ಯುಕೆ ಚುನಾವಣೆ | ರಿಷಿ ಸುನಕ್‌ಗೆ ಸೋಲು, ಲೇಬರ್ ಪಾರ್ಟಿಗೆ ಭರ್ಜರಿ ಗೆಲುವು

Most read

ಬ್ರಿಟನ್ ಸಂಸತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ವಿರೋಧ ಪಕ್ಷವಾಗಿದ್ದ ಲೇಬರ್ ಪಾರ್ಟಿ ಪ್ರಚಂಡ ಗೆಲುವು ಸಾಧಿಸಿದೆ. ಪ್ರಧಾನಿ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ ಹೀನಾಯ ಸೋಲು ಕಂಡಿದೆ.

ಬ್ರಿಟನ್ ಸಂಸತ್ತಿನ 650 ಸ್ಥಾನಗಳಿಗೆ ಗುರುವಾರ ಮತಪತ್ರಗಳ ಮೂಲಕ ಚುನಾವಣೆ ನಡೆದಿದ್ದು, ಮತ ಎಣಿಕೆ ಅಂತ್ಯವಾಗಿದೆ. 14 ವರ್ಷಗಳ ಕಾಲ ಬ್ರಿಟನ್ನಲ್ಲಿ ಆಡಳಿತ ನಡೆಸಿದ ಕನ್ಸರ್ವೇಟಿವ್ ಪಕ್ಷ ಈ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದೆ. ಈ ಮೂಲಕ ಲೇಬರ್ ಪಾರ್ಟಿ ಭರ್ಜರಿ ಗೆಲುವಿನ ಮೂಲಕ ಅಧಿಕಾರದ ಗದ್ದುಗೆ ಏರಿದೆ. ಇಂದು ಸಂಜೆಯ ವೇಳೆಗೆ ಸಂಪೂರ್ಣ ಫಲಿತಾಂಶ ಪ್ರಕಟವಾಗಲಿದೆ.

ಲೇಬರ್ ಪಾರ್ಟಿ 410 ಸೀಟುಗಳನ್ನು ಗೆದ್ದರೆ, ಕನ್ಸರ್ವೇಟಿವ್ ಪಕ್ಷಕ್ಕೆ ಕೇವಲ 131 ಸ್ಥಾನಗಳು ಸಿಗಲಿವೆ ಎಂದು ತಿಳಿದುಬಂದಿದೆ. ಬ್ರಿಟನ್ನಲ್ಲಿ ಯಾವುದೇ ಪಕ್ಷ ಅಧಿಕಾರ ಹಿಡಿಯಲು 326 ಸ್ಥಾನಗಳನ್ನು ಗೆಲ್ಲಬೇಕಿದೆ.

ಕೀರ್ ಸ್ಟಾರ್ಮರ್ ಅವರು ಲೇಬರ್ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ. ಪಕ್ಷಕ್ಕೆ ಸಿಕ್ಕಿರುವ ಭಾರೀ ಬೆಂಬಲವನ್ನು ಗಮನಿಸಿದ ಸ್ಟಾರ್ಮರ್ ಮತದಾರರಿಗೆ ಧನ್ಯವಾದ ಹೇಳಿದ್ದಾರೆ.

ನವದೆಹಲಿ ಮತ್ತು ಲಂಡನ್ ಎರಡು ದೇಶಗಳ ನಡುವಿನ ವ್ಯಾಪಾರವನ್ನು ಹೆಚ್ಚಿಸಲು ಎರಡು ವರ್ಷಗಳಿಂದ ಪ್ರಸ್ತಾವಿತ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ಕುರಿತು ಮಾತುಕತೆ ನಡೆಸುತ್ತಿವೆ. ಆದಾಗ್ಯೂ, ಲೇಬರ್ ಪಾರ್ಟಿಯ ಗೆಲುವು FTA ಮಾತುಕತೆಗಳಲ್ಲಿ ಬದಲಾವಣೆಗೆ ಕಾರಣವಾಗಬಹುದು.

UK General Elections, Labour Party, Rishi Sunak, Conservative Party,

More articles

Latest article