ಕಸಾಪ ಅಧ್ಯಕ್ಷ ಮಹೇಶ್‌ ಜೋಷಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು; ಸಾಹಿತಿ, ಕನ್ನಡ ಪರ ಹೋರಾಟಗಾರರ ಒಕ್ಕೊರಲ ಆಗ್ರಹ

Most read

ಮಂಡ್ಯ: ಸರ್ವಾಧಿಕಾರ ಧೋರಣೆ, ಆರ್ಥಿಕ ಅಶಿಸ್ತು ದ್ವೇಷದ ಮನೋಭಾವದ ಧೋರಣೆಯಿಂದಾಗಿ ಕನ್ಡ ಸಾಹಿತ್ಯ ಪರಿಷತ್‌ ಘನತೆಗೆ ಚ್ಯುತಿ ಉಂಟು ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಷಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಕನ್ನಡ ಜಾಗೃತಿ ಸಮಾವೇಶ ನಿರ್ಣಯವನ್ನು ಕೈಗೊಂಡಿದೆ.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಇಂದು ಜರುಗಿದ ʼಮಂಡ್ಯದ ಕನ್ನಡ ನಾಡುನುಡಿ ಜಾಗೃತಿ ಸಮಿತಿ’ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಸಮಾವೇಶದಲ್ಲಿ ‘ಮಹೇಶ ಜೋಶಿ ವರನ್ನು ಅಮಾನತುಗೊಳಿಸಿ, ಆಡಳಿತಾಧಿಕಾರಿ ನೇಮಿಸಬೇಕು’ ಎಂದು ಸಾಹಿತಿಗಳು, ಪ್ರಗತಿಪರ ಚಿಂತಕರು, ಕನ್ನಡಪರ ಹೋರಾಟಗಾರರು ಒಕ್ಕೊರಲಿನಿಂದ ಆಗ್ರಹಪಡಿಸಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಒಟ್ಟು 12 ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಸಮಾವೇಶದಲ್ಲಿ ಸಾಹಿತಿಗಳು ಮತ್ತು ಪ್ರಗತಿಪರ ಚಿಂತಕರಾದ ಕಾಳೇಗೌಡ ನಾಗವಾರ, ಹಿ.ಶಿ.ರಾಮಚಂದ್ರೇಗೌಡ, ಆ‌ರ್.ಜಿ.ಹಳ್ಳಿ ನಾಗರಾಜ್, ಪ್ರೊ.ಬಿ.ಜಯಪ್ರಕಾಶಗೌಡ, ಸುನಂದಾ ಜಯರಾಂ, ಎಚ್.ಎಲ್.ಪುಷ್ಪಾ, ವಸುಂಧರಾ ಭೂಪತಿ, ಕೆ.ಎಸ್.ವಿಮಲ, ಪದ್ಮಾ ಶೇಖರ್, ಮೀರಾ ಶಿವಲಿಂಗಯ್ಯ, ಸಿ.ಕುಮಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಪ್ರೊ.ನಂಜರಾಜೇ ಅರಸ್, ರಾಮೇಗೌಡ ಮುಂತಾದವರು ಭಾಗವಹಿಸಿದ್ದರು.

ಮಹೇಶ ಜೋಶಿ ಅವರ ಅವಧಿಯಲ್ಲಿ ಆಗಿರುವ ಬೈಲಾ ತಿದ್ದುಪಡಿಯನ್ನು ರದ್ದುಪಡಿಸಿ 4 ವರ್ಷಗಳ ಹಿಂದೆ ಇದ್ದ ಮೂಲ ಬೈಲಾವನ್ನು ಉಳಿಸಿಕೊಳ್ಳಬೇಕು. ಕಸಾಪ ಆಜೀವ ಸದಸ್ಯರಿಗೆ, ಚುನಾಯಿತ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಷೋಕಾಸ್ ನೋಟಿಸ್‌ ನೀಡಿ ಸದಸ್ಯತ್ವ ರದ್ದುಗೊಳಿಸಲು ಮುಂದಾಗಿರುವ ಕ್ರಮವನ್ನು ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು.

ಆರ್ಥಿಕ ಮತ್ತು ಸಹಕಾರಿ ಇಲಾಖೆಯ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಿ, ಸರ್ಕಾರಕ್ಕೆ ಆಗಿರುವ ನಷ್ಟವನ್ನು ಅಧ್ಯಕ್ಷರಿಂದ ತುಂಬಿಸಿಕೊಳ್ಳಬೇಕು. ಸಮ್ಮೇಳನದ ರೂ.2.5 ಕೋಟಿ ಅನುದಾನ ಮತ್ತು ದೇಶ ವಿದೇಶಗಳಿಂದ ಪಡೆದಿರುವ ದೇಣಿಗೆ ಹಣದ ಖರ್ಚು ವೆಚ್ಚದ ಲೆಕ್ಕ ಕೊಡಬೇಕು ಎಂದು ಒತ್ತಾಯಿಸಿದರು.

ಮೈಸೂರು, ಚಾಮರಾಜನಗರ, ಹಾಸನ, ರಾಮನಗರ, ತುಮಕೂರು, ಬೆಂಗಳೂರು ಮುಂತಾದ ಜಿಲ್ಲೆಗಳಿಂದ ಬಂದಿದ್ದ ನೂರಾರು ಸಾಹಿತಿಗಳು ಮತ್ತು ಹೋರಾಟಗಾರರು ಸಂಜಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಮಹೇಶ ಜೋಶಿ ಇಳಿಸಿ, ಕಸಾಪ ಉಳಿಸಿ ಘೋಷಣೆಗಳನ್ನು ಕೂಗಿದರು.  ಸಮಾವೇಶ ಮುಗಿದ ನಂತರ ಜಿಲ್ಲಾಧಿಕಾರಿ ಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಮಹೇಶ ಜೋಶಿ ಅವರು ಪಕ್ಷ ರಾಜಕಾರಣದ ಕೊಳಕನ್ನು ಪರಿಷತ್ತಿಗೆ ಲೇಪಿಸಿದ್ದಾರೆ. ಸರ್ವಾಧಿಕಾರಿ ಧೋರಣೆಯಿಂದ ಬೈಲಾ ತಿದ್ದುಪಡಿ ಮಾಡಿ ಪರಿಷತ್ತಿನ ವಿಕೇಂದ್ರೀಕರಣ ವ್ಯವಸ್ಥೆಯನ್ನೇ ಹಾಳುಮಾಡಿದ್ದಾರೆ. ಚುನಾವಣೆಯಲ್ಲಿ ಪರಾಭವಗೊಂಡವರನ್ನು ಠೇವಣಿ ಕಳೆದಿದ್ದೇನೆ ಎಂಬ ಹಂಕಾರದ ಮಾತನ್ನು ಆಡುತ್ತಿದ್ದಾರೆ. ಸಾಹಿತ್ಯ ನೋವು ಉಂಡವರ ಕಡೆಗೆ ನಿಲ್ಲುತ್ತದೆ. ಗೆದ್ದವನ ಬಾಲ ಹಿಡಿಯುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು. ಸಾಹಿತ್ಯ ಸೇವೆ ಮಾಡುವರಿಗೆ ‘ಸಚಿವ ಸ್ಥಾನಮಾನ’ ಏಕೆ ಬೇಕು ಎಂದೂ ಕೆಲವರು ಟೀಕಿಸಿದರು.ಮಂಡ್ಯ: ಸರ್ವಾಧಿಕಾರ ಧೋರಣೆ, ಆರ್ಥಿಕ ಅಶಿಸ್ತು ದ್ವೇಷದ ಮನೋಭಾವದ ಧೋರಣೆಯಿಂದಾಗಿ ಕನ್ಡ ಸಾಹಿತ್ಯ ಪರಿಷತ್‌ ಘನತೆಗೆ ಚ್ಯುತಿ ಉಂಟು ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಷಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಕನ್ನಡ ಜಾಗೃತಿ ಸಮಾವೇಶ ನಿರ್ಣಯವನ್ನು ಕೈಗೊಂಡಿದೆ.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಇಂದು ಜರುಗಿದ ʼಮಂಡ್ಯದ ಕನ್ನಡ ನಾಡುನುಡಿ ಜಾಗೃತಿ ಸಮಿತಿ’ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಸಮಾವೇಶದಲ್ಲಿ ‘ಮಹೇಶ ಜೋಶಿ ವರನ್ನು ಅಮಾನತುಗೊಳಿಸಿ, ಆಡಳಿತಾಧಿಕಾರಿ ನೇಮಿಸಬೇಕು’ ಎಂದು ಸಾಹಿತಿಗಳು, ಪ್ರಗತಿಪರ ಚಿಂತಕರು, ಕನ್ನಡಪರ ಹೋರಾಟಗಾರರು ಒಕ್ಕೊರಲಿನಿಂದ ಆಗ್ರಹಪಡಿಸಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಒಟ್ಟು 12 ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಸಮಾವೇಶದಲ್ಲಿ ಸಾಹಿತಿಗಳು ಮತ್ತು ಪ್ರಗತಿಪರ ಚಿಂತಕರಾದ ಕಾಳೇಗೌಡ ನಾಗವಾರ, ಹಿ.ಶಿ.ರಾಮಚಂದ್ರೇಗೌಡ, ಆ‌ರ್.ಜಿ.ಹಳ್ಳಿ ನಾಗರಾಜ್, ಪ್ರೊ.ಬಿ.ಜಯಪ್ರಕಾಶಗೌಡ, ಸುನಂದಾ ಜಯರಾಂ, ಎಚ್.ಎಲ್.ಪುಷ್ಪಾ, ವಸುಂಧರಾ ಭೂಪತಿ, ಕೆ.ಎಸ್.ವಿಮಲ, ಪದ್ಮಾ ಶೇಖರ್, ಮೀರಾ ಶಿವಲಿಂಗಯ್ಯ, ಸಿ.ಕುಮಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಪ್ರೊ.ನಂಜರಾಜೇ ಅರಸ್, ರಾಮೇಗೌಡ ಮುಂತಾದವರು ಭಾಗವಹಿಸಿದ್ದರು.

ಮಹೇಶ ಜೋಶಿ ಅವರ ಅವಧಿಯಲ್ಲಿ ಆಗಿರುವ ಬೈಲಾ ತಿದ್ದುಪಡಿಯನ್ನು ರದ್ದುಪಡಿಸಿ 4 ವರ್ಷಗಳ ಹಿಂದೆ ಇದ್ದ ಮೂಲ ಬೈಲಾವನ್ನು ಉಳಿಸಿಕೊಳ್ಳಬೇಕು. ಕಸಾಪ ಆಜೀವ ಸದಸ್ಯರಿಗೆ, ಚುನಾಯಿತ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಷೋಕಾಸ್ ನೋಟಿಸ್‌ ನೀಡಿ ಸದಸ್ಯತ್ವ ರದ್ದುಗೊಳಿಸಲು ಮುಂದಾಗಿರುವ ಕ್ರಮವನ್ನು ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು.

ಆರ್ಥಿಕ ಮತ್ತು ಸಹಕಾರಿ ಇಲಾಖೆಯ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಿ, ಸರ್ಕಾರಕ್ಕೆ ಆಗಿರುವ ನಷ್ಟವನ್ನು ಅಧ್ಯಕ್ಷರಿಂದ ತುಂಬಿಸಿಕೊಳ್ಳಬೇಕು. ಸಮ್ಮೇಳನದ ರೂ.2.5 ಕೋಟಿ ಅನುದಾನ ಮತ್ತು ದೇಶ ವಿದೇಶಗಳಿಂದ ಪಡೆದಿರುವ ದೇಣಿಗೆ ಹಣದ ಖರ್ಚು ವೆಚ್ಚದ ಲೆಕ್ಕ ಕೊಡಬೇಕು ಎಂದು ಒತ್ತಾಯಿಸಿದರು.

ಮೈಸೂರು, ಚಾಮರಾಜನಗರ, ಹಾಸನ, ರಾಮನಗರ, ತುಮಕೂರು, ಬೆಂಗಳೂರು ಮುಂತಾದ ಜಿಲ್ಲೆಗಳಿಂದ ಬಂದಿದ್ದ ನೂರಾರು ಸಾಹಿತಿಗಳು ಮತ್ತು ಹೋರಾಟಗಾರರು ಸಂಜಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಮಹೇಶ ಜೋಶಿ ಇಳಿಸಿ, ಕಸಾಪ ಉಳಿಸಿ ಘೋಷಣೆಗಳನ್ನು ಕೂಗಿದರು.  ಸಮಾವೇಶ ಮುಗಿದ ನಂತರ ಜಿಲ್ಲಾಧಿಕಾರಿ ಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಮಹೇಶ ಜೋಶಿ ಅವರು ಪಕ್ಷ ರಾಜಕಾರಣದ ಕೊಳಕನ್ನು ಪರಿಷತ್ತಿಗೆ ಲೇಪಿಸಿದ್ದಾರೆ. ಸರ್ವಾಧಿಕಾರಿ ಧೋರಣೆಯಿಂದ ಬೈಲಾ ತಿದ್ದುಪಡಿ ಮಾಡಿ ಪರಿಷತ್ತಿನ ವಿಕೇಂದ್ರೀಕರಣ ವ್ಯವಸ್ಥೆಯನ್ನೇ ಹಾಳುಮಾಡಿದ್ದಾರೆ. ಚುನಾವಣೆಯಲ್ಲಿ ಪರಾಭವಗೊಂಡವರನ್ನು ಠೇವಣಿ ಕಳೆದಿದ್ದೇನೆ ಎಂಬ ಹಂಕಾರದ ಮಾತನ್ನು ಆಡುತ್ತಿದ್ದಾರೆ. ಸಾಹಿತ್ಯ ನೋವು ಉಂಡವರ ಕಡೆಗೆ ನಿಲ್ಲುತ್ತದೆ. ಗೆದ್ದವನ ಬಾಲ ಹಿಡಿಯುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು. ಸಾಹಿತ್ಯ ಸೇವೆ ಮಾಡುವರಿಗೆ ‘ಸಚಿವ ಸ್ಥಾನಮಾನ’ ಏಕೆ ಬೇಕು ಎಂದೂ ಕೆಲವರು ಟೀಕಿಸಿದರು.

More articles

Latest article