ಹಾಲು ಉತ್ಪಾದಕರಿಗೆ ಲೀಟರ್‌ಗೆ 1 ರೂ. ಪ್ರೋತ್ಸಾಹ ಧನ

ಈ ವರ್ಷ ಬಮೂಲ್ ನಿಂದ ಒಟ್ಟು 59.39 ಕೋಟಿ ಲೀಟರ್ ಹಾಲು ಉತ್ಪಾದನೆ

ಬೆಂಗಳೂರು : ಯುಗಾದಿ ಸಂದರ್ಭದಲ್ಲಿ ಹಾಲು ಉತ್ಪಾದಕರಿಗೆ ಬೆಂಗಳೂರು ಹಾಲು ಒಕ್ಕೂಟ (ಬಮುಲ್)   ಪ್ರತಿ ಲೀಟರ್‌ಗೆ ಒಂದು ರೂ. ಪ್ರೋತ್ಸಾಹ ಧನ ಹೆಚ್ಚಿಸಿ ಕೊಡುಗೆ ನೀಡಿದೆ.

ಪ್ರೋತ್ಸಾಹ ಧನ  ಏಪ್ರಿಲ್ 1, 2025 ರಿಂದ ಮಾರ್ಚ್ 31, 2026ರ ವರೆಗೆ ರೈತರು ಪೂರೈಸುವ ಪ್ರತಿ ಲೀಟರ್ ಹಾಲಿಗೆ 1 ರೂಪಾಯಿಯಂತೆ ಒಟ್ಟು 59.39 ಕೋಟಿ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಘೋಷಿಸಿದ್ದಾರೆ.

ಪ್ರಸಕ್ತ ವರ್ಷ ರೈತರಿಂದ 59.39 ಕೋಟಿ ಲೀಟರ್ ಹಾಲು ಖರೀದಿಸಿದ್ದೇವೆ. ಕಾರ್ಮಿಕರಿಗೆ ಅಂದಾಜು 6 ಕೋಟಿ ರೂ. ಡಿಎ ಕೊಡಬೇಕು. ನಾವು ಅಂದಾಜು 60 ಕೋಟಿ ರೂ. ಲಾಭಗಳಿಸುವ ಹಂತಕ್ಕೆ ಬಂದಿದ್ದೇವೆ. ಆದ್ದರಿಂದ ಆದಾಯ ಹಂಚಿಕೆ ರೂಪದಲ್ಲಿ ತಲಾ ಲೀಟರ್‌ಗೆ 1 ರೂಪಾಯಿಯಂತೆ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು. ಸಿಬ್ಬಂದಿಗೆ ಬಾಕಿ ಇದ್ದ ಹಣ ಕೊಡಲು ತೀರ್ಮಾನಿಸಲಾಗಿದೆ. ಹಾಗೂ ಗುತ್ತಿಗೆದಾರರಿಗೆ ವಾರ್ಷಿಕ 5 ಸಾವಿರ ಬೋನಸ್ ನೀಡಲು ನಿರ್ಧರಿಸಿದ್ದೇವೆ ಎಂದು ಸುರೇಶ್‌ ತಿಳಿಸಿದರು.

ಬೆಂಗಳೂರು ಹಾಲು ಒಕ್ಕೂಟಕ್ಕೆ ಸುದೀರ್ಘ ಇತಿಹಾಸವಿದೆ. 1965ರಲ್ಲಿ ಡೈರಿ ಕಟ್ಟಡ ನಿರ್ಮಾಣವಾದಾಗ ಕೋಲಾರ ಜಿಲ್ಲೆಯೂ ನಮ್ಮ ಒಕ್ಕೂಟದ ವ್ಯಾಪ್ತಿಯಲ್ಲೇ ಇತ್ತು. ಅಂದಿನಿಂದ ಇಂದಿನವರೆಗೆ ಹಾಲು ಉತ್ಪಾದಕರು ಮತ್ತು ಒಕ್ಕೂಟ ಬೆಳೆಯುತ್ತಾ ಇಂದು ನಂದಿನಿ ಎಂಬ ಬೃಹತ್ ಶಕ್ತಿಯಾಗಿ ರೂಪುಗೊಂಡಿದೆ. ರೈತ ಸಮುದಾಯ, ಅದರಲ್ಲೂ ವಿಶೇಷವಾಗಿ ಕ್ಷೀರ ಸಮುದಾಯವನ್ನು ಬಲಪಡಿಸುವುದು ನಮ್ಮ ಪ್ರಮುಖ ಉದ್ದೇಶ ಎಂದರು.

ಈಗ ಈ ಘೋಷಣೆಯ ಲಾಭವನ್ನು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ಲಕ್ಷಾಂತರ ಹಾಲು ಉತ್ಪಾದಕರು ಪಡೆಯಲಿದ್ದಾರೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕುಸಿಯುತ್ತದೆ. ಉತ್ಪಾದನೆಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಸುಮಾರು 500 ಕೋಟಿ ರೂಪಾಯಿ ಆದಾಯಗಳಿಸುವ ಗುರಿ ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು.

ಖಾಸಗಿ ಹಾಲು ಒಕ್ಕೂಟಗಳಿಂದ ನಮಗೆ ಪ್ರಬಲ ಪೈಪೋಟಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಹಕರಿಗೆ ಅತ್ಯಂತ ಗುಣಮಟ್ಟದ ಉತ್ಪನ್ನಗಳನ್ನು ತಲುಪಿಸುವುದು ನಮ್ಮ ಜವಾಬ್ದಾರಿ. ಪ್ರಸ್ತುತ ರಾಜ್ಯದಲ್ಲಿ ಪ್ರತಿನಿತ್ಯ ಸುಮಾರು 1 ಕೋಟಿ ಲೀಟರ್ ಹಾಲು ವಿತರಣೆಯಾಗುತ್ತಿದ್ದು, ಇದರಲ್ಲಿ ಬಮೂಲ್ ಪಾಲು 16.25 ಲಕ್ಷ ಲೀಟರ್. ನಾವು ಕೇವಲ 24 ಗಂಟೆಯೊಳಗೆ ತಾಜಾ ಮತ್ತು ಗುಣಮಟ್ಟದ ಹಾಲನ್ನು ಗ್ರಾಹಕರಿಗೆ ತಲುಪಿಸುತ್ತಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಾಲಿನ ದರವನ್ನು ಲೀಟರ್‌ಗೆ 4 ರೂಪಾಯಿ ಹೆಚ್ಚಿಸಿ, ಆ ಲಾಭವನ್ನು ನೇರವಾಗಿ ರೈತರಿಗೆ ತಲುಪಿಸಲಾಗುತ್ತಿದೆ ಎಂದು ಡಿ.ಕೆ.ಸುರೇಶ್ ತಿಳಿಸಿದರು.

ಶೇ.65ರಷ್ಟು ಹಾಲು ಮಾರಾಟ : ಈ ವರ್ಷ ಬಮೂಲ್ ಒಟ್ಟು 59.39 ಕೋಟಿ ಲೀಟರ್ ಹಾಲು ಉತ್ಪಾದಿಸಿದೆ. ಇದರಲ್ಲಿ  ಶೇ. 60ರಿಂದ 65 ರಷ್ಟು ಹಾಲಿನ ರೂಪದಲ್ಲಿ ಮಾರಾಟವಾಗುತ್ತಿದೆ. ಒಕ್ಕೂಟದ ಆಡಳಿತಾತ್ಮಕ ವೆಚ್ಚಗಳು ಹೆಚ್ಚಾಗುತ್ತಿವೆ. ತಿಂಗಳಿಗೆ ಸುಮಾರು 15 ರಿಂದ 16 ಕೋಟಿ ರೂ. ಸಿಬ್ಬಂದಿ ವೇತನಕ್ಕಾಗಿ ಬೇಕಾಗುತ್ತದೆ. 2024ರ ಡಿಎ ನೀಡಲಾಗಿದ್ದು, 2025 ರ ಡಿಎ ಅನುಷ್ಠಾನದ ಹಂತದಲ್ಲಿದೆ. ಕಾರ್ಮಿಕರ ಹಿತದೃಷ್ಟಿಯಿಂದ 1,800 ಕಾಂಟ್ರಾಕ್ಟ್ ಲೇಬರ್‌ಗಳಿಗೆ ವಾರ್ಷಿಕ 5,000 ರೂ. ಸಹಾಯಧನ ಹಾಗೂ ಸೊಸೈಟಿ ನಿರ್ವಹಣೆ ಮಾಡುವ ಸಿಬ್ಬಂದಿಗಳಿಗೆ 15,000 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ರೈತರಿಗೆ ಲಾಭದ ಹಂಚಿಕೆಯ ಮೂಲಕ 1965ರ ನಂತರ ಇದೇ ಮೊದಲ ಬಾರಿಗೆ ಬಮೂಲ್ ಒಂದು ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇದರಿಂದ ಒಕ್ಕೂಟಕ್ಕೆ ಹಾಲು ಪೂರೈಸುವ 1.27 ಲಕ್ಷ ರೈತರಿಗೆ ಲಾಭ ದೊರೆಯಲಿದೆ ಎಂದು ತಿಳಿಸಿದರು.

More articles

Latest article

Most read