ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ಇಂದು ನಡೆಯಿತು.
ಈ ಪ್ರಕರಣದಲ್ಲಿ ಪವಿತ್ರಾ ಗೌಡ ಅವರು ಎ-1 ಆರೋಪಿಯಾಗಿದ್ದರೆ ನಟ ದರ್ಶನ್ ಎ-2 ಆರೋಪಿಯಾಗಿದ್ದಾರೆ. ವಿಚಾರಣೆ ಆರಂಭವಾದಾಗ ದರ್ಶನ್ ದೂರ ನಿಂತಿದ್ದರು. ಹೆಸರನ್ನು ಕರೆದಾಗಲೂ ದರ್ಶನ್ ದೂರವೇ ಇದ್ದರು. ಆಗ ನ್ಯಾಯಾದೀಶರು ಆರೋಪಿ ಸಂಖ್ಯೆಗೆ ಅನುಗುಣವಾಗಿ ನಿಲ್ಲುವಂತೆ ಸೂಚಿಸಿದಾಗ ದರ್ಶನ್, ಪವಿತ್ರಾ ಗೌಡ ಪಕ್ಕಕ್ಕೆ ಬಂದು ನಿಂತುಕೊಂಡರು.
ಅಷ್ಟೇ ಅಲ್ಲ, ಕೋರ್ಟ್ನಿಂದ ಹೊರ ಬರುವಾಗಲೂ ಪವಿತ್ರಾ ಗೌಡ ದರ್ಶನ್ ಕೈ ಹಿಡಿದುಕೊಂಡಿದ್ದು ಗಮನ ಸೆಳೆಯಿತು. ಪವಿತ್ರಾ ಬಲವಂತವಾಗಿ ದರ್ಶನ್ ಅವರಿಂದ ಮೊಬೈಲ್ ನಂಬರ್ ಪಡೆದುಕೊಂಡದ್ದೂ ಗಮನ ಸೆಳೆದ ದೃಶ್ಯವಾಗಿತ್ತು. ಸ್ನೇಹಿತ ಧನ್ವೀರ್ ಜೊತೆ ದರ್ಶನ್ ನ್ಯಾಯಾಲಯಕ್ಕೆ ಆಗಮಿಸಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು 17 ಆರೋಪಿಗಳನ್ನು ಬಂಧಿಸಿದ್ದರು. ಈಗಾಗಲೇ ಎಲ್ಲಾ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಲಾಗಿದೆ. ಅಂದು ಎಲ್ಲ ಆರೋಪಿಗಳೂ ಹಾಜರಿರಲು ನ್ಯಾಯಾಲಯ ಸೂಚಿಸಿದೆ.