ದಲಿತರೇಕೆ ಬಿಜೆಪಿ-ಮೋದಿಗೆ ಓಟು ಹಾಕುವುದಿಲ್ಲ?

Most read

ಅದಾವುದೇ ಸರ್ಕಾರವಿರಲಿ ಇಲ್ಲಿಯವರೆಗೆ ದಲಿತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡುವ ಸ್ಕಾಲರ್‌ಶಿಪ್‌ ಅನ್ನು ಕಿತ್ತುಕೊಂಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದಲಿತ ಮಕ್ಕಳ ಸ್ಕಾಲರ್‌ಶಿಪ್‌ ಅನ್ನು ಕಿತ್ತುಕೊಂಡಿದೆ- ನವೀನ್‌ ಮಾದಾರ್

ದಲಿತ ಮಕ್ಕಳಿಗೆ ಸ್ಕಾಲರ್‌ ಶಿಪ್‌ ನೀಡುವ ಯೋಜನೆ ಇಂದು ನಿನ್ನೆಯದಲ್ಲ. ಅದಕ್ಕೆ ಶತಮಾನಗಳ ಇತಿಹಾಸವಿದೆ. ಬರೋಡಾ ಮಹಾರಾಜರು ಸ್ಕಾಲರ್‌ಶಿಪ್‌ ನೀಡಿದ್ದರಿಂದಲೇ ಡಾ. ಬಿ. ಆರ್‌. ಅಂಬೇಡ್ಕರ್‌ ರವರು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವಂತಾದದ್ದು. ಅದಾವುದೇ ಸರ್ಕಾರವಿರಲಿ ಇಲ್ಲಿಯವರೆಗೆ ದಲಿತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡುವ ಸ್ಕಾಲರ್‌ಶಿಪ್‌ ಅನ್ನು ಕಿತ್ತುಕೊಂಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದಲಿತ ಮಕ್ಕಳ ಸ್ಕಾಲರ್‌ಶಿಪ್‌ ಅನ್ನು ಕಿತ್ತುಕೊಂಡಿದೆ.

2022 ರ ಫೆಬ್ರವರಿಯಲ್ಲಿ ಸಿಪಿಎಂ ಪಕ್ಷದ ಸಂಸದರಾದ ಡಾ. ಸಿವದಾಸನ್ ‘ಕಳೆದ ಐದು ವರ್ಷಗಳಲ್ಲಿ UGC-Univeristy Grants Commission – ಕೊಡುತ್ತಿರುವ ವಿದ್ಯಾರ್ಥಿ ವೇತನಗಳ ಸಂಖ್ಯೆ ಮತ್ತು ಮೊತ್ತ ಎರಡೂ ಕಡಿಮೆಯಾಗಿದೆಯೇ ಎಂದೂ, ಕಡಿಮೆಯಾಗಿದ್ದರೆ ಅದರ ವಿವರ ಮತ್ತು ಕಾರಣವನ್ನು ಕೊಡಿ’ ಎಂದೂ ಮೋದಿ ಸರ್ಕಾರವನ್ನು ಕೇಳಿದ್ದರು. ಅದಕ್ಕೆ ಮೋದಿ ಸರ್ಕಾರ ಕೊಟ್ಟಿರುವ ಉತ್ತರ ಬಹಳ ಚಿಂತಾಜನಕವಾಗಿದೆ.

ಮೋದಿ ಸರ್ಕಾರ ಉತ್ತರಿಸಿದ ಪ್ರಕಾರ 12ನೇ ಯೋಜನಾ ಅವಧಿಯ ನಂತರದಲ್ಲಿ ಸ್ನಾತಕ ಸ್ಕಾಲರ್ ಶಿಪ್‌ ವೇತನಗಳನ್ನು ಮರುಪರಿಶೀಲಿಸಿ ಅವನ್ನು ಸಕ್ಷಮ ಗೊಳಿಸುವ (ಅರ್ಥಾತ್ ಕಡಿತಗೊಳಿಸುವ) ಉದ್ದೇಶದಿಂದ ಸಮಿತಿಯೊಂದನ್ನು ರಚಿಸಲಾಗಿತ್ತೆಂದೂ, ಅದು ಕೊಟ್ಟ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆಯೆಂದೂ ಉತ್ತರಿಸಿದೆ.

ಜೊತೆಗೆ ಕಳೆದ ಐದು ವರ್ಷಗಳಲ್ಲಿ UGC ಕೊಡುತ್ತಿದ್ದ ವಿದ್ಯಾರ್ಥಿ ವೇತನಗಳಲ್ಲಿ ಆಗಿರುವ ಬದಲಾವಣೆಯ ಪಟ್ಟಿಯನ್ನು ಕೊಟ್ಟಿದೆ. ಈ ಮಾಹಿತಿಯ ಪ್ರಕಾರ 2017-18 ರಲ್ಲಿ  581 ಸಂಶೋಧಕರಿಗೆ 26 ಕೋಟಿ ಮೊತ್ತದ ಡಾ. ರಾಧಾಕೃಷ್ಣನ್ ಪೋಸ್ಟ್‌ ಡಾಕ್ಟೊರಲ್ ಫೆಲೋಶಿಪ್ ದೊರೆತಿದ್ದರೆ, 2020-21 ನೇ ಸಾಲಿನಲ್ಲಿ ಅದನ್ನು ಕೇವಲ 200 ವಿದ್ಯಾರ್ಥಿಗಳಿಗೆ ಇಳಿಸಲಾಗಿದೆ. ಅಂದರೆ ಶೇ. 60 ರಷ್ಟು ಕಡಿತ ಮಾಡಲಾಗಿದೆ.

SC-ST ಪೋಸ್ಟ್‌ ಡಾಕ್ಟೊರಲ್ ಸ್ಕಾಲರ್‌ಶಿಪ್ ವಿದ್ಯಾರ್ಥಿ ವೇತನಗಳ ಪರಿಸ್ಥಿತಿ ಇನ್ನೂ‌ ಗಂಭೀರವಾಗಿದೆ. 2017-18ನೇ ಸಾಲಿನಲ್ಲಿ UGC ಯು 620 SC-ST ವಿದ್ಯಾರ್ಥಿಗಳಿಗೆ 28.66 ಕೋಟಿಯಷ್ಟು ವಿದ್ಯಾರ್ಥಿ ವೇತನವನ್ನು ನೀಡಲಾಗಿದ್ದರೆ, 2020-21 ನೇ ಸಾಲಿನಲ್ಲಿ 332 SC-ST ವಿದ್ಯಾರ್ಥಿಗಳಿಗೆ ಕೇವಲ 17.58 ಕೋಟಿಯಷ್ಟು ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ. ಅಂದರೆ ಶೇ. 50 ರಷ್ಟು ಕಡಿತ ಮಾಡಲಾಗಿದೆ.

ಅದೇ ರೀತಿ ಪದವಿ ಹಂತದಲ್ಲಿ ದಲಿತ ವಿದ್ಯಾರ್ಥಿಗಳಿಗೆ 2017-18 ರಲ್ಲಿ 215.97 ಕೋಟಿ ಮೊತ್ತದಷ್ಟು ವಿದ್ಯಾರ್ಥಿ ವೇತನಗಳು 10,877 ದಲಿತ ವಿದ್ಯಾರ್ಥಿಗಳಿಗೆ ಸಿಕ್ಕಿತ್ತು. 2020-21 ರಲ್ಲಿ ಅದು ಶೇ. 70 ರಷ್ಟು ಕಡಿತವಾಗಿ ಕೇವಲ 3,986 ದಲಿತ ವಿದ್ಯಾರ್ಥಿಗಳಿಗೆ ಕೇವಲ 133.07 ಕೋಟಿ ವಿದ್ಯಾರ್ಥಿ ವೇತನ ಸಿಕ್ಕಿದೆ.

ಈ ಮೂಲಕ ಮೋದಿ ಸರ್ಕಾರವು ತನ್ನ ಹತ್ತು ವರ್ಷ ಆಡಳಿತದಲ್ಲಿ ದಲಿತ ಮಕ್ಕಳನ್ನು ಶಿಕ್ಷಣದಿಂದ ದೂರವಿಡುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿದೆ.

ಇಂತಹ ಬಿಜೆಪಿ-ಮೋದಿ ಪಕ್ಷಕ್ಕೆ ದಲಿತರು ಓಟು ಹಾಕಲಾರರು

ನವೀನ್‌ ಮಾದಾರ್

ಕಾರಣ ಒಂದನ್ನೂ ಓದಿದಲಿತರೇಕೆ ಬಿಜೆಪಿ-ಮೋದಿಗೆ ಓಟು ಹಾಕುವುದಿಲ್ಲ?

More articles

Latest article