ನೂರು ವರ್ಷಗಳ ಹಿಂದೆ ಅವರು ಆಂಭಿಸಿದ ಸ್ವಾಭಿಮಾನಿ ಹೋರಾಟವು ಸ್ವಾತಂತ್ರ್ಯವನ್ನು ಮರುವ್ಯಾಖ್ಯಾನಿಸಿದ್ದರ ಪರಿಣಾಮ ಸಂಕೋಲೆ ಕಳಚಿ ಘನತೆ ಹೆಚ್ಚಿಸಿತ್ತು. ಪರಿಣಾಮ ಇಂದು ಆ ಕ್ರಾಂತಿಕಾರಿ ಬೆಳಕು ಜಗತ್ತಿನ್ನೇ ಬೆಳಗುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಸ್ವಾಭಿಮಾನಿ ಆಂದೋಲನದ ಶತಮಾನೋತ್ಸವ ಸಂದರ್ಭದಲ್ಲಿ ಚೆನ್ನೈ: ಶತಮಾನದ ಹಿಂದೆ ಇ.ವಿ. ರಾಮಾಸ್ವಾಮಿ ಪೆರಿಯಾರ್ ಅವರು ಪ್ರತಿಪಾದಿಸಿದ ಜಾತಿ ವಿರೋಧಿ ಸುಧಾರಣೆಗಳು, ಲಿಂಗ ಸಮಾನತೆ ಮತ್ತು ವೈಚಾರಿಕತೆ, ವಿಶ್ವದಾದ್ಯಂತ ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಅವರು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸೇಂಟ್ ಆಂಥೋನಿ ಕಾಲೇಜಿನಲ್ಲಿ ಪೆರಿಯಾರ್ ಅವರ ಭಾವಚಿತ್ರ ಅನಾವರಣಗೊಳಿಸಿ ಅವರ ಚಿಂತನೆಗಳನ್ನು ಕುರಿತು ಮಾತನಾಡಿದರು. ಭಾರತೀಯ ಕಲಾವಿದ ತೊಟ್ಟ ಥರಣಿ ಅವರು ಪೆರಿಯಾರ್ ಅವರ ಭಾವಚಿತ್ರವನ್ನು ರಚಿಸಿದ್ದಾರೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಪೆರಿಯಾರ್ ಅವರ ಭಾವಚಿತ್ರ ಅನಾವರಣಕ್ಕೆ ಅವಕಾಶ ದೊರೆತಿರುವುದು ನನಗೆ ಸಿಕ್ಕ ಅತಿ ದೊಡ್ಡ ಗೌರವವಾಗಿದೆ. ಪೆರಿಯಾರ್ ಅವರು ಹಚ್ಚಿದ ಕ್ರಾಂತಿಕಾರಿ ಬೆಳಕು ಇಂದು ತಮಿಳುನಾಡು, ಭಾರತವನ್ನು ದಾಟಿ ಜಗತ್ತಿನಅದ್ಯಂತ ಬೆಳಗುತ್ತಿದೆ ಎಂದರು.