ಕೋಲಾರ ಬ್ರೇಕಿಂಗ್-ಗ್ರಾಮಾಂತರ ಪೊಲೀಸರಿಂದ ವ್ಯಕ್ತಿಯ ಬಂಧನ,ಎರಡು ಲಕ್ಷ ಬೆಲೆಯ 4 ಕೆ.ಜಿ ಗಾಂಜಾ ವಶ

ಕೋಲಾರ ‌: ಇನ್ಸ್ ಫೆಕ್ಟರ್ ಕಾಂತರಾಜ್ ನೇತೃತ್ವದ ಗ್ರಾಮಾಂತರ ಠಾಣಾ ಪೊಲೀಸರ ತಂಡ ಕೋಲಾರದ ವೇಮಗಲ್ ರಸ್ತೆಯ ಸಂಗೊಂಡಹಳ್ಳಿ ಗ್ರಾಮದ ಸಮೀಪ ಆಟೋವೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನ ಬಂಧಿಸಿ ಆತನ ಬಳಿ ಇದ್ದ ಸುಮಾರು ಎರಡು ಲಕ್ಷ ರೂ. ಬೆಲೆಯ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆˌ

ಬಂಧಿತ ಆರೋಪಿ ಷಹಿನ್ ಶಾ ನಗರದ ಮುಭಾರಕ್ ಪಾಷ ಎನ್ನಲಾಗಿದ್ದು ಈತ ವೇಮಗಲ್ ರಸ್ತೆಯ ಕಂಡಿ ಗಣಪತಿ ದೇವಸ್ಥಾನದ ಸಮೀಪ ತನ್ನ ಬಜಾಜ್ ಆಟೋದಲ್ಲಿ ಒಣ ಗಾಂಜಾವನ್ನು ಮಾರಾಟ ಮಾಡುತ್ತಿದ್ದಾಗ
ಸಿಕ್ಕಿಬಿದ್ದಿದ್ದಾನೆ.
ಆಟೋದಲ್ಲಿದ್ದ ಒಂದು ಡಿಜಿಟಲ್ ತೂಕದ ಯಂತ್ರವನ್ನೂ ಪೋಲೀಸರು ವಶಪಡಿಸಿಕೊಂಡಿದ್ದಾರೆ.

More articles

Latest article

Most read