ಮಳೆಯಿಂದ ಕರಾವಳಿಯಲ್ಲಿ ಮತ್ತೊಂದು ಅವಘಡ; ಕಟ್ಟಡ ಗೋಡೆ ಕುಸಿದು ವೃದ್ಧೆ ಸಾವು

ಕಳೆದ ಕೆಲವು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಹಲವು ಸಾವು ನೋವಿಗಳು ಸಂಭವಿಸುತ್ತಿವೆ. ನಿನ್ನೆ ದಕ್ಷಿಣ ಕನ್ಡದಲ್ಲಿ ಗೋಡೆ ಕುಸಿತದಿಂದಾಗಿ ನಾಲ್ವರು ಸಾವನಪ್ಪದ್ದ ಬೆನ್ನಲ್ಲೇ ಇಂದು ಹಳೆಯ ಕಟ್ಟಡದ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕಾರವಾರ ತಾಲೂಕಿನಲ್ಲಿ ನಡೆದಿದೆ.

ಕಾರವಾರ ತಾಲೂಕಿನ ಅಸ್ನೋಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರವ ತೊರ್ಲೆಬಾಗ ಮಜಿರೆಯ ನಿವಾಸಿಯಾಗಿರುವ  ಗುಲಾಬಿ ರಾಮಚಂದ್ರ ಮಾಂಜ್ರೇಕರ (70) ಮೃತ ಮಹಿಳೆ. ಚಿತ್ತಾಕುಲದಲ್ಲಿ ಹಣ್ಣು ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಇವರು ಗುರುವಾರ ಮಧ್ಯಾಹ್ನ ತಮ್ಮ‌ ಮನೆಯ ಪಕ್ಕದಲ್ಲಿದ್ದ ಹಳೆಯ ಕಟ್ಟಡದಲ್ಲಿ ಹಸುಗಳಿಗೆ ಗಂಜಿ ನೀಡಲು ತೆರಳಿದ್ದಾರೆ. ಈ ವೇಳೆ, ಮಳೆಗೆ ನೆನೆದ ಮಣ್ಣಿನ ಗೋಡೆ ಕುಸಿದಿದ್ದು, ಮಣ್ಣಿನ‌ ಗೋಡೆಯೊಳಗೆ ಮಹಿಳೆ ಸಂಪೂರ್ಣವಾಗಿ ಮುಚ್ಚಿಹೋಗಿ ಸಾವನಪ್ಪಿದ್ದಾರೆ.

ರಾತ್ರಿ ಸುರಿದ ಮಳೆಯಿಂದಾಗಿ ಗೋಡೆಯ ಮಣ್ಣು ಕೊಚ್ಚಿ ಹೋಗಿ ಮಹಿಳೆಯ ಕಾಲು ಸ್ಥಳೀಯರಿಗೆ ಕಾಣಿಸಿದೆ. ಬಳಿಕ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More articles

Latest article

Most read