ಪಿಎಂ, ಸಿಎಂ ಪದಚ್ಯುತಿ ಮಸೂದೆ;ಜೆಪಿಸಿ ಬಹಿಷ್ಕರಿಸಿದ ಶಿವಸೇನಾ ಉದ್ಧವ್‌ ಬಣ

Most read

ನವದೆಹಲಿ: ಪ್ರಧಾನಿ, ಮುಖ್ಯಮಂತ್ರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವರು ಯಾವುದೇ ರೀತಿಯ ಪ್ರಕರಣಗಳಲ್ಲಿ  30 ದಿನಗಳವರೆಗೆ ಸತತವಾಗಿ ಜೈಲು ಶಿಕ್ಷೆ ಅನುಭವಿಸಿದ್ದರೆ ಅವರನ್ನು ಆ ಹುದ್ದೆಯಿಂದ ಸ್ವಾಭಾವಿಕವಾಗಿ ವಜಾಗೊಳಿಸಲು ಕೇಂದ್ರ ಸರ್ಕಾರ ರೂಪಿಸಿರುವ ಮೂರು ಮಸೂದೆಗಳನ್ನು ಜಂಟಿ ಸಂಸದೀಯ ಸಮಿತಿಯನ್ನು (ಜೆಪಿಸಿ) ಬಹಿಷ್ಕರಿಸುತ್ತೇವೆ ಎಂದು ಶಿವಸೇನಾ (ಉದ್ಧವ್‌ ಬಣ) ಪ್ರಕಟಿಸಿದೆ.

ಇಂಡಿಯಾ ಒಕ್ಕೂಟದ ಟಿಎಂಸಿ, ಸಮಾಜವಾದಿ ಪಕ್ಷ ಮತ್ತು ಆಮ್‌ ಆದ್ಮಿ ಪಕ್ಷ ಸಮಿತಿ ಸೇರುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿವೆ. ಈ ಮಸೂದೆಗಳು ಬಿಜೆಪಿಯ ಹೊಸ ನಾಟಕ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಟೀಕಿಸಿದ್ದಾರೆ.  

More articles

Latest article