ತೆರಿಗೆ ಹಂಚಿಕೆ ವಿಚಾರ | ಕಲ್ಯಾಣ ಕರ್ನಾಟಕ – ಬೆಂಗಳೂರು ಜನರ ನಡುವೆ ಬಿರುಕು ಉಂಟುಮಾಡುವಂತಹ ಹೇಳಿಕೆ ಕೊಟ್ಟ ನಿರ್ಮಲಾ ಸೀತಾರಾಮನ್

Most read

ತೆರಿಗೆ ಹಂಚಿಕೆ ಸರಿಯಾಗಿ ಆಗಲಿ ಇಲ್ಲವೇ ದಕ್ಷಿಣ ಭಾರತ ಪ್ರತ್ಯೇಕ ಕೂಗು ಏಳುತ್ತದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡುವ ಬರದಲ್ಲಿ ಕಲ್ಯಾಣ ಕರ್ನಾಟಕ ಹಾಗೂ ಬೆಂಗಳೂರು ನಗರದ ಜನರ ನಡುವೆ ಬಿರುಕು ಉಂಟು ಮಾಡುವ ಹೇಳಿಕೆ ಕೊಟ್ಟಿದ್ದಾರೆ.

ಟೈಮ್ಸ್ ನೌ ಸಂದರ್ಶನದಲ್ಲಿ, ಕರ್ನಾಟಕ ತೆರಿಕೆ ಹಂಚಿಕೆ ವಿಚಾರದಲ್ಲಿ ಸಂಸದ ಡಿಕೆ ಸುರೇಶ್ ಹೇಳಿಕೆ ಬಗ್ಗೆ ‌ನಿರ್ಮಲಾ ಸೀತಾರಾಮನ್ ಅವರಿಗೆ ಆ್ಯಂಕರ್ ಅಭಿಪ್ರಾಯ ಕೇಳಿದಾಗ,  ನಾವು ಈ ಹೇಳಿಕೆಯನ್ನು ಸಂಪೂರ್ಣ ವಿರೋಧಿಸುತ್ತೇವೆ. ಒಬ್ಬ ಲೋಕಸಭಾ ಸಂಸದ ಈ ತರದ ಹೇಳಿಕೆ ನೀಡಿದರೆ ಹೇಗೆ ಅರ್ಥೈಸಿಕೊಳ್ಳಬೇಕು. ಕರ್ನಾಟಕ ರಾಜ್ಯಕ್ಕೆ ತೆರೆಗೆ ಹಂಚಿಕೆ ವಿಚಾರದಲ್ಲಿ ಮೋಸ ಆಗುತ್ತಿದೆ, ಅದಕ್ಕೆ ದಾಖಲೆಗಳಿವೆ ಎಂದಾದರೆ ಈ ಕುರಿತು ಲೋಕಸಭೆಯಲ್ಲಿ ಎಂದಾದರೂ ಪ್ರಶ್ನೆ ಎತ್ತಿದ್ದಾರೆಯೇ?. ಇಲ್ಲ, ಆದರೆ ಕರ್ನಾಟಕದ ಅನೇಕ ಸಚಿವರು ನಮ್ಮ ಬಳಿ ದಾಖಲೆಗಳಿವೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಂಸದ ಡಿಕೆ ಸುರೇಶ್ ಈ ಹೇಳಿಕೆ ನೀಡಿದ ಬೆನ್ನಲ್ಲೇ ಸಮಾಜಿಕ ಜಾಲತಾಣದಲ್ಲಿ ಯಾವ ರಾಜ್ಯ ಎಷ್ಟು ತೆರಿಕೆ ಸಂಗ್ರಹಿಸಿದೆ, ಕೇಂದ್ರದಿಂದ ಎಷ್ಟು ತೆರಿಗೆ ಹಂಚಿಕೆಯಾಗಿದೆ ಎಂಬ ಕುರಿತು ಅನೇಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ದಾಖಲೆಗಳು ಹರಿದಾಡುತ್ತಿದೆ. ಜಾಲತಾಣದಲ್ಲಿ ಈತರದ ಚರ್ಚೆಯಾಗಬೇಕ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.

ಬೆಂಗಳೂರು ನಗರದಲ್ಲಿ ಅತ್ಯಂತ ಹೆಚ್ಚು ತೆರಿಗೆ ಕಟ್ಟುತ್ತಾರೆ. ಬೆಂಗಳೂರಿಗರು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ನಾವು ಯಾಕೆ ತೆರಿಗೆ ಕಟ್ಟಬೇಕು ಎಂದು ಕೇಳಿದರೆ ಹೇಗೆ?. ಈತರದ ಚರ್ಚೆಯ ಅಗತ್ಯ ಇದೆಯೇ? ಎಂದು ಕೇಳುವ ಮೂಲಕ ಕರ್ನಾಟದ ಕಲ್ಯಾಣ ಜಿಲ್ಲೆಗಳು ಹಾಗೂ ಬೆಂಗಳೂರಿನ ಜನರ ನಡುವೆ ಬಿರುಕು ಮೂಡಿಸುವಂತಹ ಹೇಳಿಕೆ ನೀಡಿದ್ದಾರೆ.

ನಾವು ಸಂಸತ್ತಿನಲ್ಲಿ ಕೂತಿದ್ದೇವೆ ಎಂದರೆ ದೇಶದ ಸಂವಿಧಾನ ಮತ್ತು ಒಕ್ಕೂಟ ರಾಷ್ಟ್ರ ಬಗ್ಗೆ ನೆನಪಿರಬೇಕು. ಸಂಸದ ಡಿಕೆ ಸುರೇಶ್ ಹೇಳಿಕೆಗೆ ನನ್ನ ಸಂಪೂರ್ಣ ವಿರೋಧವಿದೆ. ಈತರದ ಹೇಳಿಕೆ ಕೊಟ್ಟ ಸಂಸದ ದೇಶದ ಜನರ ಬಳಿ ಕ್ಷೆಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

 ಸಂಸದರ ಹೇಳಿಕೆಯನ್ನು ಪ್ರಶ್ನಿಸದೆ ಬಾಯಿಗೆ ಬೀಗ ಹಾಕಿ ಕುಳಿತಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷರು ಏನು ಹೇಳೊಣ. ಈ ಹಿಂದೆ ನಾವು ಕಾಂಗ್ರೆಸ್ ಪಕ್ಷ ಮತ್ತವರ ಮೈತ್ರಿ ಪಕ್ಷಗಳನ್ನು ತುಕಡೆ ತುಕಡೆ ಗ್ಯಾಂಗ್ ಎಂದು ಕರೆಯುತ್ತಿದ್ದೆವು. ದೇಶವನ್ನು ತುಂಡು ತುಂಡು ಮಾಡಿ ಎಂಬ ಕಾಂಗ್ರೆಸ್ ಹೇಳಿಗೆ ನಾವು ಅವರನ್ನು ತುಕಡೆ ತುಕಡೆ ಗ್ಯಾಂಗ್ ಅನ್ನೊದು. ಈಗಲೂ ಅದೇ ಆಗಿರೋದು ಎಂದು ಹೇಳಿದ್ದಾರೆ.

ಈತರದ ಗಂಭೀರ ವಿಷಯ ಚರ್ಚೆಯಾಗುತ್ತಿದ್ದರು ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡದೆ ಭಾರತ್ ಜೋಡೊ ಯಾತ್ರೆಯಲ್ಲಿ ಬ್ಯೂಸಿ ಇದ್ದಾರೆ ಎಂಬ ಪತ್ರಕರ್ತ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಗಾಂಧಿ ಕೂಡ ತುಕಡೆ ತುಕಡೆ ಗ್ಯಾಂಗ್ ನ ಒಬ್ಬ ಸದಸ್ಯರು ಅವರು ಈ ಕುರಿತು ಪ್ರತಿಕ್ರಿಯೆ ಆಗಲಿ ಕ್ಷಮೆ ಕೇಳಿರುವುದಾಗಲಿ ನಾನು ಕೇಳಿಲ್ಲ ಎಂದು ಹೇಳಿದ್ದಾರೆ.

More articles

Latest article