ಶಿವಾಜಿನಗರ ಕಮರ್ಷಿಯಲ್ ಸ್ಟ್ರೀಟ್ ಒಳಗಡೆ ಆಟೋ, ಸರಕು ವಾಹನಗಳಿಗೆ ನಿಷೇಧ ಹೇರಿದ ಪೊಲೀಸರು!

ಬೆಂಗಳೂರಿನಲ್ಲಿ ವಿವಿಧ ಉಡುಪು, ವಸ್ತುಗಳು ದೊರೆಯುವ ಏರಿಯಾ ಶಿವಾಜಿನಗರ ಕಮರ್ಷಿಯಲ್ ಸ್ಟ್ರೀಟ್ ಒಳಗಡೆಗೆ ಇನ್ನು ಮುಂದೆ ಆಟೋ ಮತ್ತು ಸರಕು ವಾಹನಗಳಿಗೆ ಪ್ರವೇಶವನ್ನು ನಿಷೇಧ ಹೇರಲಾಗಿದೆ.

ಶಿವಾಜಿನಗರ ಸಂಚಾರಿ ಪೊಲೀಸರು ಕಮರ್ಷಿಯಲ್ ಸ್ಟ್ರೀಟ್‌ಗೆ ಒಳಗೆ ಬರುವ ದಾರಿಯಲ್ಲಿ ಬ್ಯಾರಿಕೇಡ್ ಹಾಕಿ ಅದಕ್ಕೆ ಬ್ಯಾನರ್ ಹಾಕಿದ್ದಾರೆ. ಆಟೋ ಮತ್ತು ಸರಕು ವಾಹನಗಳಿಗೆ ಪ್ರವೇಶ ನಿಷೇಧ ಹೇರಲಾಗಿದೆ ಎಂದು ಪ್ರಕಟಿಸಿದೆ.

ವಾರಾಂತ್ಯದಲ್ಲಿ ದೇಶ, ವಿದೇಶಿಗರು ಓಡಾಟ ಮಾಡುತ್ತಾರೆ. ಆದರೆ ಆಟೋ ಮತ್ತು ಸರಕು ವಾಹನಗಳ ಟ್ರಾಫಿಕ್ ಜಾಮ್ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತಿದ್ದು, ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ನಿಷೇಧದ ಮಧ್ಯೆ ಕೂಡ ಆಟೋ ಮತ್ತು ಸರಕು ವಾಹನಗಳು ಹೋದರೆ ನೋ ಎಂಟ್ರಿ ಕೇಸ್ ಹಾಕಿ 500 ರೂ. ದಂಡ ಹಾಕಲಿದ್ದಾರೆ ಎಂದು ತಿಳಿಸಿದೆ.

More articles

Latest article

Most read