ಬೆಂಗಳೂರು: ಮುಂಬೈ ಮೂಲದ ಸೈಬರ್ ವಂಚಕರು ಸಿಬಿಐ ಪೊಲೀಸರ ಹೆಸರಿನಲ್ಲಿ ಬೆಂಗಳೂರಿನ 83 ವರ್ಷದ ವೃದ್ದೆಗೆ ರೂ. 1 ಕೋಟಿಗೂ ಅಧಿಕ ಹಣ ವಂಚಿಸಿದ್ದಾರೆ. ಮುಂಬೈ ಪೊಲೀಸರ ಹೆಸರಿನಲ್ಲಿ ಕರೆ ಮಾಡಿದ್ದ ಆರೋಪಿಗಳು, ನಿಮ್ಮ ಮತ್ತೊಂದು ದೂರವಾಣಿ ಸಂಖ್ಯೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ನಡೆಯುತ್ತಿದ್ದು, ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿದ್ದಾರೆ.
ನಂತರ ಆರೋಪಿಗಳು ವೃದ್ಧೆಯ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದಿದ್ದಾರೆ. ಆರೋಪಿಗಳ ಬೆದರಿಕೆಗೆ ಹೆದರಿದ ವೃದ್ಧೆ ಆರೋಪಿಗಳ ಖಾತೆ ಹಂತ ಹಂತವಾಗಿ 32 ಲಕ್ಷ ರೂ., 50 ರೂ. ಲಕ್ಷ, 32 ಲಕ್ಷ ರೂ., 10 ಲಕ್ಷ ರೂ. ಒಟ್ಟು 1.24 ಕೋಟಿ ರೂ. ಸೈಬರ್ ವಂಚಕರ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಹಣ ಖಾತೆಗೆ ಜಮೆಯಾದ ಬಳಿಕ ಆರೋಪಿಗಳು ಮತ್ತೆ ಸಂಪರ್ಕ ಮಾಡಿಲ್ಲ. ಇದರಿಂದ ಅನುಮಾನಗೊಂಡ ವೃದ್ಧೆ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಈ ಘಟನೆ ನಡೆದು ಎರಡು ತಿಂಗಳ ಬಳಿಕ ವೃದ್ಧೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ವೃದ್ಧೆ ನೀಡಿದ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.