ಮಹಾರಾಷ್ಟ್ರ ಚುನಾವಣೆ : ಬಿಜೆಪಿಯ 22 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ (BJP) ಶನಿವಾರ ತನ್ನ 22 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆರು ಹಾಲಿ ಶಾಸಕರನ್ನು ಉಳಿಸಿಕೊಂಡಿದೆ ಮತ್ತು ಇಬ್ಬರನ್ನು ಕೈಬಿಟ್ಟಿದೆ.

ಎರಡನೇ ಪಟ್ಟಿಯಲ್ಲಿ, ಬಿಜೆಪಿಯು ಅಕೋಟ್, ನಾಸಿಕ್ ಸೆಂಟ್ರಲ್, ಪೆನ್, ಖಡಕ್ವಾಸಲಾ, ಪುಣೆ ಕಂಟೋನ್ಮೆಂಟ್ ಮತ್ತು ಉಲ್ಲಾಸನಗರದ ಶಾಸಕರನ್ನು ಉಳಿಸಿಕೊಂಡು ವಾಶಿಮ್ ಮತ್ತು ಗಡ್ಚಿರೋಲಿಯದ ಹಾಲಿ ಶಾಸಕರನ್ನು ಬಿಟ್ಟು ಬೇರೆ ಹೆಸರನ್ನು ಘೋಷಿಸಿದೆ.

ಈಗಾಗಲೇ ಕಾಂಗ್ರೆಸ್‌ ಸಹ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದೆ.

288 ಸದಸ್ಯ ಬಲದ ಮಹಾರಾಷ್ಟ್ರದ ವಿಧಾನಸಭೆಗೆ ನವೆಂಬರ್ 20 ರಂದು ಚುನಾವಣೆ ನಡೆಯಲಿದೆ.

More articles

Latest article

Most read