ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಭಾನುವಾರವೂ ಮಳೆಯಾಗಿದೆ. ಇದರಿಂದ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನಾಳೆಯೂ ಭಾರಿ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ 13 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಿರುವುದು ಈಗ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ,ದಾವಣಗೆರೆ, ಶಿವಮೊಗ್ಗ, ಹಾವೇರಿ, ಗದಗ, ಬಳ್ಳಾರಿ, ಬೆಳಗಾವಿ, ಧಾರವಾಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ‘ ಯೆಲ್ಲೂ ಅಲರ್ಟ್ ಘೋಷಿಸಲಾಗಿದೆ.
ಈ ಜಿಲ್ಲೆಗಳ ಕೆಲವಡೆ ಗುಡುಗು ಸಹಿತ ಭಾರಿ ಮಳೆಯಾಗುವ ಸಂಭವವಿದೆ. ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನ ಉಳಿದ ಜಿಲ್ಲೆಗಳ ಹಲವೆಡೆ ಸಾಧಾರಣ ಮಲೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಎಲ್ಲೆಲ್ಲಿ ಏನೇನಾಗಿದೆ?
ಬೆಂಗಳೂರಲ್ಲಿ ಭಾರೀ ಮಳೆಗೆ K.R ಮಾರ್ಕೆಟ್ ಕೆರೆಯಂಅಗಿದೆ. ಇದರಿಂದಾಗಿ K.R ಮಾರ್ಕೆಟ್-ಟೌನ್ ಹಾಲ್ ರಸ್ತೆ ಜಲಾವೃತಗೊಂಡಿದ್ದು, ರಸ್ತೆ ಮೇಲೆ 3-4 ಅಡಿಯಷ್ಟು ನಿಂತಿರುವ ಘಟನೆ ವರದಿಯಾಗಿದೆ. ವಿಲ್ಸನ್ ಗಾರ್ಡನ್ BTS ಮುಖ್ಯರಸ್ತೆ ಜಲಾವೃತವಾಗಿದ್ದು, ನೀರಿನಲ್ಲಿ ಸವಾರರ ಪರದಾಡಿದ್ದಾರೆ.
ಬೆಂಗಳೂರಿನ ಜೆಜೆಆರ್ ನಗರದಲ್ಲಿ ಚರಂಡಿ ಅಡ್ಡಗೋಡೆ ಕುಸಿತದಿಂದಾಗಿ ಹತ್ತು ಹಲವು ಮನೆಗೆ ನೀರು ನುಗ್ಗಿದೆ. ಬಿ.ವಿ.ಕೆ. ಅಯ್ಯಂಗಾರ್ ರಸ್ತೆ ಜಲಾವೃತಗೊಂಡು, ರಸ್ತೆಯಲ್ಲಿನ ಗುಂಡಿಯಲ್ಲಿ 2 ಆಟೋಗಳು ಸಿಲುಕಿಕೊಂಡಿದ್ದು, ಚಾಲಕರು ಪರದಾಡಿದ್ದಾರೆ. ನಂತರ ಪ್ರಯಾಣಿಕರ ನೆರವಿನಿಂದ ಆಟೋ ಮೇಲೆತ್ತಿದ ಚಾಲಕರು.
ಬೆಂಗಳೂರಿನ ಓಕಳೀಪುರಂ ಅಂಡರ್‌ಪಾಸ್ ಮುಳುಗಡೆಯಾಗಿದ್ದು, ಹಲವು ಸವಾರರು ಅಲ್ಲಿಯೇ ಸಿಲುಕಿ ಪರದಾಡಿದ್ದಾರೆ. ಇನ್ನೂ ನಾಗದೇವನಹಳ್ಳಿಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ ಸೃಷ್ಟಿಯಾಗಿದೆ. ನೀರನ್ನು ಹೊರ ಹಾಕಲು ಜನರು ಹರಸಾಹಸ ಪಟ್ಟಿದ್ದಾರೆ.
ಮಲ್ಲೇಶ್ವರಂ ಸ್ಯಾಕಿ ರಸ್ತೆ ಮಳೆಯಿಂದಾಗಿ ಜಲಾವೃತವಾಗಿದ್ದು, ವಾಹನ ಸವಾರರು ಇದರಿಂದಾಗಿ ಪರದಾಡಿದ್ದಾರೆ. ಸಂಪಂಗಿನಗರದಲ್ಲಿ ರಸ್ತೆ ಜಲಾವೃತವಾಗಿದ್ದು, ಕೆರೆಯಂತಾದ ಫ್ಲೈಓವರ್ ಪಕ್ಕದ ರಸ್ತೆಯಲ್ಲಿ ಸಾಲು ಸಾಲು ವಾಹನಗಳಯ ಕೆಟ್ಟು ನಿಂತಿರುವ ಘಟನೆ ವರದಿಯಾಗಿದೆ. ಪೊಲೀಸ್ ಠಾಣೆಗೂ ನುಗ್ಗಿದ ನೀರು.. ಹಲವು ಮನೆಗಳು ಜಲಾವೃತ.
ಬೆಂಗಳೂರಿನಲ್ಲಿ ಭಾರಿ ಮಳೆಗೆ ಅವಾಂತರ ಹಿನ್ನಲೆ. ಬೆಂಗಳೂರಿನಲ್ಲಿ ಇಂದು ಎಲ್ಲಾ ಶಾಲೆಗಳಿಗೆ, ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ನೀಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಆದೇಶಿದ್ದಾರೆ.
ಜಯನಗರ 4th ಬ್ಲಾಕ್ ನಲ್ಲಿ ಮಳೆಯಿಂದಾಗಿ ಮರ ಬಿದ್ದು ವಿದ್ಯುತ್ ಕಂಬಗಳು ನೆಲ ಕಚ್ಚಿವೆ. ಇದರಿಂದಾಗಿ ಸಾರ್ವಜನಿಕ ರಸ್ತೆ ಸಂಪರ್ಕಕ್ಕೆ ತೊಂದರೆ ಆಗಿದೆ. ಜೊತೆಗೆ ವಿದ್ಯುತ್ ಇಲ್ಲದೆ ಬೆಳ್ಳಂಬೆಳಿಗ್ಗೆ ಹೈರಾಣಾಗಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಕಳೆದ ರಾತ್ರಿ ಗಾಳಿ-ಮಳೆ. ಮಳೆಗೆ ನೆಲಕಚ್ಚಿದ ಬೆಳೆ, ರೈತರು ಕಂಗಾಲು. ಕಾರಟಗಿ ತಾಲೂಕಿನ ಉಳೇನೂರು ಗ್ರಾಮದಲ್ಲಿ ಘಟನೆ ವರದಿಯಾಗಿದೆ.
ಹಾವೇರಿ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆ ಹಿನ್ನೆಲೆ. ಹಾವೇರಿ, ಸವಣೂರು ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಪಂಡರಾಪುರಕ್ಕೆ ತೆರಳುತ್ತಿದ್ದ 30 ಭಕ್ತರು ಹಾವೇರಿಕೆ ಮಳೆಗೆ ಸಿಲುಕಿಕೊಂಡಿದ್ದರು. ಅವರನ್ನು ರಕ್ಷಣೆ ಮಾಡಲಾಗಿದೆ.
ಧಾರಾಕಾರ ಮಳೆಗೆ ತತ್ತರಿಸಿದ ಕೊಡಗು ಜಿಲ್ಲೆಯ ಜನರು. ವಿರಾಜಪೇಟೆ ಪಟ್ಟಣದ ಮಾರುಕಟ್ಟೆ ರಸ್ತೆ ಸಂಪೂರ್ಣ ಜಲಾವೃತ. ವಿರಾಜಪೇಟೆಯಲ್ಲಿ ಕೆಲ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದ್ದು ಹಲವು ನಷ್ಟಗಳು ಆಗಿದೆ.
ಗದಗ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ರೈತರ ಸಂಕಷ್ಟ ಎದುರಾಗಿದೆ. ಜಮೀನಿನಲ್ಲಿ ಈರುಳ್ಳಿ ಕೊಳೆಯುತ್ತಿದ್ದು, ರೈತರ ಕಣ್ಣೀರು ಹಾಕುತ್ತಿದ್ದಾರೆ. ಈ ಘಟನೆ ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ನಡೆದಿದೆ..
ಚಾಮರಾಜನಗರ ಜಿಲ್ಲೆಯಲ್ಲಿ ಹಲವೆಡೆ ಗಾಳಿ- ಮಳೆ. ಧರೆಗುರುಳಿದ ಬಾಳೆ, ತೆಂಗು, ವಿದ್ಯುತ್ ಕಂಬಗಳು. ಚಾಮರಾಜನಗರ ತಾಲೂಕಿನ ಹೊಸೂರು ಗ್ರಾಮದಲ್ಲಿ ಘಟನೆ.