Latest article