ಒಂದು ಕಾಲದಲ್ಲಿ ಚುನಾವಣಾ ಭದ್ರತಾ ಠೇವಣಿ ಕಳೆದುಕೊಳ್ಳುವುದು ಎಂದರೆ ದೊಡ್ಡ ಅವಮಾನದಂತೆ ಕಾಣುತ್ತಿದ್ದರು. ಆದರೆ ಕಳೆದ ಹಲವು ವರ್ಷಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅದರಂತೆ ಚುನಾವಣೆಯಲ್ಲಿ ಇಟ್ಟ ಭದ್ರತಾ ಠೇವಣಿಯನ್ನು ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳಿಂದ ತಿಳಿದುಬಂದಿದೆ.
1951-52ರ ಚೊಚ್ಚಲ ಲೋಕಸಭಾ ಚುನಾವಣೆಯಲ್ಲಿ, ಸುಮಾರು 40 ಪ್ರತಿಶತ ಅಂದರೆ, 1,874 ಅಭ್ಯರ್ಥಿಗಳಲ್ಲಿ 745 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ನಂತರದ ಲೋಕಸಭೆ ಚುನಾವಣೆಗಳಲ್ಲಿ ಅಭ್ಯರ್ಥಿಗಳು ಠೇವಣಿ ಕಳೆದುಕೊಳ್ಳುವ ಪ್ರವೃತ್ತಿ ನಿರಂತರವಾಗಿ ಹೆಚ್ಚುತ್ತಿದೆ. 1996ರ 11 ನೇ ಲೋಕಸಭೆ ಚುನಾವಣೆಯಲ್ಲಿ ಶೇ91 ಪ್ರತಿಶತ ಅಂದರೆ, 13,952 ಅಭ್ಯರ್ಥಿಗಳಲ್ಲಿ 12,688 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು. ಇದು ಲೋಕಸಭೆ ಸ್ಥಾನಗಳಿಗೆ ಅತಿ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ ವರ್ಷವಾಗಿತ್ತು.
1991-92 ರಲ್ಲಿ, 8,749 ಸ್ಪರ್ಧಿಗಳಲ್ಲಿ 7,539 ಅಭ್ಯರ್ಥಿಗಳು ತಮ್ಮ ಭದ್ರತಾ ಠೇವಣಿ ಕಳೆದುಕೊಂಡಿದ್ದರು, ಶೇ.86 ಪ್ರತಿಶತ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರೆ. 2009 ರಲ್ಲಿ, 8,070 ರಲ್ಲಿ 6,829 ಅಭ್ಯರ್ಥಿಗಳು, ಅಂದರೆ ಶೇಕಡಾ 85 ರಷ್ಟು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು 2014 ರಲ್ಲಿ ಶೇಕಡಾ 84 ರಷ್ಟು, . 8,251 ಅಭ್ಯರ್ಥಿಗಳಲ್ಲಿ 7,000 ಮಂದಿ ಭದ್ರತಾ ಠೇವಣಿ ಕಳೆದುಕೊಂಡರು. ಮುಟ್ಟುಗೋಲು ಎಂಬ ನಿಯಮ ಚುನಾವಣೆಗೆ ಸ್ಪರ್ಧಿಸಲು ಅಡ್ಡಿಯಾಗಿಲ್ಲ ಎಂದು ಇದರಿಂದ ಕಾಣಬಹುದು. 2019 ರ ಚುನಾವಣೆಯಲ್ಲಿ, ಶೇ.86 ಪ್ರತಿಶತದಷ್ಟು ಅಭ್ಯರ್ಥಿಗಳು ಈ ಠೇವಣಿ ಕಳೆದುಕೊಂಡಿದ್ದರು.
ಮೊದಲ ಲೋಕಸಭಾ ಚುನಾವಣೆಯ ನಂತರ, ಸ್ಪರ್ಧಿಸಿದ 91,160 ಅಭ್ಯರ್ಥಿಗಳಲ್ಲಿ 71,246 ಮಂದಿ ತಮ್ಮ ಭದ್ರತಾ ಠೇವಣಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ, ಇದು ಒಟ್ಟು ಶೇಕಡಾ 78 ರಷ್ಟಿದೆ.
ಹೌದು, 1951ರ ಮೊದಲ ಲೋಕಸಭಾ ಚುನಾವಣೆಯ ನಂತರ 71,000 ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಚಲಾವಣೆಯಾದ ಒಟ್ಟು ಮಾನ್ಯವಾದ ಮತಗಳ ಕನಿಷ್ಠ ಆರನೇ ಒಂದು ಭಾಗದಷ್ಟು ಮತಗಳನ್ನು ಪಡೆಯಲು ವಿಫಲವಾದ ಕಾರಣ ತಮ್ಮ ಭದ್ರತಾ ಠೇವಣಿ ಕಳೆದುಕೊಂಡಿದ್ದಾರೆ.
ಚುನಾವಣಾ ಠೇವಣಿ ಕಳೆದುಕೊಳ್ಳುತ್ತಿರುವ ಬಹುತೇಕರು ಸಮಾಜದ ಓರೆಕೋರೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವವರಾಗಿದ್ದಾರೆ. ಮತ್ತವರು ಸಮಾಜದಲ್ಲಿರುವ ಅನೇಕ ಸಮಸ್ಯೆಗಳಿಗೆ ತಾವು ಉತ್ತರರಾಗಬಲ್ಲರೂ ಎಂಬ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೊಲುವಿಗಾಗಿ ಓಡಾಡುತ್ತಾರೆ. ಠೇವಣಿ ಕಳೆದುಕೊಂಡರೂ ಅವರು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಮತ್ತೆ ಮತ್ತೆ ಚುನಾಔಣೆಗೆ ನಿಲ್ಲುತ್ತಾರೆ ಎಂದು ರಾಜಕೀಯ ಚಿಂತಕರು ವಿಶ್ಲೇಸುತ್ತಾರೆ.