ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಡಿಸೆಂಬರ್ 14 ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಸಯಮಾರು ೧೭ ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಡಿಸೆಂಬರ್ ೧೪ ರಂದು ಇಂಡಿಗೋ ಫ್ಲೈಟ್ 6E1163 ನಲ್ಲಿ ದುಬೈನಿಂದ ಮಂಗಳೂರಿಗೆ ಬಂದ ಪ್ರಯಾಣಿಕರನ್ನು ಅಧಿಕಾರಿಗಳು ತಡೆದು ಪರಿಶೀಲನೆ ನಡೆಸಿದರು.
ಅನುಮಾನಗೊಂಡ ಅಧಿಕಾರಿಗಳು ಪ್ರಯಾಣಿಕರ ಪ್ಯಾಂಟ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ. ಸ್ಕ್ಯಾನಿಂಗ್ ಮಾಡಿದ ನಂತರ, ಪ್ಯಾಂಟ್‌ನ ಪದರಗಳಲ್ಲಿ ಹಳದಿ-ಬಣ್ಣದ ಪೇಸ್ಟ್ ವಸ್ತುವು ಕಾಣಿಸಿಕೊಂಡಿದ್ದು, ಏನದು ಎಂದು ಪರಿಶೀಲಿಸಿದಾಗ. ಚಿನ್ನವೆಂದು ತಿಳಿದುಬಂದಿದೆ.
ಪೆಸ್ಟ್ ರಿತಿ ಇದ್ದ ಅಷ್ಟೂ ಚಿನ್ನವನ್ನು ಹೊರತೆಗೆದ ಅಧಿಕಾರಿಗಳು, 286 ಗ್ರಾಂ 24-ಕ್ಯಾರೆಟ್ ಶುದ್ಧ ಚಿನ್ನವಇದೆ ಎಂದು ದೃಢಪಡಿಸಿದ್ದಾರೆ. ಇದು ಅಂದಾಜು ಮೌಲ್ಯ ರೂ. 17,73,20 ಮೌಲ್ಯದ ಚಿನ್ನ ಎಂದು ತಿಳಿಸಿದ್ದಾರೆ.