ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೊದಲ್ಲಿ ನಿನ್ನೆ 9.66 ಲಕ್ಷ ಜನರು ಪ್ರಯಾಣಿಸಿದ್ದು, ಇದು ಹೊಸ ದಾಖಲೆಯಾಗಿದೆ ಎಂದು ಬಿಎಂ ಆರ್ ಸಿಎಲ್ ಪ್ರಕಟಣೆ ತಿಳಿಸಿದೆ.
ಐಪಿಎಲ್ ವಿಜೇತರಾದ ಆರ್ ಸಿ ಬಿ ತಂಡಕ್ಕೆ ವಿಧಾನ ಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮಕ್ಕೆ ಲಕ್ಷಾಂತರ ಅಭಿಮಾನಿಗಳು ಹರಿದು ಬಂದಿದ್ದರಿಂದ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸದವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ನಿನ್ನೆ ಒಂದೇ ದಿನ 9,66,732 ಪ್ರಯಾಣಿಕರು ಮೆಟ್ರೊದಲ್ಲಿ ಪ್ರಯಾಣಿಸಿದ್ದರು. ಮಾರ್ಗ 1 ರಲ್ಲಿ (ನೇರಳೆ) 4,78,334 ಪ್ರಯಾಣಿಕರು ಮತ್ತು ಮಾರ್ಗ 2 ರಲ್ಲಿ (ಹಸಿರು) 2,84,674 ಜನರು ಪ್ರಯಾಣಿಸಿದ್ದಾರೆ ಕೆಂಪೇಗೌಡ (ಕೆಜಿಡಬ್ಲ್ಯೂಎ) ಇಂಟರ್ ಚೇಂಜ್ ನಿಲ್ದಾಣದಲ್ಲಿ 2,03, 724 ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂದು ತಿಳಿಸಿದೆ.