ತುಮಕೂರು: ನನ್ನನ್ನು ಹನಿಟ್ರ್ಯಾಪ್ ಮಾಡಲು ಬಂದಿದ್ದ ಯುವತಿ ಬ್ಲೂ ಟಾಪ್ ಹಾಗೂ ಜೀನ್ಸ್ ಧರಿಸಿದ್ದಳು ಎಂಬ ಕುತೂಹಲಕಾರಿ ವಿಷಯವನ್ನು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ. ಕಳೆದ ವಾರ ವಿಧಾನಸಭೆಯಲ್ಲಿ ರಾಜ್ಯದ ರಾಜಕಾರಣಿಗಳನ್ನು ಹನಿಟ್ರ್ಯಾಪ್ ಗೆ ಒಳಪಡಿಸಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದ ಅವರು ಇಂದು ತುಮಕೂರಿನಲ್ಲಿ ಮಾತನಾಡಿ ಒಂದಿಷ್ಟು ಮಾಹಿತಿಗಳನ್ನು ಹೊರಗೆಡವಿದ್ದಾರೆ.
ಎರಡನೇ ಬಾರಿ ಬಂದಿದ್ದಾಗ ಆಕೆಯ ಜತೆ ಒಬ್ಬ ಹುಡುಗ ಇದ್ದ. ಆದರೆ ಬೇರೆ ಹುಡುಗಿಯರಿದ್ದರು. ಮೊದಲ ಸಲ ಹೈಕೋರ್ಟ್ ಲಾಯರ್ ಎಂದು ಹೇಳಿಕೊಂಡಿದ್ದರು. ಎರಡನೇ ಬಾರಿಯೂ ವಕೀಲೆ ಎಂದು ಪರಿಚಯಿಸಿಕೊಂಡಿದ್ದರು. ಆದರೆ, ಅವರು ಬಂದು ಹೋಗಿರುವುದಕ್ಕೆ ನಮ್ಮ ಬಳಿ ಸಾಕ್ಷಿಯಿಲ್ಲ. ನನ್ನ ಮನೆಯಲ್ಲಿ ಸಿಸಿಟಿವಿ ಇಲ್ಲ. ಹಾಗಾಗಿ, ಅವರು ಯಾರು ಎಂದು ತಿಳಿದಿಲ್ಲ. ಆದರೆ ಫೋಟೋ ತೋರಿಸಿದರೆ ಅವರನ್ನು ಗುರುತು ಹಿಡಿಯುತ್ತೇನೆ ಎಂದು ಹೇಳಿದ್ದಾರೆ.
ಇಂದು ಗೃಹ ಸಚಿವರಿಗೆ ದೂರು ಕೊಡುತ್ಥೇನೆ. ನಿರಂತರ ಕಾರ್ಯಕ್ರಮವಿದ್ದ ಕಾರಣ ಇಷ್ಟು ದಿನ ದೂರು ಬರೆಯಲಾಗಿರಲಿಲ್ಲ. ನಾನೇ ಇಂದು ಕುಳಿತು ಬರೆಯುತ್ಥೇನೆ. ಗೃಹ ಸಚಿವ ಪರಮೇಶ್ವರ್ ವರನ್ನು ಹುಡಕಿಕೊಂಡು ಹೋಗಿ ದೂರು ಕೊಡುತ್ತೇನೆ. ಎಂದು ಹೇಳಿದ್ದಾರೆ.
ನ್ನನ ಬೆಂಗಳೂರು ಮನೆಯಲ್ಲಿ ಸಿಸಿಟಿವಿ ಇಲ್ಲ. ಹಾಗಾಗಿ ಯಾರು ಬಂದು ಹೋಗಿರುತ್ತಾರೆ ಎನ್ನುವ ದಾಖಲೆ ಇರುವುದಿಲ್ಲ. ಅಪರಿಚಿತರು ಅಂತ ದೂರಿನಲ್ಲಿ ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ.