ಸ್ನೇಹಿತನ ಪುತ್ರಿಯ ಮೇಲೆ ಅತ್ಯಾ*ಚಾರ; ಆರೋಪಿ ಬಂಧನ

ಬೆಂಗಳೂರು: ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸ್ನೇಹಿತನ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತೋಟದಗುಡ್ಡದಹಳ್ಳಿಯ 44 ವರ್ಷದ ನಿವಾಸಿ ರವಿ ಎಂಬಾತನೇ ಆರೋಪಿ. ಈತನ
ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಂತ್ರಸ್ತ ಬಾಲಕಿಯ ತಂದೆ ಆರೋಪಿ ಬಳಿ 70 ಸಾವಿರ ರೂ. ಸಾಲ ಪಡೆದಿರುತ್ತಾರೆ. ಈ ಪೈಕಿ 30 ಸಾವಿರ ರೂ. ಸಾಲ ತೀರಿಸಿ ಉಳಿದ ಹಣ ಮತ್ತು ಬಡ್ಡಿಯನ್ನು ತೀರಿಸಿರುವುದಿಲ್ಲ. ಸಾಲ ವಸೂಲಿ ನೆಪದಲ್ಲಿ ಸಂತ್ರಸ್ತೆಯ ಮನೆಗೆ ಆಗಾಗ್ಗೆ ಬರುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article

Most read