ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ ಜೆಡಿ ನೆಲಕಚ್ಚುತ್ತಿದ್ದಂತೆ ಪಕ್ಷದ ವರಿಷ್ಠ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಕುಟುಂಬದಲ್ಲೂ ಬಿರುಕು ಮೂಡಿದೆ. ಫಲಿತಾಂಶ ಪ್ರಕಟವಾದ ಒಂದು ದಿನದ ನಂತರ ಎಕ್ಸ್ ನಲ್ಲಿ ರೋಹಿಣಿ ಆಚಾರ್ಯ ಅವರು, ರಾಜಕೀಯದಿಂದ ಹೊರಬರುತ್ತಿರುವುದರ ಜತೆಗೆ ಲಾಲೂ ಕುಟುಂಬದಿಂದಲೂ ಸಂಬಂಧವನ್ನು ಕಡಿದುಕೊಳ್ಳುತ್ತಿರುವದಾಗಿ ತಿಳಿಸಿದ್ದಾರೆ.
ಡಿಸೆಂಬರ್ 2024ರ ಡಿಸೆಂಬರ್ ನಲ್ಲಿ ರೋಹಿಣಿ ಅವರು ತನ್ನ ಮೂತ್ರಪಿಂಡವನ್ನು ಲಾಲೂ ಪ್ರಸಾದ್ ಅವರಿಗೆ ದಾನ ಮಾಡಿ ಗಮನ ಸೆಳೆದಿದ್ದರು.
ಸಂಜಯ್ ಯಾದವ್ ಮತ್ತು ರಮೀಜ್ ಅವರು ರಾಜಕೀಯವನ್ನು ತೊರೆಯುವಂತೆ ಮತ್ತು ಕುಟುಂಬವನ್ನು ತ್ಯಜಿಸುವಂತೆ ಕೇಳಿಕೊಂಡಿದ್ದಾರೆ. ಅವರ ಅಣತಿಯಂತೆ ನಾನು ನಡೆದುಕೊಳ್ಳುತ್ತಿದ್ದೇನೆ ಮತ್ತು ಎಲ್ಲಾ ಆಪಾದನೆಗಳನ್ನು ನಾನೇ ಹೊರುತ್ತಿದ್ದೇನೆ ಎಂದಿದ್ದಾರೆ.
ರೋಹಿಣಿ ಆಚಾರ್ಯ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಎರಡನೇ ಪುತ್ರಿ ಮತ್ತು ತೇಜಸ್ವಿ ಯಾದವ್ ಅವರ ಸಹೋದರಿ. ಎಂಬಿಬಿಎಸ್ ಪದವಿ ಪಡೆದಿರುವ ಅವರು, ಸಾಫ್ಟ್‌ವೇರ್ ಎಂಜಿನಿಯರ್ ಸಮರೇಶ್ ಸಿಂಗ್ ಅವರನ್ನು ವಿವಾಹವಗಿದ್ದಾರೆ. ಸಮರೇಶ್ ಅವರು ಲಾಲು ಪ್ರಸಾದ್ ಯಾದವ್ ಅವರ ಸ್ನೇಹಿತ ನಿವೃತ್ತ ಆದಾಯ ತೆರಿಗೆ ಅಧಿಕಾರಿ ರಾಯ್ ರಣವಿಜಯ್ ಸಿಂಗ್ ಅವರ ಪುತ್ರರಾಗಿದ್ದಾರೆ.
ರೋಹಿಣಿ ಆಚಾರ್ಯ ಅವರು ತಮ್ಮ ಮತ್ತೊಬ್ಬ ಸಹೋದರ ತೇಜ್ ಪ್ರತಾಪ್ ಯಾದವ್ ಅವರನ್ನು ಆರ್ ಜೆಡಿ ಮತ್ತು ಮತ್ತು ಕುಟುಂಬ ಎರಡರಿಂದಲೂ ಹೊರಹಾಕುವ ತಂದೆಯ ನಿರ್ಧಾರವನ್ನು ಬೆಂಬಲಿಸಿದ್ದರು.

