ನವದೆಹಲಿ: ವಿಚಾರಣೆ ನಡೆಯುತ್ತಿರುವಾಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ಅವರತ್ತ ಶೂ ಎಸೆದ ಪ್ರಕರಣ ವರದಿಯಾಗಿದೆ. ಶೂ ಎಸೆದವನನ್ನು ಅರವತ್ತು ವರ್ಷದ ವಕೀಲ ರಾಜಶೇಖರ್ ಕಿಶೋರ್ ಎಂದು ಗುರುತಿಸಲಾಗಿದೆ.
ಕೂಡಲೇ ಆತನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಪ್ರಕರಣವೊಂದರ ವಿಚಾರಣೆ ನಡೆಯುತ್ತಿರುವಾಗಲೇ ಈ ಅವಘಡ ನಡೆದಿದೆ.
ಸನಾತನ ಧರ್ಮಕ್ಕೆ ಅಪಮಾನ ಸಹಿಸಲ್ಲ ಎಂದು ರಾಜಶೇಖರ್ ಕೋರ್ಟ್ ಹಾಲ್ ನಲ್ಲಿ ಚೀರಾಡಿದ್ದಾನೆ.
ನಂತರ ಪ್ರತಿಕ್ರಿಯಿಸಿಸ ಮುಖ್ಯ ನ್ಯಾಯಮೂರ್ತಿಗಳು ಇಂತಹ ಘಟನೆಗಳಿಂದ ವಿಚಲಿತರಾಗುವುದಿಲ್ಲ. ಇಂತಹ ಘಟನೆಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.