ಮಳೆ ಹೆಚ್ಚುತ್ತಿದ್ದಂತೆ ಹಾವು ಕಡಿತದ ಪ್ರಕರಣಗಳೂ ಹೆಚ್ಚಳ

Most read

ಬೆಂಗಳೂರು: ಈ ವರ್ಷದ ಅಕ್ಟೋಬರ್ ವೇಳೆಗೆ ರಾಜ್ಯದಲ್ಲಿ 10,260 ಹಾವು ಕಡಿತದ ಪ್ರಕರಣಗಳು ಸಂಭವಿಸಿದ್ದು, 80 ಮಂದಿ ಅಸು ನೀಗಿರುವ ಪ್ರಕರಣಗಳು ವರದಿಯಾಗಿವೆ. ಹಾಸನದಲ್ಲಿ ಅತಿ ಹೆಚ್ಚು ಅಂದರೆ 722 ಮತ್ತು ತುಮಕೂರಿನಲ್ಲಿ 9 ಪ್ರಕರಣಗಳು ವರದಿಯಾಗಿವೆ. 2023ರಲ್ಲಿ 6,587 ಹಾವು ಕಡಿದಿದ್ದ ಮತ್ತು 19 ಸಾವುಗಳು ಸಂಭವಿಸಿದ್ದವು.


ಸಾಮಾನ್ಯವಾಗಿ ಮಳೆಯಾದರೆ ಹಾವುಗಳ ಕಾಟ ಹೆಚ್ಚಾಗುತ್ತದೆ. ಬೆಂಗಳೂರು ಕೇಂದ್ರೀಯ ವಿಹಾರದ ವಸತಿ ಸಮುಚ್ಚಯದಲ್ಲಿ ವಾರಗಟ್ಟಲೆ ನೀರು ನಿಂತಿದ್ದರಿಂದ ಆಗಾಗ್ಗೆ ಹಾವುಗಳು ಕಾಣಿಸಿಕೊಳ್ಳುತ್ತಿವೆ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ. ಬೇಸಿಗೆಯ ಭಾರಿ ಬಿಸಲು ಮತ್ತು ಭಾರಿ ಮಳೆಯಿಂದಾಗಿ ಹಾವುಗಳ ಕಾಟ ಹೆಚ್ಚಾಗಿದೆ. ಇಂತಹ ಸಂದರ್ಭಗಳಲ್ಲಿ ಹಾವುಗಳು ತಮ್ಮ ಬಿಲದಿಂದ ಆಚೆ ಬರುತ್ತವೆ. ವಸತಿ ಪ್ರದೇಶ ಮತ್ತು ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಉರಗ ತಜ್ಞರು ಅಭಿಪ್ರಾಯಪಡುತ್ತಾರೆ.

ಸೆಪ್ಟಂಬರ್ – ಅಕ್ಟೋಬರ್ ಅವಧಿಯಲ್ಲಿ ಕೃಷಿಕರು ತಮ್ಮ ಜಮೀನುಗಳಿಗೆ ಕೃಷಿ ಕೆಲಸಗಳಿಗೆ ಹೋದಾಗ ಹಾವು ಕಡಿತಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಜನವರಿಯಿಂದ ಏಪ್ರಿಲ್ ವರೆಗೆ 500 ಹಾವು ಕಡಿತದ ಪ್ರಕರಣಗಳು ವರದಿಯಾಗಿದ್ದರೆ ಜೂನ್ ತಿಂಗಳಿನಿಂದ ಅಕ್ಟೋಬರ್ ವರೆಗೆ 1,300 ಪ್ರಕರಣಗಳು ದಾಖಲಾಗಿವೆ.


ಸಾಕಷ್ಟು ಸಂಖ್ಯೆಯಲ್ಲಿ ನೈಸರ್ಗಿಕ ಬಿಲಗಳು ಮತ್ತು ಹುತ್ತಗಳು ಇಲ್ಲದ ಕಾರಣಕ್ಕೆ ಹಾವುಗಳು ಸ್ವಾಭಾವಿಕವಾಗಿ ಇಲಿ ಮತ್ತು ಕಪ್ಪೆಗಳನ್ನು ಹುಡುಕಿಕೊಂಡು ಚರಂಡಿ ಮತ್ತು ನೀರು ಹರಿಯುವ ಪ್ರದೇಶಗಳತ್ತ ಹರಿದು ಬರುತ್ತವೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

More articles

Latest article