ಇರಾನ್‌ಗೆ 13 ಟನ್‌ಗಳ ವೈದ್ಯಕೀಯ ಮಾನವೀಯ ನೆರವು ಕಳುಹಿಸಿದ ರಷ್ಯಾ

ಬೆಂಗಳೂರು, ಮಾರ್ಚ್ 14: ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಅಮೇರಿಕಾ-ಇಸ್ರೇಲ್-ಇರಾನ್ ಯುದ್ಧದ ಹಿನ್ನೆಲೆಯಲ್ಲಿ, ರಷ್ಯಾ ಇರಾನ್‌ಗೆ ಮಾನವೀಯ ನೆರವು ನೀಡುವ ಮೂಲಕ ತನ್ನ ಬೆಂಬಲವನ್ನು ಘೋಷಿಸಿದೆ. ರಷ್ಯಾ ನೆರವು ಅಮೆರಿಕ ಕೆಂಗಣ್ಣಿಗೆ ಕಾರಣವಾಗಿದ್ದರೆ, ಹಲವು ದೇಶಗಳು ಈ ಸಹಾಯವನ್ನು ಶ್ಲಾಘಿಸಿವೆ.

ರಷ್ಯಾ ಸರ್ಕಾರದ ತುರ್ತು ಸಚಿವಾಲಯ (ಎಮರ್‌ಕಾಮ್) 13 ಟನ್‌ಗಳಿಗೂ ಹೆಚ್ಚಿನ ವೈದ್ಯಕೀಯ ಸಾಮಗ್ರಿಗಳನ್ನು ಇರಾನ್‌ಗೆ ಕಳುಹಿಸಿದ್ದು, ಈ ನೆರವು ಅಜರ್‌ಬೈಜಾನ್ ಮೂಲಕ ಹಾದು ಇರಾನ್ ತಲುಪಿದೆ. ಯುದ್ಧದಿಂದ ಬಳಲಿದ ಇರಾನಿನ ಆರೋಗ್ಯ ವ್ಯವಸ್ಥೆಗೆ ದೊಡ್ಡ ಬೆಂಬಲವಾಗಿ ಈ ಸಹಾಯ ಮಾಡಲಾಗಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆದೇಶದ ಮೇರೆಗೆ, ಮಾರ್ಚ್ 12ರಂದು ರಷ್ಯಾದ ತುರ್ತು ಸಚಿವಾಲಯವು ಈ ನೆರವನ್ನು ಕಳುಹಿಸಿದೆ. ಸಾಮಗ್ರಿಗಳಲ್ಲಿ ಮುಖ್ಯವಾಗಿ ಔಷಧಿಗಳು, ಪ್ರಥಮ ಚಿಕಿತ್ಸಾ ಕಿಟ್‌ಗಳು ಮತ್ತು ಅತ್ಯಗತ್ಯ ವೈದ್ಯಕೀಯ ಸರಬರಾಜುಗಳು ಸೇರಿವೆ. ಇದನ್ನು ವಿಶೇಷ Il-76 ಮಿಲಿಟರಿ ಕಾರ್ಗೋ ವಿಮಾನದ ಮೂಲಕ ಅಜರ್‌ಬೈಜಾನ್‌ಗೆ ಸಾಗಿಸಲಾಯಿತು.  ಈಗಾಗಲೇ ಅಜರ್‌ಬೈಜಾನ್‌ನಲ್ಲಿ ಇರಾನ್ ಸರ್ಕಾರದ ಅಧಿಕೃತ ಪ್ರತಿನಿಧಿಗಳಿಗೆ (ಇರಾನ್ ರೆಡ್ ಕ್ರೆಸೆಂಟ್ ಸೊಸೈಟಿ) ಹಸ್ತಾಂತರ ಮಾಡಲಾಗಿದೆ. ಅಜರ್‌ಬೈಜಾನ್ ಮತ್ತು ಇರಾನ್ ನಡುವಿನ ಭೂಮಾರ್ಗದ ಮೂಲಕ ಈ ಸಾಮಗ್ರಿಗಳು ಇರಾನ್ ತಲುಪಿವೆ.

ರಷ್ಯಾ ಸಚಿವಾಲಯದ ಪ್ರಕಾರ, “ಈ ನೆರವು ಇರಾನ್‌ನಲ್ಲಿ ಯುದ್ಧದಿಂದ ಬಳಲಿದ ಜನರಿಗೆ ಅತ್ಯಗತ್ಯವಾಗಿದ್ದು, ನಾವು ಮಾನವೀಯ ಕಳಕಳಿಯೊಂದಿಗೆ ಸಹಾಯ ಮಾಡುತ್ತಿದ್ದೇವೆ.” ಇದು ರಷ್ಯಾ-ಇರಾನ್ ನಡುವಿನ ದೀರ್ಘಕಾಲದ ಒಪ್ಪಂದದ ಭಾಗವಾಗಿದ್ದು, ಯುದ್ಧದ ಸಮಯದಲ್ಲಿ ರಷ್ಯಾ ತನ್ನ ಬೆಂಬಲವನ್ನು ಬಹಿರಂಗಗೊಳಿಸಿದ ಮೊದಲ ಪ್ರಮುಖ ಕ್ರಮವಾಗಿದೆ.

ಫೆಬ್ರವರಿ 28ರಂದು ಅಮೇರಿಕಾ ಮತ್ತು ಇಸ್ರೇಲ್ ಇರಾನ್ ಮೇಲೆ ಜಂಟಿ ದಾಳಿ ನಡೆಸಿದ ನಂತರ ಈ ಯುದ್ಧ ತೀವ್ರಗೊಂಡಿದೆ. ಇರಾನ್‌ನ ಸುಪ್ರೀಂ ಲೀಡರ್ ಅಲಿ ಖಮೇನಿಯ ಹತ್ಯೆಯೊಂದಿಗೆ ಆರಂಭವಾದ ಈ ಸಂಘರ್ಷದಲ್ಲಿ ಇರಾನ್ ತನ್ನ ಮಿಲಿಟರಿ ಮತ್ತು ಆರ್ಥಿಕ ಕೇಂದ್ರಗಳನ್ನು ಕಳೆದುಕೊಂಡಿದೆ. ಯುದ್ಧದಿಂದಾಗಿ ಸಾವಿರಾರು ನಾಗರಿಕರು ಸಾವನ್ನಪ್ಪಿದ್ದು, ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಕಾಣಿಸಿಕೊಂಡಿದೆ. ಇರಾನ್‌ನ ಆರೋಗ್ಯ ವ್ಯವಸ್ಥೆ ಭಾರೀ ಒತ್ತಡಕ್ಕೆ ಒಳಗಾಗಿದ್ದು, ಸಾಂಕ್ರಾಮಿಕ ರೋಗಗಳು ವ್ಯಾಪಿಸುವ ಭೀತಿ ಇದೆ.

ರಷ್ಯಾದ ಈ ನೆರವು ರಾಜಕೀಯವಾಗಿ ಮಹತ್ವದ್ದಾಗಿದ್ದು, ರಷ್ಯಾ ಮತ್ತು ಇರಾನ್ ನಡುವೆ ಇತ್ತೀಚಿನ ವರ್ಷಗಳಲ್ಲಿ ಬಲವಾದ ಒಪ್ಪಂದಗಳ ಭಾಗವಾಗಿ ನೆರವು ಹರಿದುಬಂದಿದೆ. ನೇರವಾಗಿ ಇರಾನ್‌ಗೆ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸುವುದು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಜರ್‌ ಬೈಜಾನ್‌ ಮೂಲಕ ಭೂಮಾರ್ಗದಲ್ಲೇ ಕಳುಹಿಸಲಾಗಿದೆ.

ಅಮೇರಿಕಾ ಮತ್ತು ಇಸ್ರೇಲ್ ಈ ನೆರವನ್ನು ಕಟುವಾಗಿ ಟೀಕಿಸಿದ್ದು “ರಷ್ಯಾ ಇರಾನ್‌ನ ಉಗ್ರಗಾಮಿ ಕ್ರಮಗಳಿಗೆ ಬೆಂಬಲ ನೀಡುತ್ತಿದೆ” ಎಂದು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ ಇರಾನ್ ಸರ್ಕಾರವು ರಷ್ಯಾಕ್ಕೆ ಕೃತಜ್ಞತೆ ಸಲ್ಲಿಸಿದ್ದು, ಇರಾನ್‌ನ ಹೊಸ ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ “ರಷ್ಯಾದ ಸಹಾಯ ನಮ್ಮ ಜನರಿಗೆ ಹೊಸ ಭರವಸೆ ನೀಡಿದೆ” ಎಂದು ಹೇಳಿದ್ದಾರೆ. ವಿಶ್ವಸಂಸ್ಥೆಯ ಮಾನವೀಯ ಸಹಾಯ ವಿಭಾಗವು ಈ ನೆರವನ್ನು ಸ್ವಾಗತಿಸಿದ್ದು, “ಯುದ್ಧದ ಸಮಯದಲ್ಲಿ ಮಾನವೀಯ ಸಹಾಯ ಅತ್ಯಗತ್ಯ” ಎಂದು ಹೇಳಿದೆ.

More articles

Latest article

Most read