ಮಹಿಳೆಗೆ ಲೈಂಗಿಕ ಕಿರುಕುಳ: ಅರೆಸ್ಟ್ ಆಗಲಿದ್ದಾನಾ ಬಿಜೆಪಿ‌ ಮುಖಂಡ ದೇವರಾಜೇಗೌಡ?

ಹೊಳೆನರಸೀಪುರ: ತನ್ನ ಬಳಿ ಪ್ರಜ್ವಲ್ ರೇವಣ್ಣನ ಲೈಂಗಿಕ ಕಾಮಕಾಂಡದ 2976 ವಿಡಿಯೋಗಳಿವೆ. ತಡೆಯಾಜ್ಞೆ ತೆರವುಗೊಳಿಸಿದರೆ ಹಾಸನದ ಎನ್ ಆರ್ ವೃತ್ತದಲ್ಲಿ ಎಲ್ ಇಡಿ ಪರದೆ ಮೇಲೆ ತೋರಿಸುತ್ತೇನೆ ಎಂದು ಹೇಳುತ್ತ ಬಂದಿದ್ದ ಬಿಜೆಪಿ ಮುಖಂಡ, ಹೊಳೆನರಸೀಪುರ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಸ್ವತಃ ತಾನೇ ಲೈಂಗಿಕ‌ ಕಿರುಕುಳದ ಪ್ರಕರಣದಲ್ಲಿ ಸಿಲುಕಿದ್ದಾನೆ.

ದೇವರಾಜೇಗೌಡ ವಿರುದ್ದ ಲೈಂಗಿಕ ಕಿರುಕುಳ ಆರೋಪ ಏ.1ರಂದು ಹೊಳೆನರಸೀಪುರ ಠಾಣೆಗೆ ಸಂತ್ರಸ್ತೆಯೋರ್ವಳು ದೂರು ನೀಡಿದ್ದು ದೇವರಾಜೇಗೌಡ ವೀಡಿಯೋ ಕಾಲ್‌ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ದೂರು ನೀಡಿದ್ದಾರೆ.

ದೂರಿನ ಆಧಾರದಲ್ಲಿ ಹೊಳೆನರಸೀಪುರ ಠಾಣೆಯಲ್ಲಿ FIR ದಾಖಲಾಗಿದ್ದು, ಶೀಘ್ರವೇ ದೇವರಾಜೇಗೌಡನನ್ನು ಬಂಧಿಸುವ ಸಾಧ್ಯತೆಗಳಿವೆ.

ದೇವರಾಜೇಗೌಡ ವಿಡಿಯೋ ಕಾಲ್ ಮಾಡಿ ಆಡಿರುವ ಮಾತುಗಳ ದಾಖಲೆಯನ್ನೂ ಸಹ ಸಂತ್ರಸ್ತೆ ನೀಡಿದ್ದು, ಹೊಳೆನರಸೀಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನೊಂದೆಡೆ ಪ್ರಜ್ವಲ್ ರೇವಣ್ಣನ ಕಾಮಕಾಂಡದ ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿರುವ ಹಿನ್ನೆಲೆಯಲ್ಲೂ ದೇವರಾಜೇಗೌಡನ ಪಾತ್ರದ ಕುರಿತು SIT ಪರಿಶೀಲನೆ ನಡೆಸುತ್ತಿದೆ. ತನ್ನ ಬಳಿ ಪ್ರಜ್ವಲ್ ಕಾಮಕಾಂಡದ ಸಾವಿರಾರು ವಿಡಿಯೋಗಳಿವೆ ಎಂದು ಆತ ಹಲವು ಪತ್ರಿಕಾಗೋಷ್ಠಿಗಳಲ್ಲಿ ಹೇಳಿಕೊಂಡಿದ್ದನಲ್ಲದೆ, ಸಮಯ ಬಂದಾಗ ಎಲ್ಲವನ್ನೂ ಬಿಡುಗಡೆ ಮಾಡುವುದಾಗಿ ಹೇಳುತ್ತ ಬಂದಿದ್ದ.

ಪ್ರಜ್ವಲ್ ಮೊಬೈಲ್ ನಿಂದ ವಿಡಿಯೋಗಳನ್ನು ವರ್ಗಾವಣೆ ಮಾಡಿಕೊಂಡಿದ್ದ ಆತನ ಮಾಜಿ ಡ್ರೈವರ್ ಕಾರ್ತಿಕ್ ಕೂಡ ವಿಡಿಯೋಗಳನ್ನು ದೇವರಾಜೇಗೌಡನಿಗೆ ಮಾತ್ರ ಕೊಟ್ಟಿರುವುದಾಗಿ ಹೇಳಿಕೆ ನೀಡಿದ್ದ.

More articles

Latest article

Most read