ಭಾರತದ ಆರ್ಥಿಕತೆ ಐಸಿಯುನಲ್ಲಿದೆ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ನವದೆಹಲಿ: ಭಾರತದ ಆರ್ಥಿಕತೆ ಐಸಿಯುನಲ್ಲಿದೆ ಎನ್ನುವುದು ಭಾರತೀಯರೆಲ್ಲರಿಗೂ ತಿಳಿದ ವಿಚಾರವೇ ಆಗಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಇಂದು ಛೇಡಿಸಿದ್ದಾರೆ

ಸಂಸತ್ ಭವನದ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಶೇ. 25ಕ್ಕಿಂತ ಹೆಚ್ಚು ಯುವಜನತೆ ನಿರುದ್ಯೋಗದಿಂದ ಬಳಲುತ್ತಿದ್ದಾರೆ. ಪತ್ರಿಕಾ ಸ್ವಾತಂತ್ರ್ಯ, ಉತ್ಪಾದನೆಯಂತಹ ವಲಯಗಳ ಜಾಗತಿಕ ಸೂಚ್ಯಂಕದಲ್ಲೂ ನಿರಂತರ ಕುಸಿತು ಕಾಣುತ್ತಿದೆ ಎಂದು ಹೇಳಿದ್ದಾರೆ.

ಬಹಳ ದಿನಗಳ ಹಿಂದಿನಿಂದಲೂ ಈ ಕಟುಸತ್ಯವನ್ನು ಹೇಳುತ್ತಲೇ ಬಂದಿದ್ದೇವೆ. ಭಾರತದ ಆರ್ಥಿಕತೆ ಐಸಿಯುನಲ್ಲಿದೆ. ಆದರೆ ವಿರೋಧ ಪಕ್ಷಗಳು ಅದನ್ನು ಹೇಳಿದಾಗ ರಾಷ್ಟ್ರ ವಿರೋಧಿಗಳಾಗುತ್ತಾರೆ. ಈಗ ಪ್ರಧಾನಿ ಅವರ ಆಪ್ತ ಸ್ನೇಹಿತನೇ ಇದನ್ನು ಹೇಳಿದ್ದಾರೆ. ಹಾಗಾಗಿ ಈಗಾಲಾದರೂ ಪ್ರಧಾನಿ ಬಗ್ಗೆ ಹೆಚ್ಚಿನ ಗಮನ ವಹಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಭಾರತದ ವಿರುದ್ಧ ಅಮೆರಿಕದ ಅಧ್ಯಕ್ಷರು ಹೇಳಿಕೆ ನೀಡಿರುವುದು ಮತ್ತು ಸುಂಕ ಹಾಗೂ ದಂಡ ಪ್ರಹಾರ ಮಾಡಿರುವುದು ನಿಜಕ್ಕೂ ಅವಮಾನಕರ ಎಂದೂ ಮಹುವಾ ಮೊಯಿತ್ರಾ  ಹೇಳಿದ್ದಾರೆ.

More articles

Latest article

Most read