Thursday, December 12, 2024

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ

Most read

ಮುಂಬೈ: ವಿದೇಶಿ ನಿಧಿಯ ನಿರಂತರ ಹೊರಹರಿವು ಮತ್ತು ದೇಶಿ ಮಾರುಕಟ್ಟೆಯಲ್ಲಿನ ಮಂದಗತಿಯ ವಹಿವಾಟಿನ ಪರಿಣಾಮ ಆರಂಭಿಕ ವಹಿವಾಟಿನಲ್ಲಿ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 1 ಪೈಸೆ ಕುಸಿದಿದ್ದು, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ವಹಿವಾಟಿನ ಆರಂಭದಲ್ಲೇ 84.38 ಕ್ಕೆ ಇಳಿದಿದೆ.

ಡಾಲರ್ ಸೂಚ್ಯಂಕ ಇಳಿಕೆಯಾದಲ್ಲಿ ಅಥವಾ ವಿದೇಶಿ ನಿಧಿಯ ಹೊರಹರಿವು ನಿಯಂತ್ರಣಕ್ಕೆ ಬಾರದಿದ್ದರೆ ರೂಪಾಯಿ ಮೌಲ್ಯ ಒತ್ತಡದಲ್ಲೇ ಉಳಿಯುವ ಸಾಧ್ಯತೆಯಿದೆ ಎಂದು ಫಾರೆಕ್ಸ್ ಟ್ರೇಡರ್ಸ್ ಅಂದಾಜುಮಾಡಿದೆ. ಶುಕ್ರವಾರ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ 5 ಪೈಸೆಯಷ್ಟು ಕುಸಿದು ವಹಿವಾಟಿನ ಅಂತ್ಯಕ್ಕೆ 184.37 ಆಗಿತ್ತು.

ರೂಪಾಯಿಯು 83.80 ರಿಂದ 84.50 ಶ್ರೇಣಿಯೊಳಗೆ ವಹಿವಾಟು ನಡೆಸುವ ನಿರೀಕ್ಷೆಯಿದೆ ಎಂದು ವಿದೇಶಿ ವಿನಿಮಯ ಸಲಹೆಗಾರರ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಪಬಾರಿ ಅಭಿಪ್ರಾಯಪಟ್ಟಿದ್ದಾರೆ.

More articles

Latest article