ಅವತ್ತು ಸಿದ್ದರಾಮಯ್ಯ ಅವರಿಗೆ ಸೈಟ್ ಕೊಟ್ಟು, ಇವತ್ತು ಸದನದಲ್ಲಿ ಚರ್ಚೆ ಮಾಡಿದ್ರೆ ಹೇಗೆ? : ಬಿಜೆಪಿಗೆ ಶಿವಲಿಂಗೇಗೌಡ ತರಾಟೆ

ಅವತ್ತು ಸಿದ್ದರಾಮಯ್ಯ ಅವರಿಗೆ ಸೈಟ್ ಕೊಟ್ಟು, ಇವತ್ತು ಸದನದಲ್ಲಿ ಚರ್ಚೆ ಮಾಡ್ತಿರಾ. ಇದೊಂದು ನಾಟಕ. ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರವನ್ನು ರಾಜ್ಯದ ಜನರ ಮುಂದೆ ಬಿಚ್ಚಿಡುತ್ತೇವೆ ಎಂದು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ತರಾಟೆ ತೆಗೆದುಕೊಂಢಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ನವರು ಸಿಎಂ ಎಂಬ ಕಾರಣಕ್ಕೆ ಈ ಪ್ರಕರಣವನ್ನು ದೊಡ್ಡದು ಮಾಡುತ್ತಿದ್ದಾರೆ. ಬಿಜೆಪಿಯವರೇ ಅಂದು ಜಮೀನು ಕೊಟ್ಟಿದ್ದು, ಮುಡಾದವರು ನಮ್ಮದು ತಪ್ಪಿದೆ ಎಂದು ಅಂದು ಜಮೀನು ಕೊಟ್ಟಿದ್ದಾರೆ. ಈಗ ಅದು ಮಾಡಿದ್ರು, ಇದು ಮಾಡಿದ್ರು ಎಂದು ಆರೋಪ ಮಾಡ್ತಾ ಇದ್ದಾರೆ. ಹಾಗಾದರೆ ಸಿಎಂ ಕುಟುಂಬದ ಜಮೀನು 3 ಎಕರೆ 16 ಗುಂಟೆಯನ್ನು ಮತ್ತೆ ವಾಪಸ್ ಕೊಡಲು ಆಗುತ್ತಾ? ಎಂದು ಪ್ರಶ್ನಿಸಿದರು.

ಈ ರೀತಿಯಲ್ಲಿ ಆರೋಪ ಮಾಡುವ ಮೂಲಕ ಸಿಎಂ ಅವರ ವ್ಯಕ್ತಿತ್ವ ಹಾಳು ಮಾಡಲು ಹೊರಟ್ಟಿದ್ದಾರೆ. ರಾಜಕೀಯದಲ್ಲಿ ಏನೋ ಸಿಲುಕಿಸುತ್ತೇವೆ ಎಂದು ಹೊರಟ್ರೆ ಸಾಧ್ಯವಾಗತ್ತಾ? ಅದೆಲ್ಲಾ ಸಾಧ್ಯವಿಲ್ಲ. ಅವತ್ತು ಸೈಟ್ ಕೊಟ್ಟು, ಇವತ್ತು ಸದನದಲ್ಲಿ ಬಂದು ಚರ್ಚೆ ಮಾಡಿದ್ರೆ ಹೇಗೆ? ಸಭೆಯಲ್ಲಿ ಸ್ಪೀಕರ್ ರೂಲಿಂಗ್ ವಿರುದ್ಧ ಹೋಗಲು ಆಗುತ್ತಾ ? ಬಿಜೆಪಿ, ಜೆಡಿಎಸ್ ಕುತಂತ್ರ ರಾಜ್ಯದ ಜನರ ಮುಂದೆ ಬಿಚ್ಚಿ ಬಿಡುತ್ತೇವೆ.ಇದು ರಾಜಕೀಯದ ನೆಪಕ್ಕಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರನ್ನು ಮುಗಿಸ್ತೇವೆ ಎಂಬ ಆಸೆ ಇದ್ರೆ ಬಿಟ್ಬಿಡಿ. ಅವರಿಗೆ ಸೈಟ್ ಕೊಟ್ಟವರು ನೀವೇ. ಈಗ ದೊಂಬರಾಟ ಮಾಡುವುದನ್ನು ನೀವೇ. ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಯಾವುದೇ ತಪ್ಪು ಆಗಿಲ್ಲ. ಇದೊಂದು ನಾಟಕ ಅಷ್ಟೇ, ಎಷ್ಟು ದಿನ ನಾಟಕ ನಡೆಯುತ್ತದೆ ಎಂದು ನೋಡೋಣ ಎಂದು ಸವಾಲು ಹಾಕಿದರು.  

More articles

Latest article

Most read