ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ; ಶಾಸಕ ರಾಹುಲ್‌ ಅಮಾನತು ಮಾಡಿದ ಕೇರಳ ಕಾಂಗ್ರೆಸ್‌

Most read

ತಿರುವನಂತಪುರ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಗಳ ಹಿನ್ನೆಲೆಯಲ್ಲಿ ಪಾಲಕ್ಕಾಡ್‌ ಶಾಸಕ ಮಮ್‌ ಕೂತಥಿಲ್‌ ಅವರನ್ನು ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿ ಪಕ್ಷದಿಂದ ಅಮಾನತು ಮಾಡಿದೆ.

ಈ ಮಧ್ಯೆ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂಬ ಕೂಗು ಎದ್ದಿದೆ. ಕೇರಳ ವಿಧಾನಸಭೆಗೆ ಒಂದು ವರ್ಷದ ಅವದಿ ಮಾತ್ರ ಇದೆ. ಒಂದು ವೇಳೆ ರಾಹುಲ್‌ ರಾಜೀನಾಮೆ ನೀಡಿದರೆ ಬಿಜೆಪಿಗೆ ಅನುಕೂಲ ಆಗಲಿದೆ ಎಂಬ ಆತಂಕವೂ ಕಾಂಗ್ರೆಸ್ ಗೆ ಕಾಡುತ್ತಿದೆ. ಏಕೆಂದರೆ ಪಾಲಕ್ಕಾಡ್‌ ವಿಧಾನಸಭೆಗೆ ನಡೆದ ಕಳೆದ ಮೂರೂ ಚುನಾವಣೆಗಳಲ್ಲಿ ಬಿಜೆಪಿ ಎರಡನೇ ಸ್ಥಾನ ಗಳಿಸಿದೆ.

ರಾಹುಲ್ ಅವರನ್ನು6 ತಿಂಗಳವರೆಗೆ ಅಮಾನತು ಮಾಡಲು ಪಕ್ಷ ನಿರ್ಧರಿಸಿದ್ದು, ವಿಧಾನಸಭೆ ಕಲಾಪದಲ್ಲಿ ಭಾಗವಹಿಸದಂತೆ ಸೂಚನೆ ನೀಡಲಾಗಿದೆ ಎಂದು ಕೇರಳ ಕಾಂಗ್ರಸ್‌ ಮೂಲಗಳು ತಿಳಿಸಿವೆ.

ರಾಹುಲ್‌ ಅವರು ಹಲವು ಮಹಿಳೆಯರ ಮೇಲೆ ದೌರ್ಜನ್ಯ ಎಸಗರಿವು ಆರೋಪಗಳಿದ್ದು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಈ ಆರೋಪಗಳು ಕೇಳಿ ಬರುತ್ತಿದ್ದಂತೆ ಅವರು ಕೇರಳ ಘಟಕದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡುವಂತೆ ಪಕ್ಷ ಸೂಚಿಸಿತ್ತು. ಆದರೆ ಇದುವರೆಗೆ ಯಾವುದೇ ಮಹಿಳೆ ಅವರ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಿಲ್ಲ.

More articles

Latest article