ಶಿವಮೊಗ್ಗದಲ್ಲಿ ಪಕ್ಷೇತರವಾಗಿ ಸ್ಪರ್ಧಿಸುವ ಕೆಎಸ್‌ ಈಶ್ವರಪ್ಪ ನಿರ್ಧಾರಕ್ಕೆ ನನ್ನ ಬೆಂಬಲವಿದೆ: ಎಂಬಿ ಪಾಟೀಲ್

Most read

ಪುತ್ರನಿಗೆ ಹಾವೇರಿ ಟಿಕೆಟ್‌ ಕೈತಪ್ಪಿರುವುದರಿಂದ ರೆಬಲ್‌ ಆಗಿರುವ  ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಪಕ್ಷೇತರವಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ನನ್ನ ಬೆಂಬಲ ಇದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು.

ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಪಕ್ಷೇತರವಾಗಿ ಶಿವಮೊಗ್ಗದಲ್ಲಿ ಸ್ಪರ್ಧಿಸುವ ಕೆ.ಎಸ್‌ ಈಶ್ವರಪ್ಪ ನಿರ್ಧಾರ ಬಹಳ ಒಳ್ಳೆಯದು. ಈಶ್ವರಪ್ಪ ನಿರ್ಧಾರಕ್ಕೆ ನಾವು ಬೆಂಬಲಸುತ್ತೇವೆ ಎಂದು ಹೇಳಿದರು.

 ಕಾಂತೇಶ್‌ಗೆ ಹಾವೇರಿ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಈಶ್ವರಪ್ಪಗೆ ನಿರಾಸೆಯಾಗಿದೆ ಜೊತೆಗೆ ತನಗೂ ಬಿಜೆಪಿಯಲ್ಲಿ ರಾಜಕೀಯವಾಗಿ ಅನ್ಯಾಯ ಆಗಿದೆ ಎಂದು ನೊಂದು ಅವರು ಪಕ್ಷೇತರ ಸ್ಪರ್ಧೆಗೆ ಮುಂದಾಗಿದ್ದಾರೆ. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂಬ ಮಾತನ್ನು ಎಂ ಬಿ ಪಾಟೀಲ್‌ ಹೇಳಿದ್ದಾರೆ.

ಐಟಿ ಇಡಿ ರೇಡ್ ಮಾಡಿ ಕಂಪನಿಗಳಿಂದ ಎಲೆಕ್ಟ್ರೋಲ್ ಬಾಂಡ್  ಮೂಲಕ ಹಣ ಪಡೆದುಕೊಂಡಿದ್ದಾರೆ. ಮೋದಿ ಅಲೆ ಎಲೆಕ್ಟ್ರೋಲ್ ಬಾಂಡ್ ನಿಂದ ಪಂಕ್ಚರ್ ಆಗಿದೆ. ಅವರಿಗೆ ಈಗ ಯಾವ ನೈತಿಕತೆಯೂ ಇಲ್ಲ ಎಂದು ಟೀಕಿಸಿದ್ದಾರೆ.

ಲಿಂಗಾಯತ ಮತ ಸೇರಿ ಒಕ್ಕಲಿಗ, ಕುರುಬ, ಈಡಿಗ ಸಮುದಾಯಗಳ ಮತಗಳು ದೊಡ್ಡದಿದೆ. ಮುಸ್ಲಿಂ ಮತ್ತು ಪರಿಶಿಷ್ಟ ಜಾತಿ, ಪಂಗಡದ ಮತದಾರರು ಕೂಡ ನಿರ್ಣಾಯಕರಾಗಬಲ್ಲರು. ಈಹ ಎಂಬಿ ಪಾಟೀಲ್‌ ಅವರ ಬೆಂಬಲದಿಂದ ಒಂದಷ್ಟು ಲಿಂಗಾಯತ ಮತಗಳು ಬಿಜೆಪಿಯಿಂದ ಈಶ್ವರಪ್ಪಗೆ ಜಿಗಿಯುವ ಸಾಧ್ಯತೆಗಳಿವೆ. ಕಾಂಗ್ರೆಸ್‌ ಲಿಂಗಾಯತ ಮತಗಳು ಈಶ್ವರಪ್ಪಗೆ ಹೋದರು ಆಶ್ಚರ್ಯವಿಲ್ಲ.

More articles

Latest article