ಚೆನ್ನೈ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕವಿ ತಿರುವಳ್ಳವರ್ ಅವರ ಜನ್ಮ ದಿನಾಚರಣೆ ಆಚರಿಸುವ ಮಾದರಿಯಲ್ಲೇ ತಮಿಳುನಾಡಿನಲ್ಲೂ ಕನ್ನಡದ ಸಂತ ಕವಿ ಸರ್ವಜ್ಞ ಅವರ ಜನ್ಮದಿನಾಚರಣೆ ಆಚರಿಸಲಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಮಾನಿಗಳು ಸಮೃದ್ಧ ಕರ್ನಾಟಕ ವೇದಿಕೆ ಹಾಗೂ ಸರ್ವಜ್ಞ ತಿರುವಳ್ಳವರ್ ಸೌಹಾರ್ದ ವೇದಿಕೆ ಆಶ್ರಯದಲ್ಲಿ ತಮಿಳುನಾಡಿಗೆ ತೆರಳಿ ಸರ್ವಜ್ಞ ಅವರ ಜನ್ಮದಿನಾಚರಣೆ ಆಚರಿಸಲಾಗಿದೆ.
ತಮಿಳುನಾಡಿನ ಚೆನ್ನೈ ನಗರದ ಜೀವ ಪಾರ್ಕ್ ನಲ್ಲಿರುವ ಸರ್ವಜ್ಞ ಅವರ ಪ್ರತಿಮೆಗೆ ಮಾರ್ಪಣೆ ಮಾಡಿ, ಪುಷ್ಪ ಅರ್ಪಿಸುವ ಮೂಲಕ ಕನ್ನಡದ ಸಂತ ಕವಿ ಸರ್ವಜ್ಞ ಅವರಿಗೆ ನಮನ ಸಲ್ಲಿಸಿದರು. ಸಮೃದ್ದ ಕರ್ನಾಟಕ ಹಾಗೂ ಸರ್ವಜ್ಞ ತಿರುವಳ್ಳವರ್ ಸೌಹಾರ್ದ ವೇದಿಕೆ ಇಬ್ಬರು ಶ್ರೇಷ್ಠಕವಿಗಳ ಜನ್ಮದಿನಾಚರಣೆಯನ್ನ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದೆ. ನಾಡಿನ ಸಮಸ್ತ ಜನತೆಗೆ ತ್ರಿಪದಿ ಬ್ರಹ್ಮ ಎಂದು ಪ್ರಸಿದ್ಧಿ ಪಡೆದ ಸಮಾಜ ಸುಧಾರಕರಾದ ಕವಿ ಸರ್ವಜ್ಞ ಅವರ ಜನ್ಮದಿನದ ಶುಭಾಶಯಗಳನ್ನ ಕೋರಿರುವ ಆರೋಗ್ಯ ಮತ್ತು ಕುಟುಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ತ್ರಿಪದಿಗಳ ಮೂಲಕ ಸಮಾಜದ ಕೊಳಕನ್ನು ಹೊರಹಾಕಿದ, ಜಾತಿ ವ್ಯವಸ್ಥೆಯನ್ನು ವಿಡಂಬನೆ ಮಾಡಿ ಮಾನವೀಯ ಮೌಲ್ಯ ಬಿತ್ತಿದ್ದ ಮಹಾನ್ ಸಂತರನ್ನು ಗೌರವದಿಂದ ಸ್ಮರಿಸೋಣ ಎಂದು ಕರೆ ನೀಡಿದ್ದಾರೆ.