ಯೂಟ್ಯೂಬರ್‌ ಸಮೀರ್ ನಿವಾಸದ ಮೇಲೆ ಪೊಲೀಸರ ದಾಳಿ; ಕಪೋಲಕಲ್ಪಿತ ಸುದ್ದಿ ಎಂದ ಆಪ್ತರು

Most read

ಬೆಂಗಳೂರು: ಯೂಟ್ಯೂಬರ್‌ ಸಮೀರ್ ಅವರ ಮನೆಗೆ ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ (ಎಸ್ಐಟಿ) ಅಧಿಕಾರಿಗಳು  ದಾಳಿನಡೆಸಿದ್ದಾರೆ ಎನ್ನುವುದು ಸುಳ್ಳು ಎಂದು ಅವರ ಆಪ್ತರು ಸ್ಪಷ್ಟಪಡಿಸಿದ್ದಾರೆ.

ಬನ್ನೇರುಘಟ್ಟ ಬಳಿಯ ಹುಲ್ಲಹಳ್ಳಿಯಲ್ಲಿರುವ ಸಮೀರ್‌ ನಿವಾಸಕ್ಕೆ ಇಂದು ಪೊಲೀಸರು ಆಗಮಿಸಿದ್ದಾರೆ.

ವಿಡಿಯೋ ಸಂಬಂಧ ನಡೆಯುತ್ತಿರುವ ವಿಚಾರಣೆಯಲ್ಲಿ ಮಹಜರು  ಮಾಡುವ ಸಂಬಂಧ ಮನೆಗೆ ಬರುವುದಾಗಿ ಪೋಲೀಸರು ಸಾಕಷ್ಟು ಮುಂಚಿತವಾಗಿಯೇ ಸಮೀರ್ ಗೆ ಮಾಹಿತಿ ನೀಡಿದ್ದರು. ಮಹಜರು ಮತ್ತು ಹಾರ್ಡ್ ಡಿಸ್ಕ್ ವಶಕ್ಕೆ ತೆಗೆದುಕೊಳ್ಳುವ ಸಹಜವಾದ ಪ್ರಕ್ರಿಯೆ ಇದು‌. ಇದು ದಾಳಿಯಲ್ಲ. ಸಮೀರ್ ಅವರ ಲಭ್ಯತೆಯ ಬಗೆಗೆ ಪೊಲೀಸರೇ ಸಮೀರ್ ಅವರಿಂದ ಮಾಹಿತಿ ಪಡದುಕೊಂಡು ಪೂರ್ವನಿಗಧಿಯಂತೆ ಮನೆಗೆ ಭೇಟಿ ನೀಡಿದ್ದಾರೆ. ದಾಳಿ, ಶಾಕ್ಎನ್ನುವುದೆಲ್ಲವೂ ಸುಳ್ಳು ಎಂದು ತಿಳಿಸಿದ್ದಾರೆ.

ಆದರೆ ಮಾಧ್ಯಮಗಳಲ್ಲಿ ಸರ್ಚ್‌ ವಾರೆಂಟ್‌ ಪಡೆದು ಬೆಂಗಳೂರಿಗೆ ಬಂದ ಬೆಳ್ತಂಗಡಿ ಪೊಲೀಸರು… ಯೂಟ್ಯೂಬರ್‌ ಸಮೀರ್‌ ನಿವಾಸಕ್ಕೆ ಲಗ್ಗೆ ಇಟ್ಟ ಪೊಲೀಸರು… ಪೊಲೀಸರ ತನಿಖೆಗೆ ಸಮೀರ್‌ ಸರಿಯಾಗಿ ಸಹಕರಿಸದಿದ್ದಕ್ಕೆ ದಾಳಿ… ಸಮೀರ್‌ ಮನೆಯಲ್ಲಿ ಬೆಳ್ತಂಗಡಿ ಪೊಲೀಸರಿಂದ ದಾಖಲೆ ಶೋಧ… ಬೆಳ್ತಂಗಡಿಯಲ್ಲಿ ದಾಖಲಾಗಿರೋ ಕೇಸ್‌ ಸಂಬಂಧ ತಲಾಶ್.‌…ಎಂದೆಲ್ಲಾ ಕಪೋಲಕಲ್ಪಿತ ವರದಿಗಳು ಪ್ರಸಾರವಾಗುತ್ತಿವೆ.

More articles

Latest article