ನವದೆಹಲಿ: ಸಂಸತ್ತಿನಲ್ಲಿ ಜನ ಸಾಮಾನ್ಯರ ಸಮಸ್ಯೆಗಳನ್ನು ಕುರಿತು ಧ್ವನಿ ಎತ್ತುವುದು ನಾಟಕವಲ್ಲ. ಬದಲಾಗಿ ಶ್ರೀಸಾಮಾನ್ಯರಿಗೆ ಸಂಬಂಧಪಟ್ಟ ವಿಷಯಗಳಿಗೆ ಚರ್ಚೆಗೆ ಅವಕಾಶ ನೀಡದಿರುವುದೇ ನಾಟಕ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತಿನಲ್ಲಿ ಪ್ರತಿ ಪಕ್ಷಗಳು ನಾಟಕವಾಡುತ್ತಿವೆ ಎಂಬ ಮೋದಿ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ, ವಾಯು ಮಾಲಿನ್ಯದಂತಹ ತುರ್ತು ವಿಷಯಗಳನ್ನು ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ಮತ್ತು ಇದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಪಡಿಸಿದ್ದಾರೆ.
ಸಂಸತ್ತು ಇರುವುದಾದರೂ ಏತಕ್ಕಾಗಿ ಎಂದು ಪ್ರಶ್ನಿಸಿರುವ ಅವರು, ಅಲ್ಲಿ ನಡೆಯುವುದು ನಾಟಕವಲ್ಲ, ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತನಾಡುವುದು ನಾಟಕವಲ್ಲ ಎಂದು ಟೀಕಿಸಿದ್ದಾರೆ.
ವಾಯು ಮಾಲಿನ್ಯ ಕುರಿತು ಚರ್ಚೆ ಮಾಡಿದರೆ ತಪ್ಪೇನು? ಎಸ್ ಐಆರ್ ಕುರಿತು ಮಾತನಾಡಬಾರದೇ ಇಂತಹ ಗಂಭೀರ ವಿಷಯಗಳನ್ನು ಕುರಿತು ಚರ್ಚಿಸಲು ಅವಕಾಶ ಏಕೆ ನೀಡುತ್ತಿಲ್ಲ ಎಂದು ಪ್ರಿಯಾಂಕಾ ಗಾಂಧಿ ಕೇಳಿದ್ದಾರೆ.

