ಕೋಲಾರದಲ್ಲಿ ಸರಣಿ ಕಳ್ಳತನ; ಅಂಗಡಿ ಮುಂಗಟ್ಟುಗಳಲ್ಲಿ ನಗದು ದೋಚಿದ ಕಳ್ಳರು

ಕೋಲಾರ: ಕೋಲಾರ ನಗರದಲ್ಲಿ ವಿವಿಧ ಅಂಗಡಿಗಳು ಮತ್ತು ಮೆಡಿಕಲ್ ಸ್ಟೋರ್ ಗಳಲ್ಲಿ ಸರಣಿ ಕಳ್ಳತನ ನಡೆದಿದೆ. ಮಂಗಳವಾರ ತಡರಾತ್ರಿ ಈ ಕಳ್ಳತನದ ಪ್ರಕರಣಗಳು ನಡೆದಿವೆ.

ನಗರದ ಡೂಂ ಲೈಟ್ ವೃತ್ತ, ಪಿ.ಸಿ ಬಡಾವಣೆ ಮುಖ್ಯರಸ್ತೆಯಲ್ಲಿರುವ ಅಂಗಡಿಗಳಲ್ಲಿ ಶೆಟರ್ ಮುರಿದು ಸರಣಿ ಕಳವು ಮಾಡಲಾಗಿದೆ. ಅಪೊಲೊ ಮೆಡಿಕಲ್ಸ್, ಮೆಡ್ ಪ್ಲಸ್ ಸೇರಿ ದಿನಸಿ ಸಾಮಗ್ರಿಗಳ ಮಾರ್ಟ್ಗಳಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಅಂಗಡಿಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಗಳಲ್ಲಿ ಸೆರೆಯಾಗಿದೆ. ಕಬ್ಬಿಣದ ರಾಡ್ ಗಳಿಂದ ಮುಂಭಾಗದ ಬಾಗಿಲುಗಳನ್ನು ಒಡೆದು ಕಳ್ಳತನ ಮಾಡಿದ್ದಾರೆ. ಮೆಡ್‌ ಫ್ಲಸ್ ಮಳಿಗೆಯಲ್ಲಿದ್ದ 50,000 ನಗದು, ಅಪೊಲೋ ಫಾರ್ಮಸಿಯಲ್ಲಿದ್ದ 11,000 ನಗದು ಹಣವನ್ನು ಕಳವು ಮಾಡಲಾಗಿದೆ. ಈ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ದಿನಸಿ ಮಾರ್ಟ್‌ಗಳ ಕ್ಯಾಶ್ ಬಾಕ್ಸ್‌ನಲ್ಲಿದ್ದ ಸಾವಿರಾರು ರೂ. ಹಣವನ್ನೂ ದೋಚಲಾಗಿದೆ.

ಕಳ್ಳತನ ನಡೆದಿರುವ ಸ್ಥಳಗಳಿಗೆ ಕೋಲಾರ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಬೆರಳಚ್ಚು ತಂಡ ಹಾಗೂ ಶ್ವಾನ ದಳ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಕಳ್ಳರ ಹುಟುಕಾಟಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚುವ ಮೂಲಕ ಸಾರ್ವಜನಿಕರು ಮತ್ತು ವ್ಯಾಪಾರಿಗಳ ಆತಂಕವನ್ನು ದೂರ ಮಾಡಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ

More articles

Latest article

Most read