Saturday, December 7, 2024

ಚಿನ್ನಸ್ವಾಮಿಯಲ್ಲಿ ರನ್ ಹೊಳೆ ಹರಿಸಿದ ರೋಹಿತ್, ರಿಂಕು, ಅಫಘಾನಿಸ್ತಾನಕ್ಕೆ 213 ರನ್ ಟಾರ್ಗೆಟ್

Most read

ಕೇವಲ 22 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಚಿಂತಾಜನಕ ಸ್ಥಿತಿಗೆ ತಲುಪಿದ್ದ ಭಾರತ ತಂಡವನ್ನು ಪಾರುಮಾಡಿದ ನಾಯಕ ರೋಹಿತ್ ಶರ್ಮಾ ಮತ್ತು ಭಾರತ ಕ್ರಿಕೆಟ್ ನ ಹೊಸ ತಾರೆ ರಿಂಕು ಸಿಂಗ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಹೊಳೆಯನ್ನೇ ಹರಿಸಿದರು. ಕೊನೆಯ ಓವರ್ ನಲ್ಲಿ 36 ರನ್ ಬಾಚಿದ ಭಾರತ ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು.

ಅಫಘಾನಿಸ್ತಾನ‌ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಗೆಲ್ಲಲು ಅಫಘಾನಿಸ್ತಾನ 213 ರನ್ ಗಳಿಸಬೇಕಿದೆ.

ನಾಯಕ ರೋಹಿತ್ ಶರ್ಮಾ ಇಂದು ಬೇರೆಯದೇ ಮೂಡ್ ನಲ್ಲಿದ್ದರು. ಕೊನೆಯ ಹತ್ತು ಓವರ್ ಗಳಲ್ಲಿ ಆಕ್ರಮಣಕಾರಿಯಾದ ರೋಹಿತ್ ಮೈದಾನದ ಎಲ್ಲ ಕಡೆ ಬ್ಯಾಟ್ ಬೀಸಿದರು. ಅವರ ಅದ್ಭುತ ಶತಕದಲ್ಲಿ 8 ಸಿಕ್ಸರ್, 11 ಬೌಂಡರಿಗಳಿದ್ದವು. ಓಟಾಗದೆ 121 ರನ್ ಗಳಿಸಿದ ರೋಹಿತ್ ತಮ್ಮ ಈ ಮನಮೋಹಕ ಆಟಕ್ಕೆ ತೆಗೆದುಕೊಂಡು ಕೇವಲ 69 ಎಸೆತಗಳನ್ನು ಮಾತ್ರ.

ನಾಲ್ಕು ವಿಕೆಟ್ ಗಳು ಪತನವಾದಾಗ ಆಡಲು ಬಂದ ರಿಂಕೂ ಸಿಂಗ್ ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದರೂ ನಂತರ ರನ್ ಗತಿ ಏರಿಸುತ್ತ ಹೋದರು. ರಿಂಕೂ ಬ್ಯಾಟ್ ನಿಂದ ಸಿಡಿದ ಸಿಕ್ಸರ್ ಗಳ ಸಂಖ್ಯೆ 6. ಕೇವಲ 39 ಎಸೆತಗಳಲ್ಲಿ ರಿಂಕೂ ಸಿಂಗ್ 69 ರನ್ ಗಳಿಸಿ ಔಟಾಗದೇ ಉಳಿದರು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಟೀಂ ಇಂಡಿಯಾಗೆ ಸಾಲು ಸಾಲು ಆರಂಭಿಕ ಆಘಾತಗಳು ಕಾದಿದ್ದವು.. ಯಶಸ್ವಿ ಜೈಸ್ವಾಲ್​​ ಕೇವಲ 4 ರನ್​ಗೆ ಔಟ್​ ಆದರೆ, ವಿರಾಟ್​ ಕೊಹ್ಲಿ ಮತ್ತು ಶೂನ್ಯಕ್ಕೆ ಔಟಾದರು. ಮೂರೂ ಬ್ಯಾಟ್ಸ್ ಮನ್ ಗಳು ಒಂದೇ ರೀತಿಯ ಹೊಡೆತ ಹೊಡೆಯಲು ಹೋಗಿ ಔಟಾದರು. ಇನ್ನು ಮೊದಲ ಎರಡು ಪಂದ್ಯಗಳ ಹೀರೋ ಶಿವಂ ದುಬೆಯವರ ಬ್ಯಾಟ್ ಕೂಡ ಹೆಚ್ಚು ಮಾತಾಡಲಿಲ್ಲ.

ಭಾರತ ತಂಡ ಪೇರಿಸುವ ಬೃಹತ್ ಮೊತ್ತವನ್ನು ಚೇಸ್ ಮಾಡುತ್ತಿರುವ ಅಫಘಾನಿಸ್ತಾನ ತಂಡ ನಾಲ್ಕು ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 37 ರನ್ ಗಳಿಸಿ ಉತ್ತಮ‌ ಆರಂಭ ಪಡೆದಿದೆ.

More articles

Latest article